ವಿಪ್ರೋ 2ನೇ ತ್ರೈಮಾಸಿಕದಲ್ಲಿ ಭರ್ಜರಿ ಬೆಳೆ, 35% ನಿವ್ವಳ ಲಾಭ ಏರಿಕೆ

ಬೆಂಗಳೂರು, ಅಕ್ಟೋಬರ್ 15: ಭಾರತದ ಪ್ರಮುಖ ಐಟಿ ಸೇವಾ ಸಂಸ್ಥೆ ವಿಪ್ರೋ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಮಂಗಳವಾರ(ಅಕ್ಟೋಬರ್ 15) ರಂದು ಪ್ರಕಟಿಸಿದೆ. ಜುಲೈ- ಸೆಪ್ಟೆಂಬರ್ ಅವಧಿಯ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ 35ರಷ್ಟು ಏರಿಕೆ ಕಂಡು 2,553 ಕೋಟಿ ರುಗೇರಿದೆ.

ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ವಿಪ್ರೋ ಸಂಸ್ಥೆ ಒಟ್ಟು ಆದಾಯ 15,203 ಕೋಟಿ ರು ನಿಂದ 15,875 ಕೋಟಿ ರು ಗೇರಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ಆದಾಯ ಶೇ4ರಷ್ಟು ಏರಿಕೆ ಕಂಡಿದೆ. ಈ ತ್ರೈಮಾಸಿಕದಲ್ಲಿ ಪ್ರತಿ ಷೇರಿನ ಮೇಲಿನ ಗಳಿಕೆ 4.30 ರು ಪ್ರತಿ ಷೇರಿನಷ್ಟಿತ್ತು. ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ 36.7%ರಷ್ಟು ಏರಿಕೆ ಕಂಡಿದೆ.

Wipro Q2 report: Net Profit jumps 35 pc to Rs 2,553 Crore

ವಿಪ್ರೋ Q2 ಮುಖ್ಯಾಂಶಗಳು:
* ಒಟ್ಟು ಆದಾಯ 15,203 ಕೋಟಿ ರು ನಿಂದ 15,875 ಕೋಟಿ ರು ಗೇರಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ಆದಾಯ ಶೇ4ರಷ್ಟು ಏರಿಕೆ ಕಂಡಿದೆ.
* ಷೇರಿನ ಮೇಲಿನ ಗಳಿಕೆ 4.30 ರು ಪ್ರತಿ ಷೇರಿನಷ್ಟಿದೆ.
* ಐಟಿ ಸೇವಾ ವಿಭಾಗದ ಆದಾಯ 2,048.9 ಮಿಲಿಯನ್ ಡಾಲರ್ ನಷ್ಟಾಗಿದೆ.
* ಡಿಸೆಂಬರ್ ತ್ರೈಮಾಸಿಕದಲ್ಲಿ 2.07 ಬಿಲಿಯನ್ ಡಾಲರ್ ಆದಾಯ ಹಾಗೂ 2.11 ಬಿಲಿಯನ್ ಡಾಲರ್ ಐಟಿ ಸೇವಾ ವಿಭಾಗದ ಆದಾಯ ನಿರೀಕ್ಷೆ ಹೊಂದಿದೆ ಎಂದು ಸಿಎಫ್ಒ ಜತಿನ್ ದಲಾಲ್ ಹೇಳಿದ್ದಾರೆ.

ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಿಸಿಎಸ್ ನ ತ್ರೈಮಾಸಿಕ ನಿರೀಕ್ಷಿತ ಮಟ್ಟ ಮುಟ್ಟಿಲ್ಲ, ಇನ್ಫೋಸಿಸ್ ಹಾಗೂ ಹೀಗೂ ನಿರೀಕ್ಷೆಗೆ ತಕ್ಕ ಫಲಿತಾಂಶ ನೀಡಿದರೂ ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಳ್ಲಿ ನಿವ್ವಳ ಲಾಭ ತುಸು ಇಳಿಕೆ ಕಂಡಿದೆ. ಆದರೆ, ಈ ಎರಡು ಪ್ರತಿಸ್ಪರ್ಧಿ ಕಂಪನಿಗಳ ಮುಂದೆ ವಿಪ್ರೋ ತ್ರೈಮಾಸಿಕ ವರದಿ ಫಲಿತಾಂಶ ಉತ್ತಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+