
ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ
Recommended Video

ಮುಂಬೈ, ಫೆಬ್ರವರಿ 15: ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ (47) ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ. ಕೇಟ್ ವಿನ್ಸ್ ಲೆಟ್, ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ ಮುಂತಾದವರು ನೀರವ್ ವಿನ್ಯಾಸದ ಆಭರಣಕ್ಕಾಗಿ ಹಾತೊರೆಯುವ ಆತನ ಕ್ಲೈಂಟುಗಳು. ಈಗ ಭಾರತದಿಂದ ಸ್ವಿಟ್ಜರ್ಲೆಂಡ್ ಗೆ ಪರಾರಿ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಕೂಡಾ ಆರೋಪಿ.
ನೀರವ್ ವಿರುದ್ಧ ಎರಡು ವಾರಗಳ ಹಿಂದೆ ಪಿಎನ್ ಬಿ ದೂರು ನೀಡಿತ್ತು. ದೂರು ನೀಡಿದ ಮರು ದಿನವೇ ನೀರವ್ ನಾಪತ್ತೆಯಾಗಿರುವ ಸುದ್ದಿ ಬಂದಿದೆ. ಸದ್ಯ ನೀರವ್ ವಿರುದ್ಧ ಲುಕ್ ಔಟ್ ನೋಟಿಸ್ ನೀಡಲಾಗಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 280 ಕೋಟಿ ರೂ.ಗಳ ಅವ್ಯವಹಾರ ಮಾಡಿರುವ ಆರೋಪದ ಹೊತ್ತಿರುವ ನೀರವ್ ಮೋದಿ ಅವರ ಮನೆ, ಕಚೇರಿ ಮೇಲೆ ಗುರುವಾರದಂದು ದಾಳಿ ನಡೆಸಿದ್ದಾರೆ.

ವಂಚನೆ ಪ್ರಕರಣದ ಆರೋಪಿಗಳು
ನೀರವ್ ಮೋದಿ, ಪತ್ನಿ ಅಮಿ, ಸೋದರ ನಿಶ್ಚಲ್, ಪಾರ್ಟ್ನರ್ ಮೆಹುಲ್ ಚೌಕ್ಸಿ, ಡೈಮಂಡ್ಸ್ ಆರ್ ಯುಎಸ್, ಸೋಲಾರ್ ಎಕ್ಸ್ ಪೋರ್ಟ್ಸ್ ಹಾಗೂ ಸ್ಟೆಲ್ಲಾರ್ ಡೈಮಂಡ್ಸ್ ಸಂಸ್ಥೆ ಮೇಲೆ ಕೇಸು ದಾಖಲಾಗಿದೆ.
ಐಪಿಸಿ ಸೆಕ್ಷನ್ 120 ಬಿ, 420, ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.280 ಕೋಟಿ ರೂ. ವಂಚನೆ ಪ್ರಕರಣ, ನೀರವ್ ಮೋದಿ ಮೇಲೆ ಸಿಬಿಐ ಎಫ್ಐಆರ್

ಗುಜರಾತಿನ ಸೂರತ್ ನಲ್ಲಿ ಜನಿಸಿದರು
* ಫೈವ್ ಸ್ಟಾರ್ ಡೈಮಂಡ್ ಸ್ಥಾಪಕರಾಗಿರುವ ನೀರವ್ ಅವರು ಗುಜರಾತಿನ ಸೂರತ್ ನಲ್ಲಿ ಜನಿಸಿದರು.
* ತನ್ನದೇ ಆದ ಬ್ರಾಂಡ್ ಬೆಳಸಿಕೊಂಡರು. ಭಾರತದಲ್ಲದೆ ನ್ಯೂಯಾರ್ಕ್, ಲಂಡನ್, ಬೀಜಿಂಗ್, ಹಾಂಗ್ ಕಾಂಗ್, ಮಕಾವ್ ಹಾಗೂ ಸಿಂಗಪುರದಲ್ಲಿ ಆಭರಣ ಮಳಿಗೆಗಳನ್ನು ನೀರವ್ ಒಡೆತನದ ಸಂಸ್ಥೆಗಳು ಹೊಂದಿವೆ.

ಮುಂಬೈನಲ್ಲಿ ಮನೆ ಹೊಂದಿದ್ದಾರೆ
* ವಿಶ್ವದ ವಜ್ರದ ರಾಜಧಾನಿ ಬೆಲ್ಜಿಯಂನ ಆಂಟ್ವರ್ಪ್ ನಲ್ಲಿ ಬೆಳೆದರು. ಮುಂಬೈನಲ್ಲಿ ಮನೆ ಹೊಂದಿದ್ದಾರೆ.
* ವಾರ್ಟನ್ ಬಿಸಿನೆಸ್ ಸ್ಕೂಲ್ ನಲ್ಲಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದರು.
* 19 ವಯಸ್ಸಿನಲ್ಲಿ ತಮ್ಮ ಸೋದರ ಸಂಬಂಧಿಯ ಗೀತಾಂಜಲಿ ಜೇಮ್ಸ್ ಸೇರಿಕೊಂಡರು.
* 2009ರಲ್ಲಿ ಮೊದಲ ಬಾರಿಗೆ ಪರಿಚಿತರೊಬ್ಬರಿಗೆ ಮಾಡಿದ ವಿನ್ಯಾಸದಿಂದ ಜನಪ್ರಿಯತೆ ಗಳಿಸಿದರು.

ಸೆಲೆಬ್ರಿಟಿ ವಿನ್ಯಾಸಕ
* 19 ವಯಸ್ಸಿನಲ್ಲಿ ತಮ್ಮ ಸೋದರ ಸಂಬಂಧಿಯ ಗೀತಾಂಜಲಿ ಜೇಮ್ಸ್ ಸೇರಿಕೊಂಡರು.
* 2009ರಲ್ಲಿ ಮೊದಲ ಬಾರಿಗೆ ಪರಿಚಿತರೊಬ್ಬರಿಗೆ ಮಾಡಿದ ವಿನ್ಯಾಸದಿಂದ ಜನಪ್ರಿಯತೆ ಗಳಿಸಿದರು.
* ಕೇಟ್ ವಿನ್ಸ್ ಲೆಟ್, ಐಶ್ವರ್ಯಾ ರೈ, ಪ್ರಿಯಾಂಕಾ ಛೋಪ್ರಾ ಮುಂತಾದವರು ನೀರವ್ ವಿನ್ಯಾಸದ ಆಭರಣಕ್ಕಾಗಿ ಹಾತೊರೆಯುವ ಆತನ ಕ್ಲೈಂಟುಗಳು.

ನೀರವ್ ಮೋದಿ ಸಾಧನೆಗಳು
* ಸೊಥೆಬಿಯ ಕೆಟಲಾಗ್ ನಲ್ಲಿ 2010ರಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ವಿನ್ಯಾಸಕ.
* 2013ರಲ್ಲಿ ಫೋರ್ಬ್ಸ್ ಪ್ರಕಟಣೆಯ ಭಾರತೀಯ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಇವರ ಹೆಸರಿತ್ತು.
* ಸದ್ಯ ವಿಶ್ವದ 85ನೇ ಶ್ರೀಮಂತ ಉದ್ಯಮಿ.