Gold Rate: ಆಭರಣ ಪ್ರಿಯರಿಗೆ ಶುಭ ಶುಕ್ರವಾರ! ಚಿನ್ನದ ಬೆಲೆ ಭಾರಿ ಕುಸಿತ ಸಾಧ್ಯತೆ
ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ-ಇಳಿಕೆಯಾಗುತ್ತಲೇ ಇರುತ್ತದೆ. ಪ್ರತಿ ದಿನ ಕೂಡ ಚಿನ್ನದ ಬೆಲೆಯಲ್ಲಿ ಬದಲಾವಣೆ ಆಗುತ್ತದೆ. ಕಳೆದ ಕೆಲವು ದಿನಗಳಿಂದ ಏರಿಳಿತದ ಹಾದಿಯಲ್ಲಿರುವ ಚಿನ್ನದ ಬೆಲೆ ಮತ್ತೆ ಕುಸಿಯುವ ಸಾಧ್ಯತೆ ಇದೆ.
ಡಾಲರ್ ಮೌಲ್ಯ, ಬೇಡಿಕೆ, ಷೇರು ಮಾರುಕಟ್ಟೆ ಏರಿಳಿತ ಚಿನ್ನದ ಬೆಲೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ. ಚೀನಾದ ಬ್ಯಾಂಕ್ ಚಿನ್ನವನ್ನು ಖರೀದಿ ಮಾಡುವುದನ್ನು ನಿಲ್ಲಿಸಿದ್ದು ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿತ್ತು. ಒಂದೇ ದಿನ ಚಿನ್ನದ ಬೆಲೆ 20 ಸಾವಿರ ರೂಪಾಯಿ ಕುಸಿತ ಕಂಡಿತ್ತು.

ಅದಾದ ಬಳಿಕ ಚಿನ್ನದ ದರದಲ್ಲಿ ಏರಿಳಿತ ಮುಂದುವರೆದಿದೆ. ಶುಕ್ರವಾರ ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಇಳಕೆಯಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಆದರೆ ಇದು ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಳವಣಿಗೆಯನ್ನು ಆಧರಿಸಿದೆ.
ಸದ್ಯ ಚಿನ್ನದ ಬೆಲೆ ಎಷ್ಟಿದೆ?
ಗುರುವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬುಧವಾರ ಇದ್ದ ಬೆಲೆಯೇ ಗುರುವಾರ ಕೂಡ ಮುಂದುವರೆದಿದೆ. ಒಂದು ಗ್ರಾಂ ಆಭರಣ ಚಿನ್ನ (22 ಕ್ಯಾರೆಟ್) 6,615 ರೂಪಾಯಿ ಆಗಿತ್ತು. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 7,216 ರೂಪಾಯಿ ಇದೆ. ಶುಕ್ರವಾರ ಈ ಬೆಲೆಯಲ್ಲಿ ಮತ್ತೆ ವ್ಯತ್ಯಾಸವಾಗುವ ಸಾಧ್ಯತೆ ಇದ್ದು ಬೆಲೆ ಕುಸಿಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಬೆಳ್ಳಿ ಬೆಲೆಯಲ್ಲಿ ಅಲ್ಪ ಕುಸಿತ
ಇನ್ನು ಬೆಳ್ಳಿ ಧಾರಣೆಯಲ್ಲಿ ಗುರುವಾರ ಅಲ್ಪ ಕುಸಿತ ಕಂಡಿದ್ದು ಶುಕ್ರವಾರ ಕೂಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಬುಧವಾರ 91,300 ರೂಪಾಯಿ ಇದ್ದ ಬೆಳ್ಳಿ ಬೆಲೆ 600 ರೂಪಾಯಿ ಕುಸಿತ ಕಂಡು 90,700 ರೂಪಾಯಿಗೆ ಮಾರಾಟವಾಗಿದೆ.












Click it and Unblock the Notifications