ಆಧಾರ್ ನೋಂದಣಿ: ಮುಂಚೂಣಿಯಲ್ಲಿ ಚಾಮರಾಜನಗರ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ ಮಾರ್ಚ್, 20: ಚಾಮರಾಜನಗರ ಶೇ.96 ರಷ್ಟು ಆಧಾರ್ ಸಂಖ್ಯೆ ಹೊಂದಿದ ಜಿಲ್ಲೆಯಾಗಿ ರಾಜ್ಯದಲ್ಲಿ ದಾಖಲೆ ಬರೆದಿದೆ. ಆಧಾರ್ ಸೇವಾ ಕೇಂದ್ರಗಳ ಮೂಲಕವಲ್ಲದೆ, ಮೊಬೈಲ್ ತಂಡಗಳ ಮೂಲಕ ಆದಿವಾಸಿಗಳ ಹಾಡಿಗಳಿಗೆ ತೆರಳಿ ಪ್ರತಿ ಮನೆಯ ವ್ಯಕ್ತಿಗೂ ಆಧಾರ್ ಕಾರ್ಡ್‍ ನೀಡುವ ಮಾದರಿ ಕೆಲಸ ಇಲ್ಲಿ ನಡೆಯುತ್ತಿದೆ.

2011ರ ಜನಗಣತಿ ಪ್ರಕಾರ ಚಾಮರಾಜನಗರದಲ್ಲಿ 10,20,000 ಜನಸಂಖ್ಯೆಯಿದೆ. ಈ ಪೈಕಿ ಇದೀಗ 9,77,094ಕ್ಕಿಂತಲೂ ಹೆಚ್ಚು ಜನರು ಆಧಾರ್ ಸಂಖ್ಯೆ ಹೊಂದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಈಗ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಅಗತ್ಯವಾಗಿರುವ ಕಾರಣದಿಂದಾಗಿ ಜನರಿಗೆ ಆಧಾರ್ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಆಧಾರ್ ಸೇವಾ ಕೇಂದ್ರ ತೆರೆಯಲಾಗಿದೆಯಾದರೂ ಹಾಡಿಯಲ್ಲಿ ವಾಸಿಸುವ ಹೆಚ್ಚಿನ ಜನಕ್ಕೆ ಇದರ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿ ಮೊಬೈಲ್ ತಂಡಗಳು ಪ್ರತಿ ಹಾಡಿಗೆ ತೆರಳಿ ಅಲ್ಲಿಯೇ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್‍ ಹೆಸರು ನೋಂದಣಿ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.[ಎಲ್ಲ ಮೊಬೈಲ್ ಸಂಖ್ಯೆಯೂ ವರ್ಷದೊಳಗೆ ಆಧಾರ್ ಜತೆಗೆ ಲಿಂಕ್ ಆಗಿರ್ಬೇಕು: ಸುಪ್ರೀಂ]

Adhar registration: Chamarjanangar people in top rank!

ಅಂಗನವಾಡಿ ಮಕ್ಕಳ ಆಧಾರ್ ನೋಂದಣಿಯು ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕಿಯರಿಗೆ ಅಕ್ಟೋಬರ್ 2016ರಲ್ಲಿ ಆಧಾರ್ ನೋಂದಣಿ ತರಬೇತಿ ನೀಡಿ. ಅಂಗನವಾಡಿ ಮಕ್ಕಳ ಆಧಾರ್ ನೋಂದಣಿಯನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯ 0-5 ವರ್ಷದ ಒಳಗಿನ ಮಕ್ಕಳು 75422 ಇದ್ದು, 41855 ಮಕ್ಕಳು ಈಗಾಗಲೇ ಆಧಾರ್ ಸಂಖ್ಯೆ ಹೊಂದಿದ್ದಾರೆ. ಉಳಿದ ಮಕ್ಕಳ ಆಧಾರ್ ನೋಂದಣಿಯನ್ನು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಇನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ನವಜಾತ ಶಿಶುವಿನ ಆಧಾರ್ ನೋಂದಣಿಯನ್ನು ಪ್ರಾರಂಭಿಸಲಾಗಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

Adhar registration: Chamarjanangar people in top rank!

ಇದಲ್ಲದೆ ಆಧಾರ್ ಸೇವಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ವೃದ್ಧರು, ನಿರ್ಗತಿಕರು, ವಿಕಲಚೇತನರನ್ನು ಗುರುತಿಸಿ ಅವರು ಇರುವ ಸ್ಥಳಕ್ಕೆ ತೆರಳಿ ಅಲ್ಲಿಯೇ ನೋಂದಣಿ ಕಾರ್ಯ ಮಾಡಲಾಗುತ್ತಿದೆ.
ಒಟ್ಟಾರೆ ಆಧಾರ್ ನೋಂದಣಿ ಕಾರ್ಯದಲ್ಲಿ ಚಾಮರಾಜನಗರ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
More than 96% of people have Aadhaar registration in Chamarajnagar district. Even though there are so many tribal people who are illiterate, they give more importance to Aadhaar. This is really an ideal achievement.
Please Wait while comments are loading...