• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈಟ್ ಫೀಲ್ಡ್ ನಲ್ಲಿ ಬಾಗಿಲು ತೆರೆದ ವೈನ್ ಎಕ್ಸ್ ಪ್ರೆಸ್

By Rajendra
|

ಬೆಂಗಳೂರು, ನ.26: ಒಂದು ಕ್ಷಣ ಹೋಗಲೇಬೇಕೆನಿಸಿ ನೆನಪಾಗುವಂತಹ ಒಂದು ಸಂಜೆ. ಮಧುಲೋಕ ಲಿಕ್ಕರ್ ಬೋಟಿಕ್ ಬೆಂಗಳೂರಿನಲ್ಲಿ ಮೊತ್ತಮೊದಲ ವೈನ್ ಎಕ್ಸ್ ಪ್ರೆಸ್ ನ ಬಾಗಿಲನ್ನು ವೈಟ್ ಫೀಲ್ಡ್ ನಲ್ಲಿ ತೆರೆದಿದ್ದು, ನಗರದಾದ್ಯಂತ ಇರುವ ವೈನ್ ಪ್ರಿಯರಿಗೆ ಖುಷಿಯನ್ನು ತಂದಿದೆ.

ಮಧುಲೋಕ ಲಿಕ್ಕರ್ ಬೋಟಿಕ್ ಮತ್ತು ಎನೋಟಿಕಾದ ಸ್ಥಾಪಕರಾದ ಕೆ.ಎಸ್. ಲೋಕೇಶ್ ಅವರ ಕನಸಿನ ಕೂಸಾಗಿರುವ ವೈನ್ ಎಕ್ಸ್ ಪ್ರೆಸ್ ಭಾರತೀಯ ಮತ್ತು ಅಂತಾರಾಷ್ಟ್ರೀಯ ಎರಡೂ ಇರುವಂತಹ ಸುಮಾರು 600 ರಷ್ಟು ವೈನ್ ಲೇಬಲ್ ಗಳನ್ನು ಮಾರಾಟ ಮಾಡುತ್ತಿದೆ.

ನೀವು ನೋಡಬಯಸುವಂತಹ ಹಲವಾರು ವೈನ್ ಲೇಬಲ್ ಗಳು ಲಭ್ಯವಿರುವುದರ ಜೊತೆಗೆ, ವಿವಿಧ ವೈನ್ ಗಳನ್ನು ಆಯ್ಕೆ ಮಾಡಲು ಸೂಕ್ತವಾದ ಪರಿಸರ ಇರುವಂತೆ ವೈನ್ ಎಕ್ಸ್ ಪ್ರೆಸನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಮರದ ಫಿನಿಶಿಂಗ್ ಸ್ವಾಗತಾರ್ಹ.

ಇಲ್ಲಿ ಒಂದು ಬಾಟಲಿಯನ್ನು ಆಯ್ಕೆ ಮಾಡಿ, ಅಲ್ಲಿಂದ ನೇರವಾಗಿ ಪಾರ್ಟಿಗೆ ಹೋಗುವವರಿದ್ದರೆ ನಿಮಗೆ ನಿಮ್ಮ ಆಯ್ಕೆಯ ವೈನ್ ಚಿಲ್ಲರ್ ಅನ್ನೂ ಒದಗಿಸಲಾಗುತ್ತದೆ. ಒಟ್ಟಿನಲ್ಲಿ ವೈನ್ ಎಕ್ಸ್ ಪ್ರೆಸ್ ನಲ್ಲಿ ಅತ್ಯಂತ ಸಣ್ಣಪುಟ್ಟ ವಿಷಯಗಳನ್ನೂ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತದೆ.

ವೈನ್ ಎಕ್ಸ್ ಪ್ರೆಸನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವೈನ್ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ. ಕೃಷ್ಣ, "ಕರ್ನಾಟಕ ರಾಜ್ಯವು ವೈನ್ ಸ್ಥಾವರಗಳ ಅಭಿವೃದ್ಧಿಗೆ ಅನುಕೂಲಕರ ತಾಣವಾಗಿದೆ. ಕಳೆದ ಕೆಲವು ವರ್ಷಗಳಿಂದ, ಅತ್ಯದ್ಭುತ ಲೇಬಲ್ ಗಳು ಮುಂಚೂಣಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಒಂದೇ ಸೂರಿನಡಿ ಇಂತಹ ಹಲವು ಬಗೆಯ ಆಯ್ಕೆಗಳನ್ನು ಒದಗಿಸುವ ವೈನ್ ಎಕ್ಸ್ ಪ್ರೆಸ್ ನಂತಹ ಪ್ರದೇಶವು, ಹೊಸ ಹಾಗೂ ಅನುಭವಿ ವೈನ್ ಪ್ರೇಮಿಗಳಿಗೆ ಈ ಪಾನೀಯವನ್ನು ಇನ್ನಷ್ಟು ಪ್ರೀತಿಸುವಂತೆ ಮಾಡುತ್ತದೆ'' ಎಂದರು.

ಈ ಸಾಯಂಕಾಲದ ಗೌರವ ಅತಿಥಿ, ಟೆಕ್ನಿಕಲರ್ ಇಂಡಿಯಾ ಪ್ರೈ.ಲಿ.ನ ಹೆಡ್ ಬಿರೇನ್ ಘೋಷ್ ಮಾತನಾಡಿ, "ಬೆಂಗಳೂರು ಒಂದು ಕಾಸ್ಮೋಪಾಲಿಟನ್ ನಗರ. ಹಾಗಾಗಿ ಇಲ್ಲಿನ ನಿವಾಸಿಗಳಲ್ಲಿ ವೈನ್ ಮೇಲಿನ ಪ್ರೀತಿ ಸ್ವಲ್ಪ ಹೆಚ್ಚೇ ಇದೆ. ನಿರಂತರ ಪಯಣ ಹಾಗೂ ಸೂಕ್ತವಾದ ಪೇರಿಂಗ್ ನಲ್ಲಿರುವ ನೈಜ ಕುತೂಹಲವು ನಗರದಲ್ಲಿ ಇದನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತಿದೆ. ಸೂಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಕಾರಣ ಹಾಗೂ ಲೇಬಲ್ ಗಳ ಸಾಕಷ್ಟು ಕಲೆಕ್ಷನ್ ಇರುವ ಕಾರಣ ವೈನ್ ಪ್ರೇಮಿಗಳಿಗೆ ಇದು ಮುದ ನೀಡುತ್ತದೆ'' ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್. ಲೋಕೇಶ್, "ವೈನ್ ಎಕ್ಸ್ ಪ್ರೆಸ್ ನಲ್ಲಿ ಪ್ರತಿಯೊಂದು ವಿಚಾರದ ಮೇಲೂ ಗಮನ ಹರಿಸಲಾಗುತ್ತದೆ. ನಮ್ಮ ಅಲಂಕಾರವೇ ವೈನ್ ಮಾರಾಟಗಾರನನ್ನು ಪ್ರತಿಬಿಂಬಿಸುತ್ತದೆ. ಏಕೈಕ ದಿಮ್ಮಿಯಿಂದ ಕೆತ್ತಲಾಗಿರುವ ಬುದ್ಧನ ಪ್ರತಿಮೆಯು ಈ ಜಾಗದ ಪ್ರಶಾಂತತೆಗೆ ಮೆರುಗು ನೀಡುತ್ತಿದೆ.

ಖರೀದಿಸಲಾಗುವ ವೈನ್ ಗಳ ಆಯ್ಕೆ ಹಾಗೂ ಅದನ್ನು ಓಪನ್ ಮಾಡುವಾಗ, ನಾವು ಸರಿಯಾದ ಉಷ್ಣತೆಯಲ್ಲಿ ಅದನ್ನು ನಿರ್ವಹಿಸುವುದಿದ್ದರೆ ನಮಗೆ ಚಿಲ್ಲರ್ ಕೂಡ ಸಿಗುತ್ತದೆ. ವೈನ್ ಕುಡಿಯುವ ಸಂಸ್ಕೃತಿಯಲ್ಲಿ ದೇಶದ ಕೇಂದ್ರಭಾಗವೆಂದು ಕರೆಸಿಕೊಳ್ಳಲು ಬೆಂಗಳೂರು ಸೂಕ್ತ ಸ್ಥಳವಾಗಿದೆ. ಈ ಪ್ರದೇಶವು ಆ ದಿಕ್ಕಿನತ್ತ ಚಲಿಸುವ ಒಂದು ಹೆಜ್ಜೆಯಾಗಿದೆ'' ಎಂದರು. (ಒನ್ಇಂಡಿಯಾ ಬಿಜಿನೆಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It was an evening that will be remembered for a while to come. Bangalore’s first Wine Express, by Madhuloka Liquor Boutique opened its doors in Whitefeild to the delight of wine aficionados across the city. A brainchild of K S Lokesh, Founder of Madhuloka Liquor Boutique and Enoteca, Wine Express will exclusively retail over 600 wine labels both Indian and international.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more