• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಖಿಲ್ ಗೆಲುವಿಗಾಗಿ ಟೆಂಪಲ್ ರನ್ ಮುಂದುವರೆಸಿದ ಅನಿತಾ ಕುಮಾರಸ್ವಾಮಿ

|
   ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಅನಿತಾ ಕುಮಾರಸ್ವಾಮಿ ಟೆಂಪಲ್ ರನ್

   ಚಾಮರಾಜನಗರ , ಏಪ್ರಿಲ್ 11: ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ತಾಯಿ ಅನಿತಾ ಕುಮಾರಸ್ವಾಮಿ ಅವರು ಟೆಂಪಲ್ ರನ್ ಮುಂದುವರೆಸಿದ್ದಾರೆ. ಚುನಾವಣಾ ಪ್ರಚಾರದ ಒತ್ತಡದ ನಡುವೆ ಪವಾಡ ಪುರುಷ ಮಲೆಮಹದೇಶ್ವರನ ಕ್ಷೇತ್ರಕ್ಕೆ ಭೇಟಿ ನೀಡಿ ಮಲೆಮಹದೇಶ್ವರನಿಗೆ ನಮೋ ಎಂದಿದ್ದಾರೆ.

   ಮಗ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ಭಾರೀ ಪೈಪೋಟಿಯಿರುವ ಕಾರಣ ಗೆಲುವಿಗಾಗಿ ಈಗಾಗಲೇ ಮದ್ದೂರು ಬಳಿಯ ಹೊಳೆ ಆಂಜನೇಯ ದೇಗುಲದಲ್ಲಿ ಒಂದುಕಾಲು ರೂಪಾಯಿ ಹರಕೆ ಕಟ್ಟಿ ಐದು ಮಂಗಳವಾರ ಪೂಜೆ ನೆರವೇರಿಸಿ ಬಂದಿದ್ದಾರೆ.

   ಅನಿತಾಕುಮಾರಸ್ವಾಮಿ ಹೊಳೆ ಆಂಜನೇಯನ ದೇಗುಲಕ್ಕೆ ಭೇಟಿ ನೀಡಿದ್ದೇಕೆ?

   ಇದೀಗ ಲೋಕಸಭಾ ಚುನಾವಣಾ ಪ್ರಚಾರದ ಭರಾಟೆ ನಡುವೆ ಮಲೆ ಮಹದೇಶ್ವರನಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಅಲ್ಲದೇ, ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ.

   ಡ್ರಾಮಾ ಮಾಡಿ ಕೈಗೆ ಸಿಗದವರನ್ನು ನಂಬಬೇಡಿ; ಸುಮಲತಾಗೆ ಅನಿತಾ ಟಾಂಗ್?

   ಹಾಗೆ ನೋಡಿದರೆ ದೇವೆಗೌಡರವರ ಕುಟುಂಬ ಮೊದಲಿನಿಂದಲೂ ದೇವಸ್ಥಾನಗಳ ಭೇಟಿ ನೀಡುವುದು, ವಿಶೇಷ ಪೂಜೆ ಮತ್ತು ಯಜ್ಞ ಯಾಗ ಮಾಡಿಸುವುದು ಹೊಸದೇನಲ್ಲ. ಹೀಗಾಗಿ ಈ ಸಂದರ್ಭ ದೇವಾಲಯಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಕಾರಣವಾಗಿದೆ.

   English summary
   Lok Sabha Elections 2019: Anita Kumaraswamy visited Male Mahadeshwara hill in Chamarajanagara district. She performed special worship for son Nikhil Kumaraswamy win.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X