ಹೊಸ ಸಿಇಒ ಹುಡುಕಾಟದಲ್ಲಿದೆ ವಿಪ್ರೋ, ನೀಮುಚ್ವಾಲ ರಾಜೀನಾಮೆ

ಬೆಂಗಳೂರು, ಜನವರಿ 31: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ಸಿಒಒ ಸ್ಥಾನದಿಂದ ಅಬಿದ್ ಅಲಿ ನೀಮುಚ್ವಾಲ ಕೆಳಗಿಳಿದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಸಂಸ್ಥೆಯ ಉನ್ನತ ಹುದ್ದೆ ತೊರೆಯುತ್ತಿದ್ದಾರೆ. ಸದ್ಯ ವಿಪ್ರೋ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸ್ಥಾನಕ್ಕೆ ಹೊಸಬರನ್ನು ಹುಡುಕುತ್ತಿದೆ. ಹೊಸ ಸಿಇಒ ನೇಮಕವಾಗುವ ತನಕ ಹಂಗಾಮಿ ಸಿಇಒ ಆಗಿ ಅಬಿದ್ ಅಲಿ ಮುಂದುವರೆಯಲಿದ್ದಾರೆ ಎಂದು ವಿಪ್ರೋ ಸಂಸ್ಥೆ ಚೇರ್ಮನ್ ರಿಷದ್ ಪ್ರೇಂಜಿ ಹೇಳಿದರು.

2015ರ ಮಾರ್ಚ್ ತಿಂಗಳಿನಲ್ಲಿ ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಹಿರಿಯ ಉದ್ಯೋಗಿ ಅಬಿದ್ ಅಲಿ ಅವರನ್ನು ವಿಪ್ರೋ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅಬಿದ್ ಅಲಿ ನೀಮುಚ್ವಾಲ ಅವರು ಈಗ ವಿಪ್ರೋ ಸಿಒಒ, ಗ್ರೂಪ್ ನಿರ್ದೇಶಕರಾಗಿ ಫೆಬ್ರವರಿ 1, 206ರಲ್ಲಿ ನೇಮಕಗೊಂಡರೂ ಏಪ್ರಿಲ್ 1 ರಂದು ಅಧಿಕಾರ ಸ್ವೀಕರಿಸಿದ್ದರು. ಈಗ ಟಿಕೆ ಕುರಿಯನ್ ಬದಲಿಗೆ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸಂಸ್ಥೆಯ ಚೇರ್ಮನ್ ಅಜೀಂ ಪ್ರೇಮ್ ಜಿ ಅವರಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುತ್ತಿದ್ದರು.

ವಿಪ್ರೋ ಸಂಸ್ಥೆ ಜಾಗತಿಕ ಮೂಲ ಸೌಕರ್ಯ ಸೇವೆ, ವ್ಯವಹಾರಿಕ ಅನ್ವಯ ಸೇವೆ, ಉನ್ನತ ತಂತ್ರಜ್ಞಾನ ಸಂಬಂಧಿತ ವಿಭಾಗಗಳ ಕಾರ್ಯ ನಿರ್ವಹಣೆ ಹೊಣೆ ಹೊಸ ಸಿಇಒ ಮೇಲಿರುತ್ತದೆ. ಒಟ್ಟಾರೆ ಯುರೋಪ್, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಕೇಂದ್ರಗಳ ಏಳಿಗೆ ನೋಡಿಕೊಳ್ಳಬೇಕಾಗುತ್ತದೆ.

Wipro CEO Abidali Neemuchwala steps down

ಸುಮಾರು 23 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅಬಿದ್ ಅವರು ಟಿಸಿಎಸ್ ನ ಬಿಪಿಒ ವಿಭಾಗದ ಪ್ರಗತಿಗೆ ಕಾರಣರಾಗಿದ್ದರು. ಎನ್ ಐಟಿ ರಾಯ್ ಪುರ್ ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಇಂಜಿನಿಯರ್ ಪದವಿ ಪಡೆದಿರುವ ನಿಮೂಚ್ವಾಲ ಅವರು ಐಐಟಿ ಮುಂಬೈನಿಂದ ಇಂಡಸ್ಟ್ರೀಯಲ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+