Get Updates
Get notified of breaking news, exclusive insights, and must-see stories!

ಮೋದಿ ಸರಕಾರದ ಸುಧಾರಣಾ ಕ್ರಮಗಳಿಗೆ ವಿಶ್ವಬ್ಯಾಂಕ್ ಮೆಚ್ಚುಗೆ

Recommended Video

      ಮೋದಿ ಸರ್ಕಾರವನ್ನ ಹಾಡಿ ಹೊಗಳಿದ ವಿಶ್ವ ಬ್ಯಾಂಕ್ | Oneindia Kannada

      ವಾಷಿಂಗ್ಟನ್, ಜನವರಿ 10: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 'ಮಹತ್ವಾಕಾಂಕ್ಷಿ ಸರ್ಕಾರ ಸಮಗ್ರ ಸುಧಾರಣೆ'ಗಳನ್ನುತೆಗೆದುಕೊಳ್ಳುತ್ತಿರುವುದರಿಂದ ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತವು 'ಅಗಾಧ ಬೆಳವಣಿಗೆಯ ಸಾಮರ್ಥ್ಯವನ್ನು' ಹೊಂದಿದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ಹೇಳಿದೆ.

      ಮಾತ್ರವಲ್ಲ 2018ರಲ್ಲಿ ದೇಶವು ಶೇಕಡಾ 7.3 ಬೆಳವಣಿಗೆ ದರವನ್ನು ದಾಖಲಿಸಲಿದೆ ಎಂದು ಅದು ಅಂದಾಜಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಬೆಳವಣಿಗೆ ದರ 7.5ನ್ನು ತಲುಪಲಿದೆ ಎಂದೂ ವಿಶ್ವಬ್ಯಾಂಕ್ ತಿಳಿಸಿದೆ.

      ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಹಿನ್ನಡೆಯ ಮಧ್ಯೆಯೂ ಭಾರತ 2017-18ರಲ್ಲಿ ಶೇಕಡಾ 6.7 ಬೆಳವಣಿಗೆ ದರ ದಾಖಲಿಸಲಿದೆ ಎಂದು ವಿಶ್ವಬ್ಯಾಂಕ್ ತನ್ನ '2018-ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್'ನಲ್ಲಿ ತಿಳಿಸಿದೆ.

      World Bank projects 7.3 percent growth for India in 2018, praises Modi government

      "ಎಲ್ಲಾ ರಂಗಗಳಿಗೆ ಹೋಲಿಸಿದರೂ ಭಾರತ ಉಳಿದೆಲ್ಲಾ ಬೆಳೆವಣಿಗೆ ಹೊಂದುತ್ತಿರುವ ಆರ್ಥಿಕತೆಗಳಿಗಿಂತ ಮುಂದಿನ ಒಂದು ದಶಕದಲ್ಲಿ ಹೆಚ್ಚಿನ ಬೆಳವಣಿಗೆ ದರ ದಾಖಲಿಸಲಿದೆ," ಎಂದು ವಿಶ್ವ ಬ್ಯಾಂಕ್ ಅಧಿಕಾರಿ ಅಹನ್ ಕೋಸೆ ಹೇಳಿದ್ದಾರೆ.

      ಸಂಕ್ರಾಂತಿ ವಿಶೇಷ ಪುಟ

      ಚೀನಾಕ್ಕೆ ಹೋಲಿಸಿದರೆ ಭಾರತ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ದರವನ್ನು ದಾಖಲಿಸಲಿದೆ ಎಂದು ಅವರು ಅಂದಾಜಿಸಿದ್ದಾರೆ.

      2017-18ರಲ್ಲಿ ಚೀನಾ ಶೇಕಡಾ 6.8 ಬೆಳವಣಿಗೆ ದರ ದಾಖಲಿಸುವ ಅಂದಾಜಿದ್ದು ಇದು ಭಾರತಕ್ಕಿಂತ ಶೇ. 0.1 ಹೆಚ್ಚಿನದಾಗಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ ಚೀನಾದ ಬೆಳವಣಿಗೆ ದರ ಶೇ. 6.3 ಮತ್ತು 6.2ಕ್ಕೆ ಕುಸಿಯಲಿದೆ ಎಂದು ಅವರು ಹೇಳಿದ್ದಾರೆ.

      "ಭಾರತದಲ್ಲಿ ಸೆಕೆಂಡರಿ ಶಿಕ್ಷಣ ಮುಗಿಸಿದ ಸಾಕಷ್ಟು ಜನರಿರುವುದರಿಂದ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಅವಕಾಶಗಳಿವೆ. ಕಾರ್ಮಿಕ ಮಾರುಕಟ್ಟೆ ಸುಧಾರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆ, ಜತೆಗೆ ಹೂಡಿಕೆಗೆ ಇದ್ದ ನಿಯಮಗಳ ಸಡಿಲಿಕೆಯಿಂದ ಭಾರತ ಅಭವೃದ್ಧಿ ಸಾಧಿಸುವ ವಿಫುಲ ಅವಕಾಶಗಳನ್ನು ಹೊಂದಿದೆ," ಎಂದು ಅವರು ವಿಶ್ಲೇಷಿಸಿದ್ದಾರೆ.

      ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳಾ ಕಾರ್ಮಿಕರು ಕಡಿಮೆ ಇದ್ದಾರೆ. ಆದರೆ ಮಹಿಳೆಯರನ್ನೂ ಉದ್ಯೋಗ ಮಾರುಕಟ್ಟೆಗ ಕರೆತರುವುದರಿಂದ ಭಾರತ ಮತ್ತಷ್ಟು ಅಭಿವೃದ್ಧಿ ಸಾಧಿಸಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.

      ಖಾಸಗೀ ಹೂಡಿಕೆಗೆ ಉತ್ತೇಜನ ನೀಡುವುದು ಮತ್ತು ಯುವ ಸಮುದಾಯದ ನಿರುದ್ಯೋಗವನ್ನು ನಿವಾರಿಸಿದರೆ ಭಾರತದ ಆರ್ಥಿಕತೆ ಇನ್ನೂ ಹೆಚ್ಚಿನ ಅಭಿವೃದ್ಧಿ ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.

      "ಭಾರತದ್ದು ಬಲು ದೊಡ್ಡ ಆರ್ಥಿಕತೆ. ಇದಕ್ಕೆ ವಿಫುಲ ಅವಕಾಶಗಳಿವೆ. ಜತೆಗೆ ಅದರದ್ದೇ ಆದ ಸವಾಲುಗಳೂ ಇವೆ. ಈ ಸಮಸ್ಯೆಗಳ ಬಗ್ಗೆ ಹಾಲಿ ಸರಕಾರಕ್ಕೆ ಅರಿವಿದೆ. ಮತ್ತು ಈ ಸಮಸ್ಯೆಗಳನ್ನು ಬಗೆಹರಿಸಲು ಅದು ಅತ್ಯುತ್ತಮ ಪ್ರಯತ್ನಗಳನ್ನು ನಡೆಸುತ್ತಿದೆ," ಎಂದು ಕೋಸೆ ನರೇಂದ್ರ ಮೋದಿ ಸರಕಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+