ಕೊಳ್ಳೇಗಾಲದಲ್ಲಿ ತಿಮಿಂಗಿಲ ವಾಂತಿ ಸಾಗಟ: ಮಾಲು ಸಮೇತ ನಾಲ್ವರ ಬಂಧನ
ಒಂದು ಕೆ.ಜಿ. ತಿಮಿಂಗಿಲದ ವಾಂತಿ ಕೋಟಿ ಬೆಲೆ ಬಾಳಲಿದೆ ಎಂದು ಹಲವರು ಹೇಳುತ್ತಾರೆ. ಹೀಗೆ ಬೆಳೆ ಬಾಳಲಿದೆ ಎನ್ನುವ ತಿಮಿಂಗಲದ ಕೆಜಿಗಟ್ಟಲೇ ವಾಂತಿ ಯನ್ನು (ಆಂಬರ್ ಗ್ರೀಸ್) ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕೊಳ್ಳೇಗಾಲದ ಬಸ್ ನಿಲ್ದಾಣದ ಸಮೀಪ ನಡೆದಿದೆ.
ಚಾಮರಾಜನಗರ, ಫೆಬ್ರವರಿ, 27: ಒಂದು ಕೆ.ಜಿ. ತಿಮಿಂಗಿಲದ ವಾಂತಿ ಕೋಟಿ ಬೆಲೆ ಬಾಳಲಿದೆ ಎಂದು ಹಲವರು ಹೇಳುತ್ತಾರೆ. ಹೀಗೆ ಬೆಳೆ ಬಾಳಲಿದೆ ಎನ್ನುವ ತಿಮಿಂಗಲದ ಕೆಜಿಗಟ್ಟಲೇ ವಾಂತಿ ಯನ್ನು (ಆಂಬರ್ ಗ್ರೀಸ್) ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕೊಳ್ಳೇಗಾಲದ ಬಸ್ ನಿಲ್ದಾಣದ ಸಮೀಪ ನಡೆದಿದೆ.
ಬಂಧನವಾದ ಆರೋಪಿಗಳ ವಿವರ
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಲ್ಲಮಜ್ಜಿ ರಸ್ತೆಯ ಕೆ.ಬಿ.ವಿರೂಪಾಕ್ಷ (62), ಕೇರಳ ಮೂಲದ ಶಂಸುದ್ಧೀನ್ ಒತಿಯೋತ್(48), ತ್ರೆಸೀಮಾ ವರ್ಘಸೆ ಅಲಿಯಾಸ್ ಸುಜಾ(55) ಹಾಗೂ ಸಜಿ ಸುಬಾಸ್(41) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಬೆಂಗಳೂರಿನ ಕಡೆಯ ಕಾಳಸಂತೆಯಲ್ಲಿ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡುತ್ತಿದ್ದರು. ಈ ಖದೀಮರು ಕಾರಿನಲ್ಲಿ ತಿಮಿಂಗಿಲದ ವಾಂತಿಯನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡ ಅರಣ್ಯ ಸಂಚಾರಿ ದಳದ ಪೊಲೀಸರು, ಕೊಳ್ಳೇಗಾಲದ ಬಸ್ ನಿಲ್ದಾಣದ ಸಮೀಪ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 14 ಕೆ.ಜಿ 950 ಗ್ರಾಂ ಆಂಬರ್ ಗ್ರಿಸ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅರಣ್ಯ ಇಲಾಖೆಯಿಂದ ರಣಹದ್ದುಗಳ ಸರ್ವೇ
ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ನಶಿಸುವ ಹಂತ ತಲುಪಿರುವುದರಿಂದ ಎಚ್ಚೆತ್ತ ಅರಣ್ಯ ಸಚಿವಾಲಯವು ರಣಹದ್ದುಗಳ ಸರ್ವೇಗೆ ಮುಂದಾಗಿದೆ. ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ 80ರ ದಶಕದಲ್ಲಿ ಆಜುಮಾಸು 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಇದೀಗ 250 ಇರಬಹುದು ಎನ್ನಲಾಗುತ್ತಿದೆ.
ರಣಹದ್ದು ಸರ್ವೇಕ್ಷಣೆ ಬಗ್ಗೆ ತರಬೇತಿ
ಅಳಿವಿನಂಚಿನಲ್ಲಿರುವ ಜಟಾಯುಗಳನ್ನು ಉಳಿಸಿಕೊಳ್ಳಲೇಬೇಕಾದ ತುರ್ತು ಎದುರಿಗಿರುವ ಹಿನ್ನೆಲೆಯಲ್ಲಿ ನೀಲಗಿರಿ ಶ್ರೇಣಿಯಲ್ಲಿ 25 ಹಾಗೂ 26 ರಂದು ಸರ್ವೇ ನಡೆದಿದೆ. ಶುಕ್ರವಾರ ಬಂಡೀಪುರದಲ್ಲಿ ರಣಹದ್ದು ಸರ್ವೇಕ್ಷಣೆ ಬಗ್ಗೆ ಸಿಬ್ಬಂದಿಗೆ ತರಬೇತಿಯನ್ನು ಸಹ ಕೊಡಲಾಗಿತ್ತು.
ಸುಸ್ಥಿರ ಪರಿಸರದಲ್ಲಿ ಒಂದಕ್ಕೊಂದು ಸರಪಳಿ ಸಂಬಂಧ ಹೊಂದಿದ್ದು, ರಣಹದ್ದುಗಳು ಬೇಟೆಯಾಡಿ ಬದುಕುವುದಿಲ್ಲ. ಕಾಡಿನಲ್ಲಿ, ಕಾಡಂಚಿನಲ್ಲಿ ಸತ್ತ ಪ್ರಾಣಿಗಳನ್ನು ತಿಂದು ಬದುಕುವುದರಿಂದ ಕಾಡಿನ ಪರಿಸರ ಸ್ವಚ್ಛತೆಗೆ ರಣಹದ್ದುಗಳು ಬೇಕೆ ಬೇಕು. ರಣಹದ್ದುಗಳನ್ನು ಉಳಿಸಿಕೊಳ್ಳಲು 2025 ರವರೆಗೆ ಕೇಂದ್ರ ಪರಿಸರ ಸಚಿವಾಲಯವು ಯೋಜನೆ ಹಾಕಿಕೊಂಡಿದ್ದು, ಅದರ ಮೊದಲ ಹಂತವೇ ಈ ಸರ್ವೇಕ್ಷಣೆಯಾಗಿದೆ. ಕಾಡಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಣಹದ್ದುಗಳನ್ನು ಉಳಿಸಲೇಬೇಕಿದೆ.












Click it and Unblock the Notifications