ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ಶೇ 4.17ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 16: ದೇಶದಲ್ಲಿ ಹೋಲ್‌ಸೇಲ್ ದರ ಆಧಾರಿತ ಹಣದುಬ್ಬರ (ಡಬ್ಲ್ಯೂಪಿಐ) ಸತತ ಎರಡನೆಯ ತಿಂಗಳೂ ಏರಿಕೆಯಾಗಿದೆ. ಆಹಾರ, ತೈಲ ಮತ್ತು ವಿದ್ಯುತ್ ಶಕ್ತಿ ದರದಲ್ಲಿನ ಹೆಚ್ಚಳದಿಂದ ಫೆಬ್ರವರಿಯಲ್ಲಿ ಡಬ್ಲ್ಯೂಪಿಐ ಶೇ 4.17ರಷ್ಟು ಏರಿಕೆ ಕಂಡಿದೆ.

ಜನವರಿಯಲ್ಲಿ ಡಬ್ಲ್ಯೂಪಿಐ ಹಣದುಬ್ಬರ ಶೇ 2.03ರಷ್ಟಿದ್ದರೆ, ಕಳೆದ ವರ್ಷದ ಫೆಬ್ರವರಿಯಲ್ಲಿ ಶೇ 2.26ರಷ್ಟು ಇತ್ತು. ಕಳೆದ ಕೆಲವು ತಿಂಗಳಿನಿಂದ ಬೆಲೆ ಹೆಚ್ಚಳದಿಂದ ಆಹಾರ ಪದಾರ್ಥಗಳ ದರವು ಫೆಬ್ರವರಿಯಲ್ಲಿ ಶೇ 1.36ರಷ್ಟು ಹಣದುಬ್ಬರ ಕಂಡಿದೆ. ಜನವರಿಯಲ್ಲಿ ಅದು ಶೇ -2.80ರಷ್ಟಿತ್ತು.

 ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 4.59ಕ್ಕೆ ಇಳಿಕೆ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 4.59ಕ್ಕೆ ಇಳಿಕೆ

ತರಕಾರಿಗಳ ಬೆಲೆ ಏರಿಕೆಯು ಫೆಬ್ರವರಿಯಲ್ಲಿ ಶೇ (-) 2.90ರಷ್ಟಿತ್ತು. ಜನವರಿಯಲ್ಲಿ ಅದು (-) ಶೇ 20.82ರಷ್ಟು ಇತ್ತು. ಧಾನ್ಯಗಳ ಹಣದುಬ್ಬರ ಫೆಬ್ರವರಿಯಲ್ಲಿ ಶೇ 10.25ರಷ್ಟಿದ್ದರೆ, ಹಣ್ಣುಗಳ ದರ ಶೇ 9.48ರಷ್ಟಿತ್ತು. ಹಾಗೆಯೇ ತೈಲ ಮತ್ತು ಶಕ್ತಿ ಹಣದುಬ್ಬರ ಶೇ 0.58ರ ಪ್ರಮಾಣದಲ್ಲಿತ್ತು.

WPI Inflation Rises To 4.17 Percent In February

ಕಳೆದ ತಿಂಗಳು ಆರ್‌ಬಿಐ ನಡೆಸಿದ ಹಣಕಾಸು ನೀತಿಗಳ ಕುರಿತಾದ ಸತತ ನಾಲ್ಕನೇ ಸಭೆಯಲ್ಲಿಯೂ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿಲ್ಲ. ಚಿಲ್ಲರೆ ಹಣದುಬ್ಬರವು ಗ್ರಾಹಕರ ದರ ಸೂಚ್ಯಂಕವನ್ನು ಅವಲಂಬಿಸಿದ್ದು, ಫೆಬ್ರವರಿಯಲ್ಲಿ ಶೇ 5.03ರಷ್ಟಿತ್ತು ಎಂದು ಕಳೆದ ವಾರ ಬಿಡುಗಡೆಯಾದ ದತ್ತಾಂಶ ತಿಳಿಸಿದೆ.

English summary
WPI inflation rises to 4.17% in February as food, fuel and power prices spiked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X