Get Updates
Get notified of breaking news, exclusive insights, and must-see stories!

Bandipur: ಬಂಡೀಪುರ ಅರಣ್ಯ ಕಾಪಾಡುವಲ್ಲಿ ಅಧಿಕಾರಿಗಳ ಶ್ರಮ ಶ್ಲಾಘನೀಯ!

ಚಾಮರಾಜನಗರ, ಫೆಬ್ರವರಿ 10: ಅಭಯಾರಣ್ಯದಲ್ಲಿ ಸದಾ ಹಸಿರು ನೆಲೆಸುವಂತೆ ಮಾಡುವ ಮತ್ತು ಅಗ್ನಿ ಅನಾಹುತದಿಂದ ಬೋಳಾಗಿದ್ದ ಪ್ರದೇಶಲ್ಲಿ ಅರಣ್ಯವನ್ನು ಮರುಸ್ಥಾಪಿಸಲು ಅರಣ್ಯಾಧಿಕಾರಿಗಳು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದರಿಂದ ಇವತ್ತು ನಾವು ಬೋಳಾಗಿದ್ದ ಪ್ರದೇಶದಲ್ಲಿ ಹಸಿರು ಕಾಣಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.

ಒಂದು ಕಾಲದಲ್ಲಿ ನಾಗರಹೊಳೆ ಮತ್ತು ಬಂಡೀಪುರ ಅಗ್ನಿ ಅನಾಹುತದಿಂದ ಸಾಕಷ್ಟು ನಷ್ಟ ಅನುಭವಿಸಿದೆ. ಪ್ರಾಣಿ ಪಕ್ಷಿ, ಜೀವ ಸಂಕುಲ, ಗಿಡಮರಗಳು ನಾಶವಾಗಿ ಹೋಗಿದ್ದವು. ಆದರೆ ಮತ್ತೆ ಅರಣ್ಯವನ್ನು ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಕಾಪಾಡಿಕೊಂಡರೆ ಮಳೆಗಾಲದಲ್ಲಿ ಅರಣ್ಯದ ಬೆಳವಣಿಗೆಗೆ ಹಲವು ಕಸರತ್ತುಗಳನ್ನು ಮಾಡಲಾಗಿತ್ತು.

Bandipur Forest Officials Achieve Remarkable Success in Ecosystem Restoration

ಬಂಡೀಪುರದಲ್ಲಿ ಹಲವು ಕಡೆ ಲಂಟಾನ ತೆರವುಗೊಳಿಸಿ ಹುಲ್ಲು ಬೆಳೆಸುವ ಕೆಲಸವನ್ನು ಮಾಡಲಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಬಿದಿರು ಮತ್ತೆ ಹುಟ್ಟಿ ಬೆಳೆಯುತ್ತಿರುವುದರಿಂದ ಬೋಳಾಗಿದ್ದ ಸ್ಥಳದಲ್ಲಿ ಹಸಿರು ತುಂಬಿದೆ ಇದರ ನಡುವೆ ಅರಣ್ಯ ಹೊಸದೊಂದು ಪ್ರಯೋಗ ಮಾಡಿ ಸಕ್ಸಸ್ ಆಗಿದೆ ಎಂದರೆ ತಪ್ಪಾಗಲಾರದು. ಅದು ಕಾಡ್ಗಿಚ್ಚಿಗೆ ಸತ್ತಿರುವ ಮರಗಳ ಪೊಟರೆಗಳಲ್ಲಿ ಪರಾವಲಂಬಿ ಗಿಡಗಳನ್ನು ನೆಟ್ಟು ಅವುಗಳನ್ನು ಮರಗಳನ್ನಾಗಿ ಬೆಳೆಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಸಾಮಾನ್ಯವಾಗಿ ದೊಡ್ಡ ಮರಗಳ ಪೊಟರೆಗಳಲ್ಲಿ ಗಿಡಗಳು ಹುಟ್ಟಿ ಬಳಿಕ ಅದೇ ಮರವನ್ನು ಆಶ್ರಯಿಸಿಕೊಂಡು ಹೆಮ್ಮರವಾಗಿ ಬೆಳೆಯುವುದು ಅರಣ್ಯಗಳಲ್ಲಿ ಕಂಡು ಬರುತ್ತವೆ. ಪಕ್ಷಿಗಳು ತಿಂದ ಹಣ್ಣುಗಳ ಬೀಜ ಅಥವಾ ಹಕ್ಕಿಗಳ ಹಿಕ್ಕೆಗಳಿಂದ ಬಿದ್ದ ಬೀಜಗಳು ಮರಗಳ ಪೊಟರೆಯಲ್ಲಿ ಉಳಿದು ಮಳೆ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬಳಿಕ ಮರವಾಗಿ ಬೆಳೆದು ನಿಲ್ಲುತ್ತವೆ. ಇದೊಂದು ನೈಸರ್ಗಿಕ ಕ್ರಿಯೆಯಾಗಿದೆ. ಆದರೆ ಬಂಡೀಪುರ ಅರಣ್ಯದಲ್ಲಿ ಈ ಹಿಂದೆ ಕಾಡ್ಗಿಚ್ಚು ಸಂಭವಿಸಿದ ವೇಳೆ ಬಹಳಷ್ಟು ಮರಗಳು ಬೆಂಕಿಗೆ ಸಿಲುಕಿ ಸತ್ತು ಹೋಗಿತ್ತು.

Bandipur Forest Officials Achieve Remarkable Success in Ecosystem Restoration

ಬೋಳಾಗಿದ್ದ ಅರಣ್ಯ ಹಸಿರಾಗಿದ್ದು ಹೇಗೆ?

ಇದರ ನಡುವೆ ಕೆಲವು ಮರಗಳು ಸತ್ತಿದ್ದರೂ ಬೀಳದ ಹಾಗೆಯೇ ನಿಂತಿತ್ತು. ಇಂತಹ ಮರಗಳು ಹಾಗೂ ದುರ್ಬಲಗೊಂಡಿರುವ ಮರಗಳನ್ನು ಹುಡುಕಿ ಅವುಗಳ ಪೊಟರೆಯಲ್ಲಿ ಕೃತಕವಾಗಿ ಬೀಜಗಳನ್ನು ಬಿತ್ತಿ ಗಿಡವಾಗಿ, ಮರವಾಗಿ ಬೆಳೆಸುವ ಪ್ರಯೋಗ ಮಾಡಿದ್ದು ಅದರಲ್ಲಿ ಯಶಸ್ವಿಯಾಗಿದ್ದು, ಇದರಿಂದ ಮತ್ತೆ ಅರಣ್ಯವನ್ನು ಬೆಳೆಸುವ ಕಾರ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಈ ಪ್ರಯೋಗ ಮಾಡಿದಾಗ ಹಲವು ರೀತಿಯ ಉಪಯೋಗಗಳನ್ನು ನಿರೀಕ್ಷೆ ಮಾಡಲಾಗಿತ್ತು. ಇದು ಯಶಸ್ಸಿಗೂ ಕಾರಣವಾಗಿದೆ.

ಪೊಟರೆಯಲ್ಲಿ ಬೆಳೆದು ಮರವಾಗುವ ಸಸ್ಯಗಳು ಹತ್ತಿ, ಆಲದಮರ, ಮತ್ತಿ, ಗೋಣಿ, ಬಸುರಿಯಾಗಿದ್ದು, ಇವು ಮರದ ಪೊಟರೆಯಲ್ಲಿರುವ ನೀರಿನ ಅಂಶ ಹಾಗೂ ಗೊಬ್ಬರವನ್ನು ಬಳಸಿಕೊಂಡು ಬೆಳೆಯುತ್ತಾ ಬೇರನ್ನು ಆಶ್ರಯ ಮರಗಳ ಮೂಲಕವೇ ಭೂಮಿಗೆ ತಲುಪಿಸಿ ಬಳಿಕ ಆಶ್ರಯ ಮರ ಸತ್ತರೂ ಈ ಮರಗಳು ಗಟ್ಟಿಯಾಗಿ ಭೂಮಿಯಲ್ಲಿ ಬೇರೂರಿ ನಿಲ್ಲುತ್ತವೆ. ಈ ಮರಗಳ ಹಣ್ಣು ಸೊಪ್ಪು ಎಲ್ಲವೂ ಸಸ್ಯಹಾರಿ ಪ್ರಾಣಿಗಳಿಗೆ ಆಹಾರವಾಗುವುದರಿಂದ ಕಾಡಿನಲ್ಲಿ ಮೇವಿನ ಕೊರತೆಯಾಗುವುದಿಲ್ಲ. ಜತೆಗೆ ಪರಿಸರ ಹಸಿರಾಗಲಿದೆ. ಇದನ್ನು ಅರಿತು ಅರಣ್ಯ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಿಂದ ಲಾಭವೂ ಆಯಿತು.

ಅಧಿಕಾರಿಗಳ ಶ್ರಮ ಖುಷಿಕೊಡುವ ವಿಚಾರ

ಕೆಲವು ವರ್ಷಗಳ ಹಿಂದೆ ಬಂಡೀಪುರ ವ್ಯಾಪ್ತಿಯ 13 ವಲಯಗಳಲ್ಲಿ ಕನಿಷ್ಟ 10 ಸಾವಿರ ಗಿಡಗಳನ್ನು ಬೆಳೆಸಿದ್ದು, ಒಂದು ವಲಯದಲ್ಲಿ ಗರಿಷ್ಠ ಎಂಟು ನೂರರಿಂದ ಸಾವಿರ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಇಲಾಖೆ ಹಮ್ಮಿಕೊಂಡಿತ್ತು. ಇನ್ನೊಂದೆಡೆ ಹುಲ್ಲು ನೀರಿನಾಶ್ರಯ ಇರುವ ಪ್ರದೇಶಗಳಲ್ಲಿ ಹುಲ್ಲು ನೆಡುವ ಮೂಲಕ ಸಸ್ಯಹಾರಿ ಪ್ರಾಣಿಗಳಿಗೆ ಆಹಾರ ಒದಗಿಸುವ ಕೆಲಸವನ್ನು ಮಾಡಲಾಗಿತ್ತು. ಇದರಲ್ಲಿ ಯಶಸ್ವಿಯೂ ಆಗಿದೆ. ಬಂಡೀಪುರ ಅರಣ್ಯದಲ್ಲಿ ಅರಣ್ಯಾಧಿಕಾರಿಗಳು ಒಂದಲ್ಲ ಒಂದು ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಬರುತ್ತಿರುವುದು ನಿಜಕ್ಕೂ ಖುಷಿಕೊಡುವ ವಿಚಾರವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+