ಚಾಮರಾಜನಗರ: ಸಾರಿಗೆ ಬಸ್-ಬೈಕ್ ಡಿಕ್ಕಿಗೆ ಮೂವರ ದುರ್ಮರಣ

Posted By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್ 16: ಮುಂದೆ ತೆರಳುತ್ತಿದ್ದ ಸಾರಿಗೆ ಬಸ್ಸನ್ನು ಹಿಂದಿಕ್ಕುವ ವೇಳೆ ನಡೆದ ಅವಘಡದಲ್ಲಿ ಬೈಕ್ ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಯಳಂದೂರಿನಲ್ಲಿ ಬುಧವಾರ (ನವೆಂಬರ್ 15) ರಾತ್ರಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದವರನ್ನು ಸತೀಶ, ಬಿಂದು ಮತ್ತು ರಾಜಮ್ಮ ಎಂದು ಗುರುತಿಸಲಾಗಿದೆ. ಸತೀಶ ಎಂಬಾತ ತನ್ನ ಬೈಕ್ ನಲ್ಲಿ ಬಿಂದು ಮತ್ತು ರಾಜಮ್ಮನನ್ನು ಕೂರಿಸಿಕೊಂಡು ತೆರಳುತ್ತಿದ್ದ ಎನ್ನಲಾಗಿದೆ.

ಚಾಮರಾಜನಗರ: ಟಿಪ್ಪರ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವು

ಘಟನೆಯಲ್ಲಿ ಸಾವನ್ನಪ್ಪಿದವರನ್ನು ಸತೀಶ, ಬಿಂದು ಮತ್ತು ರಾಜಮ್ಮ ಎಂದು ಗುರುತಿಸಲಾಗಿದೆ. ಸತೀಶ ಎಂಬಾತ ತನ್ನ ಬೈಕ್ ನಲ್ಲಿ ಬಿಂದು ಮತ್ತು ರಾಜಮ್ಮನನ್ನು ಕೂರಿಸಿಕೊಂಡು ತೆರಳುತ್ತಿದ್ದ ಎನ್ನಲಾಗಿದೆ. ರಾತ್ರಿ ಸಮಯವಾಗಿದ್ದರಿಂದ ಯಳಂದೂರಿನ ಪೆಟ್ರೋಲ್ ಬಂಕ್ ಬಳಿ ಮುಂದೆ ತೆರಳುತ್ತಿದ್ದ ಸಾರಿಗೆ ಬಸ್ಸನ್ನು ಹಿಂದಿಕ್ಕಿ ಮುಂದೆ ಹೋಗುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದ್ದು, ಈ ವೇಳೆ ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ನಲ್ಲಿದ್ದ ಮೂವರು ರಸ್ತೆಗೆ ಉರುಳಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆ, ಮೈಕೈಗೆ ಗಂಭೀರ ಪೆಟ್ಟಾಗಿದೆ. ಪರಿಣಾಮ ಬೈಕ್ ಸವಾರ ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

3 people die while a bus collides with bike in Chamarajanagara

ಉಳಿದಂತೆ ಗಂಭೀರ ಗಾಯಗೊಂಡಿದ್ದ ರಾಜಮ್ಮ ಮತ್ತು ಬಿಂದುವನ್ನು ಸ್ಥಳೀಯವಾಗಿ ಆಸ್ಪತ್ರೆಯಿಲ್ಲದ ಕಾರಣ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿ ವಾಹನದಲ್ಲಿ ಮೈಸೂರಿತ್ತ ಕೊಂಡೊಯ್ಯಲಾಯಿತಾದರೂ ಗಂಭೀರ ಸ್ಥಿತಿಯಲ್ಲಿದ್ದ ಅವರಿಬ್ಬರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಕ್ಷಣಾರ್ಧದಲ್ಲಿ ನಡೆದ ಘಟನೆಯಲ್ಲಿ ಮೂರು ಜೀವ ಬಲಿಯಾಗಿದ್ದು, ಘಟನೆಗೆ ಬಸ್ಸನ್ನು ಓವರ್ ಟೇಕ್ ಮಾಡಲು ಹೋಗಿದ್ದೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

ಮೈಸೂರು-ಹುಣಸೂರು ರಸ್ತೆಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ಸಾವು

ಘಟನಾ ಸ್ಥಳಕ್ಕೆ ತೆರಳಿದ ಯಳಂದೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಶವಗಳನ್ನು ಶವಗಾರದಲ್ಲಿಡಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ನೀಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3 people died while a bus collides with bike. The tragic incident took place in Yalandur in Chamarajanagara district on November 15th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ