ಜೋಮ್ಯಾಟೋ ಹ್ಯಾಕ್, 17 ದಶಲಕ್ಷ ಗ್ರಾಹಕರ ಮಾಹಿತಿ ಸೋರಿಕೆ

Posted By:
Subscribe to Oneindia Kannada

ಬೆಂಗಳೂರು, ಮೇ 18: ಆನ್ ಲೈನ್ ಹಾಗೂ ಮೊಬೈಲ್ ಅಪ್ ಮೂಲಕ ರೆಸ್ಟೋರೆಂಟ್ ಗಳ ಮಾಹಿತಿ ನೀಡುವ ಜೋಮ್ಯಾಟೋ ಕಂಪನಿಯ ಮಾಹಿತಿ ಕಣಜದ ಮೇಲೆ ಕನ್ನ ಹಾಕಲಾಗಿದೆ. 17 ದಶಲಕ್ಷ ದಾಖಲೆಗಳು ಸೋರಿಕೆಯಾಗಿವೆ.

ಈ ಬಗ್ಗೆ ಕಂಪನಿ ತನ್ನ ಅಧಿಕೃತ ಬ್ಲಾಗಿನಲ್ಲಿ ಬರೆದುಕೊಂಡಿದ್ದು, ಗ್ರಾಹಕರ ಮಾಹಿತಿ ಸೋರಿಕೆಯಾಗಿರುವುದು ನಿಜ ಎಂದಿದೆ. ಆದರೆ, ಯಾವುದೇ ರೀತಿ ಪೆಮೆಂಟ್ ಬ್ಯಾಂಕಿಂಗ್ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

Zomato Hacked, 17 Million User Records Stolen

ಜ್ಯೋಮ್ಯಾಟೊ ಸರಿ ಸುಮಾರು 120 ದಶಲಕ್ಷ ಗ್ರಾಹಕರ ಮಾಹಿತಿಯನ್ನು ಹೊಂದಿದೆ. ಈಗ ಹ್ಯಾಕ್ ಮಾಡಿದವರು ಗ್ರಾಹಕರ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಮಾಹಿತಿ ಪಡೆದುಕೊಂಡಿದ್ದು, ಪಾಸ್ವರ್ಡ್ ಎನ್ ಕ್ರಿಪ್ಟ್ ಮಾಡಿದ್ದಾರೆ.ಹೀಗಾಗಿ ಹಳೆ ಪಾಸ್ವರ್ಡ್ ಪುನರ್ ಸ್ಥಾಪನೆ ಸದ್ಯಕ್ಕೆ ಕಷ್ಟವಾಗಿದೆ. ನಮ್ಮ ಉದ್ಯೋಗಿಯೊಬ್ಬರ ಖಾತೆ ಹ್ಯಾಕ್ ಮಾಡಿ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿರುವ ಸಾಧ್ಯತೆಯೂ ಇದೆ ಎಂದು ಸಂಸ್ಥೆ ಹೇಳಿದೆ.

2015ರಲ್ಲಿ ಕೂಡಾ ಇದೇ ರೀತಿ ದಾಳಿಗೆ ಜ್ಯೋಮ್ಯಾಟೋ ಒಳಗಾಗಿತ್ತು. ಗ್ರಾಹಕರ ಮಾಹಿತಿಯನ್ನು ಕಲೆ ಹಾಕಿ ಮಾರಾಟ ಮಾಡಲು ಹ್ಯಾಕರ್ಸ್ ಗಳು ಮುಂದಾಗಿದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಜ್ಯೋಮ್ಯಾಟೋ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Zomato on Thursday confirmes 17 million user records - out of the company's 120 million users - were stolen from its database. According to the company, usernames and hashed passwords were stolen by the attackers
Please Wait while comments are loading...