Gold Price: ಚಿನ್ನದ ಬೆಲೆ ಮತ್ತಷ್ಟು ಕುಸಿಯೋದು ಫಿಕ್ಸ್?
ಚಿನ್ನದ ಬೆಲೆ ಹಾವು ಏಣಿ ಆಟ ಆಡುತ್ತಿದೆ. ಎರಡು ದಿನ ಭರ್ಜರಿಯಾಗಿ ಏರಿಕೆಯಾಗುವ ಚಿನ್ನದ ಬೆಲೆ ಮತ್ತೊಂದು ದಿನ ದಿಢೀರ್ ಎಂದು ಕುಸಿಯುತ್ತಿದೆ. ಎರಡು ದಿನಗಳಲ್ಲಿ 11000 ಸಾವಿರ ರೂಪಾಯಿ ಏರಿಕೆಯಾಗಿದ್ದ 100 ಗ್ರಾಂ ಚಿನ್ನದ ಬೆಲೆ, ಶನಿವಾರ ಒಂದೇ ದಿನ 20,800 ರೂಪಾಯಿ ಕುಸಿದಿದೆ.
ಶುಕ್ರವಾರ 1 ಗ್ರಾಂ ಆಭರಣ ಚಿನ್ನದ ಬೆಲೆ 190 ರೂಪಾಯಿ ಇಳಿಕೆಯಾಗಿರುವುದು ಆಭರಣ ಪ್ರಿಯರ ಖುಷಿಗೆ ಕಾರಣವಾಗಿದೆ. 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಒಂದೇ ದಿನ 208 ರೂಪಾಯಿ ಕುಸಿತ ಕಂಡಿದೆ.

ಶುಕ್ರವಾರ 6,760 ರೂಪಾಯಿ ಇದ್ದ 1 ಗ್ರಾಂ 22 ಕ್ಯಾರೆಟ್ (ಆಭರಣ) ಚಿನ್ನದ ಬೆಲೆ ಶನಿವಾರ 6,570 ರೂಪಾಯಿಗೆ ಮಾರಾಟವಾಗಿದೆ. 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಶುಕ್ರವಾರ 7,375 ರೂಪಾಯಿ ಇದ್ದರೆ, ಶನಿವಾರ 7,167 ರೂಪಾಯಿಗೆ ಮಾರಾಟವಾಗಿದೆ.
ಮತ್ತಷ್ಟು ಕುಸಿತ ಸಾಧ್ಯತೆ?
ಚಿನ್ನದ ಬೆಲೆ ಏರಿಳಿತ ಹಲವು ಅಂಶಗಳನ್ನು ಆಧರಿಸಿದೆ. ಜಾಗತಿಕ ಬೇಡಿಕೆ, ಡಾಲರ್ ಮೌಲ್ಯ, ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಶನಿವಾರ ಒಂದೇ ದಿನ 20,800 ರೂಪಾಯಿ ಕುಸಿದ ಬಳಿಕ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ ಮಾರುಕಟ್ಟೆ ಹೀಗೆ ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ.
ಬೆಲೆ ಕುಸಿದರೂ ಮತ್ತಷ್ಟು ಏರಿಕೆಯಾಗುವುದು ಮಾತ್ರ ಖಚಿತ ಅದಕ್ಕೆ ಚಿನ್ನದ ಮೇಲೆ ಹೂಡಿಕೆಯನ್ನು ಯಾವಾಗಲೂ ಸುರಕ್ಷಿತ ಎಂದು ಹೇಳಲಾಗುತ್ತದೆ.
ಬೆಳ್ಳಿ ಬೆಲೆ ಕೂಡ ಕುಸಿತ
ಬೆಳ್ಳಿ ದರ ಇನ್ನೇನು 1 ಲಕ್ಷ ರೂಪಾಯಿ ದಾಟುತ್ತದೆ ಎನ್ನುವಾಗಲೇ ಮತ್ತೆ ಕುಸಿತ ಕಂಡಿದೆ. ಶುಕ್ರವಾರ 96,000 ಮುಟ್ಟಿದ್ದ ಒಂದು ಕೆ.ಜಿ. ಬೆಳ್ಳಿ ಬೆಲೆ ಶನಿವಾರ 4500 ರೂಪಾಯಿ ಕುಸಿದು 91,500 ರೂಪಾಯಿಗೆ ಬಂದಿದೆ. ಟ್ರೆಂಡ್ ನೋಡಿದರೆ ಬೆಳ್ಳಿ ಬೆಲೆ ಕೂಡ ಏರಿಳಿತ ಕಾಣುವ ಸಾಧ್ಯತೆ ಇದೆ.












Click it and Unblock the Notifications