• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೆಡ್ ಹೋಟೆಲಲ್ಲಿ ಬಿಸಿ ಬಿಸಿ ಬೆಣ್ಣೆ ದೋಸೆ ಸವಿದ ಶಿವಣ್ಣ

|
   ಇದು ಶಿವಣ್ಣನ ನಿಜವಾದ ಸಿಂಪ್ಲಿಸಿಟಿ..! | FILMIBEAT KANNADA

   ಚಾಮರಾಜನಗರ, ಸೆಪ್ಟೆಂಬರ್ 7: ಜೋಗಿ ಚಿತ್ರದ ಏಳು ಮಲೆ ಮೇಲೇರಿ ಬಂದಾನಪ್ಪೋ ಮಾದೇವ ಹಾಡು ಇಂದಿಗೂ ಬಹುಜನರಿಗೆ ಅಚ್ಚುಮೆಚ್ಚು. ಈ ಹಾಡಿನಲ್ಲಿ ಅಭಿನಯಿಸಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಲೆ ಮಹದೇಶ್ವರನ ಸನ್ನಿಧಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.

   ಸುಮಲತಾ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದ ಶಿವರಾಜ್ ಕುಮಾರ್

   ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಈ ಪವಿತ್ರ ಕ್ಷೇತ್ರಕ್ಕೆ ಶುಕ್ರವಾರ ಶಿವಣ್ಣ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರ ಜೊತೆ ನಟ ಚಿ. ಗುರುದತ್, ನಿರ್ದೇಶಕ ರಘುರಾಮ್ ಹಾಗೂ ಇನ್ನಿತರರು ಬಂದು ಮಹದೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಶಿವಣ್ಣ ಬಂದದ್ದೇ ತಡ ಸ್ಥಳದಲ್ಲಿದ್ದ ಭಕ್ತಾದಿಗಳು ಅವರ ಸುತ್ತ ನೆರೆದು ಸೆಲ್ಫಿಗಾಗಿ ಮುಗಿಬಿದ್ದರು.

   ತಮ್ಮ ನೆಚ್ಚಿನ ನಟ ಬಂದಿರುವ ಸುದ್ದಿ ತಿಳಿದು ಜನರು ದೇವಸ್ಥಾನದತ್ತ ದೌಡಾಯಿಸುವ ದೃಶ್ಯ ಕಂಡುಬಂತು. ಎಲ್ಲರೊಂದಿಗೆ ನಗುತ್ತಾ ಸೆಲ್ಫೀಗೆ ಪೋಸ್ ಕೊಟ್ಟ ಶಿವಣ್ಣ ನಂತರ ದೇವಸ್ಥಾನದಲ್ಲಿ ಕೆಲಹೊತ್ತು ಕುಳಿತು ಪ್ರಾರ್ಥಿಸಿದರು. ಅನ್ನ ದಾಸೋಹ ಭವನಕ್ಕೆ ಭೇಟಿ ನೀಡಿ ದೇಣಿಗೆ ನೀಡಿದರು.

   ಇದಕ್ಕೂ ಮುನ್ನ ಮುತ್ತತ್ತಿಗೂ ಭೇಟಿ ನೀಡಿದ್ದ ಅವರು, ಮಳವಳ್ಳಿ ರಸ್ತೆಯಲ್ಲಿರುವ ಹಲಗೂರಿನ ಬಾಬು ಅವರ ಶೆಡ್ ಹೋಟೆಲ್ ಗೆ ಹೋಗಿ ಬೆಣ್ಣೆ ದೋಸೆ ಸವಿದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹಲಗೂರು ಬೆಣ್ಣೆ ದೋಸೆಗೆ ಬಹುಬೇಡಿಕೆ ಇದೆ. ರುಚಿಕರವಾದ ಪಲ್ಯದೊಂದಿಗೆ ಬೆಣ್ಣೆ ದೋಸೆಯನ್ನು ನಟ ಶಿವಣ್ಣ ಸವಿದರು.

   English summary
   Actor Shivrajkumar Eater Butter dosa in shed hotel at Malavalli. After he visited Male mahadeshwara temple and offered special worship.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X