ಕೊಳ್ಳೇಗಾಲ: ಜೀವನಕ್ಕೆ ಇದ್ದ 4 ಹಸು ಕಳೆದುಕೊಂಡ ರೈತ ಕಂಗಾಲು
ಕೊಳ್ಳೇಗಾಲ, ಮಾರ್ಚ್. 07 : ವಿಷಯುಕ್ತ ಆಹಾರ ಸೇವಿಸಿ ನಾಲ್ಕು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದ್ದ 4 ಹಸುಗಳಿಂದ ಜೀವನ ಸಾಗಿಸುತ್ತಿದ್ದ ಪುಟ್ಟಬಸವಯ್ಯ ಇದೀಗ ಕಂಗಾಲಾಗಿದ್ದಾನೆ. ಪುಟ್ಟಬಸವಯ್ಯ ಅವರು ಎಂದಿನಂತೆ ಮಂಗಳವಾರ ಬೆಳಿಗ್ಗೆ ಹಸುಗಳಿಗೆ ಆಹಾರ ನೀಡಿ ಬೇರೆ ಕೆಲಸದಲ್ಲಿ ನಿರತರಾಗಿದ್ದರು.

ಆದರೆ, ಅವರು ನೀಡಿದ ಆಹಾರದಲ್ಲಿ ವಿಷ ಬೆರಕೆಯಾಗಿತ್ತೋ ಏನೋ ಗೋತ್ತಿಲ್ಲ, ಆಹಾರ ಸೇವಿಸಿದ ಹಸುಗಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಒದ್ದಾಡಿ ಮೃತಪಟ್ಟಿವೆ.
ಸಾವನ್ನಪ್ಪಿದ ಹಸುಗಳು ತಾಲೂಕಿನ ಮಧುವನಹಳ್ಳಿ ಗ್ರಾಮದ ಹೊರವಲಯದ ಲೊಕ್ಕನಹಳ್ಳಿ ರಸ್ತೆಯಲ್ಲಿರುವ ಪುಟ್ಟಬಸವಯ್ಯ ಅವರಿಗೆ ಸೇರಿದ್ದಾಗಿದ್ದು, ಜಾನುವಾರುಗಳು ಸಾವನ್ನಪ್ಪಿದ್ದರಿಂದ ಸುಮಾರು 2 ಲಕ್ಷ ರು. ನಷ್ಟವುಂಟಾಗಿದೆ. ಇದಿರಿಂದ
ಸ್ಥಳಕ್ಕೆ ಆಗಮಿಸಿದ ಹನೂರು ಶಾಸಕ ಆರ್.ನರೇಂದ್ರ ಸರ್ಕಾರದಿಂದ ಬರುವ ಸೌಲಭ್ಯಗಳು ಹಾಗೂ ಪಶುಭಾಗ್ಯದ ಯೊಜನೆಯಲ್ಲಿ ಹಸುಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications