ಪೂಜೆ ಮಾಡುವಾಗ ಕುಸಿದು ಬಿದ್ದು ಮಹದೇಶ್ವರ ಬೆಟ್ಟದಲ್ಲಿ ಅರ್ಚಕ ಸಾವು
ಚಾಮರಾಜನಗರ, ಜುಲೈ 19: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪೂಜೆ ಮಾಡುತ್ತಿದ್ದಾಗಲೇ ಅರ್ಚರಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
40 ವರ್ಷದ ನಾಗಣ್ಣ ಎಂಬುವವರೇ ಮೃತಪಟ್ಟಿರುವ ಅರ್ಚಕ. ನಾಗಣ್ಣ ದೊಡ್ಡಾಣೆ ಗ್ರಾಮದ ನಿವಾಸಿಯಾಗಿದ್ದು, ಮಾರ್ಟಳ್ಳಿಯ ಕಡಬೂರಿನಲ್ಲಿ ವಾಸವಿದ್ದರು. ಬೇಡಗಂಪಣ ಸಮುದಾಯದ ಉಪ ಅರ್ಚಕರಾಗಿದ್ದ ನಾಗಣ್ಣನಿಗೆ ಮಹೇದೇಶ್ವರ ಸನ್ನಿದಿಯಲ್ಲಿ ಒಂದೂವರೆ ವರ್ಷಗಳ ಬಳಿಕ ಪೂಜೆ ಸಲ್ಲಿಸುವ ಸರದಿ ಬಂದಿತ್ತು. ಆದರೆ ಮಂಗಳವಾರ ಬೆಳಗ್ಗೆ 4 ಗಂಟೆ ಸಮಯದಲ್ಲಿ ಪೂಜೆಗೆ ತಯಾರಿಯಲ್ಲಿದ್ದ ವೇಳೆಯೇ ಹಠಾತ್ ಕುಸಿದು ಬಿದ್ದಿದ್ದರು.
ತಕ್ಷಣ ಅವರನ್ನುಜೊತೆಗಿದ್ದ ಅರ್ಚಕರು ಮೊದಲು ಮಹದೇಶ್ವರ ಬೆಟ್ಟದಲ್ಲಿರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್‌ನಲ್ಲಿ ಹನೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಕರೆತರುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ನಾಗಣ್ಣನಿಗೆ ಪತ್ನಿ, ಮಗ ಹಾಗೂ ಮಗಳಿದ್ದಾರೆ.

ಮಾದಪ್ಪನ ಬೆಟ್ಟದಲ್ಲಿ 25 ಕಾಡುಹಂದಿ ಸೆರೆ
ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರು ಬಿಸಾಡುವ ಆಹಾರ ತಿಂದು ಕೊಬ್ಬಿದ್ದ ಕಾಡು ಹಂದಿಗಳನ್ನು ಸೆರೆ ಹಿಡಿಯಲಾಗುತ್ತಿದೆ. ದೇವಾಸ್ಥಾನದ ರಂಗಮಂದಿರದ ಆವರಣದಲ್ಲಿ ಭಕ್ತರ ಮೇಲೆ ದಾಳಿ ಮಾಡುತ್ತಿದ್ದ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪ್ರಾಧಿಕಾರ ಕಳೆದ ಎರಡು ದಿನಗಳಿಂದ ಕಾಡುಹಂದಿಗಳನ್ನು ಹಿಡಿಯುತ್ತಿದ್ದಾರೆ.
ಪ್ರಾಧಿಕಾರದ ನೌಕರರೇ ಬಲೆ ಮೂಲಕ ಕಾಡುಹಂದಿಗಳನ್ನು ಹಿಡಿಯುತ್ತಿದ್ದು, ಈಗಾಗಲೇ 20 ಕ್ಕೂ ಹೆಚ್ಚು ವರಹಗಳು ಬಂಧಿಯಾಗಿದ್ದು ಪಾಲಾರ್ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತಿದೆ, 500ಕ್ಕೂ ಹೆಚ್ಚು ಕಾಡುಹಂದಿಗಳು ದೇವಸ್ಥಾನದ ಆಸುಪಾಸಿನಲ್ಲಿದ್ದು, ಸಧ್ಯಕ್ಕೆ ಈಗ 20 ಸೆರೆಯಾಗಿದೆ ಎಂದು ದೇವಾಲಯದ ನೌಕರರೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿಣಿ ಅವರಿಗೆ ಸಂಪರ್ಕಿಸಿತರಾದರೂ ಕರೆ ಸ್ವೀಕರಿಸಲಿಲ್ಲ. ಇನ್ನು,ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಇ ಏಡುಕುಂಡಲು ಅವರು ಕಾಡುಹಂದಿ ಸೆರೆ ಹಿಡಿಯುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಕಾಡುಹಂದಿ ಸೆರೆ ಕಾರ್ಯಾಚರಣೆಯಂತೂ ನಡೆಯುತ್ತಿದ್ದು, ಬಲೆ ಹಾಕಿ ಹಿಡಿದು ಕೈ-ಕಾಲು ಕಟ್ಟಿ ಸೆರೆ ಹಿಡಿದು ಬಳಿಕ ಕಾಡಿಗೆ ಬಿಡುತ್ತಿದ್ದಾರೆ.

ಐವರು ಕಳ್ಳರ ಬಂಧನ
ಮೂಗುರು ತ್ರಿಪುರ ಸುಂದರಿ ದೇವಾಲಯ ಕಳ್ಳತನಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿಶೇಷ ಪೊಲೀಸ್ ಪಡೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ 5ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಸಲವಾಡಿ ಗ್ರಾಮದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ ಐವರನ್ನು ಬಂಧಿಸಲಾಗಿದೆ. ಅಲೆಮಾರಿ ಜನಾಂಗದವರಂತೆ ವೇಷ ಹಾಕಿಕೊಂಡು ಊರ ಹೊರಗೆ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದ ಇವರು ಮೂಗೂರು ತ್ರಿಪುರ ಸುಂದರಿ ದೇವಾಲಯ ಸೇರಿದಂತೆ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ದೇಗುಲಗಳಲ್ಲಿ ಕಳವು ಪ್ರಕರಣದಲ್ಲಿ ಇವರು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಕೆರೆ,ಪೊದೆಗಳಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದ್ದು, ಅಜ್ಞಾತ ಸ್ಥಳಕ್ಕೆ ವಶಕ್ಕೆ ಪಡೆದವರನ್ನು ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications