ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪ್ರಬೇಧದ ಪಕ್ಷಿ ಪತ್ತೆ

ಕರ್ನಾಟಕ ಹಲವು ಜೀವ ಸಂಕುಲದ ಆಗರ. ಪೂರ್ವ, ಪಶ್ಚಿಮ ಘಟ್ಟಗಳ ಸಂಗಮ ಸೇತುವಾಗಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 274 ಪ್ರಬೇಧದ ಪಕ್ಷಿ ಸಂಕುಲ ಇರುವುದು ಪತ್ತೆಯಾಗಿದೆ.

By ಚಾಮರಾಜ ನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜನವರಿ 30: ರಾಜ್ಯದ ಪ್ರಮುಖ ಹಾಗೂ ಪೂರ್ವ, ಪಶ್ಚಿಮ ಘಟ್ಟಗಳ ಸಂಗಮ ಸೇತುವಾಗಿರುವ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 274 ಪ್ರಬೇಧದ ಪಕ್ಷಿ ಸಂಕುಲ ಇರುವುದನ್ನು ಪತ್ತೆ ಮಾಡಲಾಗಿದೆ.

ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ವರ್ಷಗಳ ಬಳಿಕ ನಡೆದ ಪಕ್ಷಿ ಗಣತಿಯಲ್ಲಿ ಒಟ್ಟು 274 ಪ್ರಬೇಧ ಪಕ್ಷಿಗಳನ್ನು ಗುರುತು ಮಾಡಿದ್ದು, ಇವುಗಳಲ್ಲಿ ಹೊಸದಾಗಿ ಎರಡು ಜಾತಿ ಹಕ್ಕಿಗಳು ಕಾಣಸಿಕ್ಕಿವೆ. ಬಹಳ ವರ್ಷಗಳ ಬಳಿಕ ಗ್ರೇಟ್ ಹಾರ್ನ್ ಬಿಲ್ ಕೂಡ ಅರಣ್ಯದಲ್ಲಿ ಕಾಣಿಸಿಕೊಂಡಿದೆ.

ಎಚ್.ಡಿ ಕೋಟೆಯಲ್ಲಿ ಹುಲಿ ದಾಳಿಗೆ ಯುವಕ ಸಾವು: ಹೆಚ್ಚಿದ ಆತಂಕಎಚ್.ಡಿ ಕೋಟೆಯಲ್ಲಿ ಹುಲಿ ದಾಳಿಗೆ ಯುವಕ ಸಾವು: ಹೆಚ್ಚಿದ ಆತಂಕ

1939 ರಲ್ಲಿ ಪಕ್ಷಿ ಪ್ರೇಮಿ ಸಲೀಂ ಅಲಿ ಬಿಆರ್‌ಟಿ ಅರಣ್ಯಕ್ಕೆ ಆಗಮಿಸಿ ಸಮೀಕ್ಷೆ ನಡೆಸಿ 139 ಪಕ್ಷಿಗಳನ್ನು ಗುರುತು ಮಾಡಿದ್ದರು.

274 Species Of Birds Found In Biligiri Forest

2012 ರಲ್ಲಿ ನಡೆದ ಪಕ್ಷಿ ಸಮೀಕ್ಷೆಯಲ್ಲಿ 272 ಪಕ್ಷಿಗಳು ಕಂಡುಬಂದಿದ್ದವು, ಅದಾದ ನಂತರ ಈಗ ನಾಲ್ಕು ದಿನಗಳ ಕಾಲ‌ ನಡೆದ ಹಕ್ಕಿ ಗಣತಿಯಲ್ಲಿ 274 ಪಕ್ಷಿಗಳನ್ನು ಗುರುತು ಮಾಡಲಾಗಿದೆ.

ಹಕ್ಕಿ ಗಣತಿ ಕಾರ್ಯ ನಡೆಯುವುದು ಹೇಗೆ..?

ಬಿಆರ್‌ಟಿ ಅಧಿಕಾರಿಗಳು ಇಕೋ ವಾಲೆಂಟಿಯಯರ್ಸ್ ಗ್ರೂಪ್ ಆಫ್ ಇಂಡಿಯಾದ ಸಹಕಾರದೊಂದಿಗೆ ಈ ಬಾರಿ ಪಕ್ಷಿ ಗಣತಿ ನಡೆಸಿದ್ದು 50 ಸ್ವಯಂ ಸೇವಕರನ್ನು 25 ತಂಡಗಳಾಗಿ ಪರಿವರ್ತಿಸಿ 4 ದಿನಗಳ‌ ಕಾಲ ಬೈನಾಕುಲರ್ ಮತ್ತು ಕ್ಯಾಮರಾದ ಸಹಾಯದಿಂದ ಪಕ್ಷಿಗಳನ್ನು ಕಂಡು ಚಿತ್ರ ಸೆರೆಹಿಡಿದು ವೈಜ್ಞಾನಿಕವಾಗಿ ಗಣತಿ ಕಾರ್ಯ‌ ನಡೆಸಿದ್ದಾರೆ.

ಪಕ್ಷಿ ಕಾಣಿಸಿಕೊಂಡ ಸ್ಥಳ, ಪರಿಸರವನ್ನು ದಾಖಲು ಮಾಡಲಾಗಿದೆ. ಮೊದಲಿಗೆ ಅರಣ್ಯ ಇಲಾಖೆಯ ಗೇಮ್ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ, ನೀರು ಇರುವ ಕಡೆಗಳಲ್ಲಿ, ಕಾಡಿನೊಳಗೆ ಸಮೀಕ್ಷಾ ಕಾರ್ಯ ನಡೆಸಲಾಗಿದೆ.

274 Species Of Birds Found In Biligiri Forest

ದಾಂಡೇಲಿ ಅರಣ್ಯ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುವ ದಿ ಗ್ರೇಟ್ ಹಾರ್ನ್ ಬಿಲ್ ಬಹಳ ವರ್ಷಗಳ ಬಳಿಕ ಬಿಳಿಗಿರಿ ಬನದಲ್ಲಿ ಕಂಡಿದೆ. ವಲಸೆ ಪಕ್ಷಿಗಳಾದ ನಾದರ್ನ್ ಶೆವೆಲರ್ (Northern Shoveler) ಹಾಗೂ ನಾದರ್ನ್ ಪಿನ್ಟೇಲ್ (Nothren Pintail) ಪಕ್ಷಿಗಳು ಇದೇ ಮೊದಲ ಬಾರಿ ಗಣತಿಯಲ್ಲಿ ಕಂಡಿದೆ.

ಭಾನುವಾರ ನಡೆದ ಹಕ್ಕಿ ಗಣತಿ ಸಮಾರೋಪ ಸಮಾರಂಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್, ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ ಪಾಲ್ಗೊಂಡು ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ವಿತರಿಸಿ, ಬಿಳಿಗಿರಿ ಬನದ ವೈವಿಧ್ಯತೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

English summary
chamarajanagar: Bird census after 11 years, 274 species of birds found in Biligiri forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X