• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

4 ವರ್ಷದಲ್ಲಿ 2ನೇ ಸಲ ಬಡ್ಡಿ ದರ ಏರಿಸಿದ ಆರ್ ಬಿಐ, ಕಾರಣ ಏನು?

|

ನವದೆಹಲಿ, ಆಗಸ್ಟ್ 2 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್ ಬಿಐ) ರೆಪೋ ದರ (ಬ್ಯಾಂಕ್ ಗಳಿಗೆ ಈ ದರದಲ್ಲಿ ಸಾಲ ನೀಡುತ್ತದೆ) 0.25 ಹೆಚ್ಚಿಸುವ ಮೂಲಕ 6.5ಕ್ಕೆ ಏರಿಕೆ ಮಾಡಿದೆ. ಮತ್ತು ರಿವರ್ಸ್ ರೆಪೋ ದರ (ಬ್ಯಾಂಕ್ ಗಳಿಂದ ಪಡೆಯುವ ದರ) 6.25 ಮಾಡಿದೆ.

ಈ ಮೂಲಕ ಇದು ಎರಡು ತಿಂಗಳಲ್ಲಿ ಎರಡನೇ ಏರಿಕೆ ಆಗಿದ್ದು, ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಎರಡನೇ ಬಾರಿಗೆ ಏರಿಕೆ ಮಾಡಲಾಗಿದೆ. 2014ರ ಜನವರಿಯಲ್ಲಿ 8% ಇದ್ದ ಬಡ್ಡಿದರವು 2017ರ ಆಗಸ್ಟ್ ನಲ್ಲಿ 6% ತಲುಪಿತ್ತು. 2018ರ ಆಗಸ್ಟ್ ತಿಂಗಳಲ್ಲಿ 6.5%ಗೆ ಏರಿಕೆ ಕಂಡಿದೆ.

ಸತತವಾಗಿ ರೆಪೋ ದರ ಏರಿಕೆ, ಗೃಹ ಸಾಲ ಆಗಲಿದೆ ದುಬಾರಿ?

ಉತ್ತಮ ಮುಂಗಾರು ಹಾಗೂ ವಾಡಿಕೆಗಿಂತ ಹೆಚ್ಚಿನ ಕನಿಷ್ಠ ಬೆಲೆ ನೀಡಲು ಸರಕಾರ ಮುಂದಾಗಿರುವುದರಿಂದ ರೈತರ ಆದಾಯವೂ ಹೆಚ್ಚಾಗಿದೆ. ಗ್ರಾಮೀಣ ಬೇಡಿಕೆ ಹೆಚ್ಚಾಗುವ ಜತೆಗೆ ಹಣದುಬ್ಬರವೂ ಮೇಲೇರಿದೆ. ಇತ್ತೀಚೆಗೆ ಕಡಿತಗೊಳಿಸಿದ ಜಿಎಸ್ ಟಿ ದರವನ್ನು ಜಾರಿಗೊಳಿಸಿದರೆ ಹಣದುಬ್ಬರದ ಮೇಲೆ ಪರಿಣಾಮ ಆಗಿ, ಬದಲಾವಣೆ ಕಾಣಬಹುದು.

Why RBI is making money more expensive?

ಕಚ್ಚಾ ತೈಲದ ಬೆಲೆ ಎಲ್ಲಿ ಮುಟ್ಟಬಹುದು ಎಂಬ ಅಂದಾಜಿಲ್ಲ. ಆ ಕಾರಣಕ್ಕೆ ಇದು ಕೂಡ ಹಣದುಬ್ಬರಕ್ಕೆ ಒಂದಿಷ್ಟು ಕೊಡುಗೆ ನೀಡುತ್ತದೆ. ಏಷ್ಯಾದ ಕರೆನ್ಸಿಗಳ ಪೈಕಿ ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಅತಿ ಹೆಚ್ಚಿನ ಕುಸಿತ ಕಂಡಿದೆ. ಈಗ ಬಡ್ಡಿ ದರ ಹೆಚ್ಚಿಸುವುದರಿಂದ ರುಪಾಯಿ ಮೌಲ್ಯ ಕುಸಿತ ತಡೆಯಬಹುದು. ವಿದೇಶಿ ಬಂಡವಾಳ ಆಕರ್ಷಿಸಬಹುದು ಎಂಬ ನಿರೀಕ್ಷೆ ಇದೆ.

ಆದರೆ, ಸಾಲಗಳು ದುಬಾರಿಯಾಗಿಯೇ ಇರಲಿವೆ. ರೆಪೋದರ ಕಳೆದ ನಾಲ್ಕು ವರ್ಷದಲ್ಲಿ ಎರಡು ಪರ್ಸೆಂಟ್ ಇಳಿದಿದ್ದರೆ, ಗೃಹ ಸಾಲದ ದರ ಒಂದೂವರೆ ಪರ್ಸೆಂಟ್ ಮಾತ್ರ ಇಳಿಕೆ ಕಂಡಿದೆ. ಇನ್ನು ಠೇವಣಿಗಳ ಮೇಲಿನ ಬಡ್ಡಿದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಏರಿಕೆ ಮಾಡಿದ್ದು, ಇತರ ಬ್ಯಾಂಕ್ ಗಳು ಸಹ ಅದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Reserve Bank of India (RBI) hiked the repo rate (at which it lends to banks) by 0.25 per cent to 6.5 per cent and the reverse repo rate (at which it borrows from banks) to 6.25 per cent. It is the second hike in two months and the second under Modi government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more