Gold: ಚಿನ್ನ ಕಂಡು ಹಿಡಿದದ್ದೇ ಇವರು! ನದಿ ತೀರದಲ್ಲೇ ರಾಶಿ ರಾಶಿ ಸಿಗುತ್ತಿತ್ತು ಬಂಗಾರ: ಅಚ್ಚರಿಯ ಇತಿಹಾಸ

ಜನರು ಬಳಸಿದ ಅತ್ಯಂತ ಹಳೆಯ ಮತ್ತು ಅಮೂಲ್ಯವಾದ ಲೋಹಗಳಲ್ಲಿ ಚಿನ್ನ ವೂ ಒಂದು. ಇದನ್ನು ರಾಜರು ಮಾತ್ರ ಬಳಸ್ತಾ ಇದ್ದುದಲ್ಲ, ಕೇವಲ ಆಭರಣಗಳಾಗಿ ಉಪಯೋಗಿಸ್ತಾ ಇದ್ದದ್ದೂ ಅಲ್ಲ. ಬಂಗಾರವನ್ನು ಹಣದ ರೂಪದಲ್ಲಿಯೂ, ಹಳೆಯ ಪವಿತ್ರ ಸ್ಥಳಗಳಲ್ಲಿಯೂ ಬಳಸಲಾಗ್ತಾ ಇತ್ತು. ಚಿನ್ನವನ್ನು ಯಾವಾಗಲೂ ಸಂಪತ್ತು, ಶುದ್ಧತೆ ಮತ್ತು ಶಕ್ತಿಯ ಸಂಕೇತವಾಗಿಯೇ ನೋಡಲಾಗ್ತಾ ಇತ್ತು. ಪ್ರಾಚೀನ ಕಾಲದಿಂದಲೂ ಚಿನ್ನ ಎಂದರೆ ಹೆಮ್ಮೆ, ಹಿರಿಮೆಯ ಪ್ರಗತಿ.

ಚಿನ್ನದ ಬೆಲೆ ದಿನೇ ದಿನೇ ಏರ್ತಾ ಇದೆ. ಚಿನ್ನವನ್ನು ಖರೀದಿ ಮಾಡುವುದು ಇರಲಿ, ಅದರತ್ತ ತಿರುಗಿ ನೋಡುವುದು ಕೂಡಾ ಕಷ್ಟವಾಗ್ತಾ ಇದೆ. ಹೀಗಾಗುವಾಗ ಎಷ್ಟೋ ಸಾರಿ ಈ ಚಿನ್ನವನ್ನು ಯಾರಾದರೋ ಕಂಡು ಹಿಡಿದರೋ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ಹಾಗಿದ್ದರೆ ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

Gold

ನದಿ ದಡದಲ್ಲಿಯೇ ಸಿಗುತ್ತಿತ್ತು ಬಂಗಾರ

ಈಗ ಚಿನ್ನವನ್ನು ಗಣಿಗಾರಿಕೆ ಮಾಡುವ ಮೂಲಕ ಹೊರ ತೆಗೆಯಲಾಗುತ್ತದೆ. ಆದರೆ ಹಿಂದೆ ಬಂಗಾರವನ್ನು ಗಣಿಗಳಿಂದ ಹೊರ ತೆಗೆದದ್ದಲ್ಲ. ಅದು ನೈಸರ್ಗಿಕವಾಗಿ ನದಿ ದಂಡೆಗಳು ಮತ್ತು ಬಂಡೆಗಳ ಬಳಿ ಬಂದಿ ಬೀಳುತ್ತಿತ್ತು. ನದಿ ದಂಡೆಗಳು ಮತ್ತು ಬಂಡೆಗಳ ಬಳಿ ಹೊಳೆಯುವ ಹಳದಿ ಗಟ್ಟಿಗಳು ತೇಲಿ ಬರುತ್ತಿತ್ತು. ಈ ರೀತಿಯಲ್ಲಿ ತೇಲಿ ಬರುವ ಚಿನ್ನ ಶುದ್ಧ ರೂಪದಲ್ಲಿರುತ್ತಿತ್ತು. ಲೋಹಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಗೊತ್ತೇ ಇಲ್ಲದ ಜನರು ಬಹಳ ಹಿಂದೆಯೇ ಚಿನ್ನಕ್ಕೆ ಒಗ್ಗಿಕೊಂಡಿದ್ದರು. ಯಾಕೆಂದರೆ ಅದು ಅವರಿಗೆ ಬಹಳ ಸುಲಭದಲ್ಲಿ ಸಿಗುತ್ತಿತ್ತು. ಹಾಗೆ ನೋಡಿದರೆ ಕಬ್ಬಿಣ ಮತ್ತು ಕಂಚಿಗೂ ಮೊದಲೇ ಮನುಷ್ಯರು ಚಿನ್ನವನ್ನು ಬಳಸಿದ್ದರು.

ಚಿನ್ನವನ್ನು ಮೊದಲು ಹೇಗೆ ಕಂಡುಹಿಡಿಯಲಾಯಿತು?

ವರದಿಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಕ್ರಿ.ಪೂ 4000ರ ಸುಮಾರಿಗೆ ಚಿನ್ನ ನೈಸರ್ಗಿಕವಾಗಿ ಸಿಕ್ಕಿತ್ತು. ಕ್ರಿ.ಪೂ 4000ರ ಸುಮಾರಿಗೆ ಮೆಸೊಪಟ್ಯಾಮಿಯಾದ ನದಿ ದಂಡೆಗಳ ಬಳಿ ಜನರಿಗೆ ಹೊಳೆಯುವ ಚಿನ್ನದ ತುಂಡುಗಳು ಸಿಕ್ಕಿತ್ತು. ಸ್ವಲ್ಪ ಸಮಯದ ನಂತರ, ಈಜಿಪ್ಟ್‌ನ ನುಬಿಯಾ ಪ್ರದೇಶದಲ್ಲಿ ಕೂಡಾ ಚಿನ್ನ ಪತ್ತೆಯಾಯಿತು.ಹೀಗಾಗಿ ಆ ಕಾಲದಲ್ಲಿ ಜನ ಚಿನ್ನವನ್ನು ಸಂಗ್ರಹಿಸಲು ಹರಿಯುವ ನೀರಿನ ವಿಧಾನಗಳನ್ನೇ ನೆಚ್ಚಿಕೊಂಡಿದ್ದರು. ಉದಾಹರಣೆಗೆ ನದಿ ತೀರದಲ್ಲಿನ ಮಣ್ಣನ್ನು ಸಂಗ್ರಹಿಸಿ ಅದನ್ನು ನೀರಿನಲ್ಲಿ ತೊಳೆಯುತ್ತಿದ್ದರು. ಹೀಗೆ ತೊಳೆಯುವಾಗ ಮಣ್ಣಿನಲ್ಲಿ ಸೇರಿಕೊಂಡಿರುವ ಚಿನ್ನದ ತುಂಡುಗಳನ್ನು ಬೇರ್ಪಡಿಸಿ ಎತ್ತಿ ಇಡುತ್ತಿದ್ದರು. ನಂತರ, ಆ ತುಂಡುಗಳನ್ನು ಆಭರಣಗಳು ಮತ್ತು ಧಾರ್ಮಿಕ ವಸ್ತುಗಳಾಗಿ ಪರಿವರ್ತಿಸುತ್ತಿದ್ದರು. ಇದರ ಅಪರೂಪದ ಬಣ್ಣ ಮತ್ತು ಮೃದುತ್ವವನ್ನು ಹಳೆಯ ನಾಗರಿಕತೆಯ ಜನ ಇಷ್ಟಪಟ್ಟಿದ್ದರು. ಹೀಗಾಗಿ ನಂತರ ಈಜಿಪ್ಟ್‌ನ ನುಬಿಯಾದಂತಹ ಸ್ಥಳಗಳಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಯಿತು. ಅದು ವಿಶ್ವದ ಮೊದಲ ಸಕ್ರಿಯ ಚಿನ್ನದ ಗಣಿಗಳ ನೆಲೆಯಾಯಿತು. ಚಿನ್ನವು ಶುದ್ಧ ರೂಪದಲ್ಲಿ ಇರುವುದರಿಂದ, ಅದನ್ನು ಆರಂಭದಲ್ಲಿ ಕರಗಿಸುವ ಅಥವಾ ಸಂಸ್ಕರಿಸುವ ಅಗತ್ಯವಿರಲಿಲ್ಲ.

ಸಂಪತ್ತಿನ ಸಂಕೇತವಾಯಿತು ಚಿನ್ನ

ಕ್ರಮೇಣ, ಈಜಿಪ್ಟ್, ಗ್ರೀಸ್, ರೋಮ್, ಸಿಂಧೂ ಕಣಿವೆಯ ಜನರು ಮತ್ತು ಹಳೆಯ ಚೀನೀ ರಾಜವಂಶಗಳಂತಹ ನಾಗರಿಕತೆಗಳು ಚಿನ್ನವನ್ನು ಸಂಪತ್ತಿನ ಸಂಕೇತವಾಗಿ ನೋಡುವುದಕ್ಕೆ ಶುರು ಮಾಡಿದರು. ಆಧುನಿಕ ದಿನಗಳಲ್ಲಿ, ಇದು ವಿಶ್ವದ ಅತ್ಯಂತ ದುಬಾರಿ ಲೋಹಗಳಲ್ಲಿ ಒಂದಾಗಿದೆ. ಆದರೆ ಇದನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಆಭರಣಗಳು, ನಾಣ್ಯಗಳು, ವಿಜ್ಞಾನ, ತಂತ್ರಜ್ಞಾನ ಮತ್ತು ಕೆಲವೊಮ್ಮೆ ಬಾಹ್ಯಾಕಾಶ ಸಂಶೋಧನೆಯಲ್ಲಿಯೂ ಬಳಸಲಾಗುತ್ತದೆ. ಇದರ ಆವಿಷ್ಕಾರವು ಮಾನವ ಇತಿಹಾಸವನ್ನು ಶಾಶ್ವತವಾಗಿ ಬದಲಾಯಿಸಿತು. ಇಂದಿಗೂ ಈ ಹಳದಿ ಲೋಹ ಇಡೀ ಜಗತ್ತನ್ನು ಆಕರ್ಷಿಸುತ್ತಿದೆ.

ಪ್ರಾಚೀನ ಕಾಲದಲ್ಲಿ ಚಿನ್ನವನ್ನು ಏಕೆ ಸುಲಭವಾಗಿ ಬಳಸಲಾಗುತ್ತಿತ್ತು?

ಪ್ರಾಚೀನ ಕಾಲದಲ್ಲಿ ಚಿನ್ನವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಯಾಕೆಂದರೆ ಅದು ನೈಸರ್ಗಿಕವಾಗಿ ನದಿಗಳು ಮತ್ತು ಮಣ್ಣಿನಲ್ಲಿ ಶುದ್ಧ ರೂಪದಲ್ಲಿ ದೊರೆಯುತ್ತಿತ್ತು. ಅದರ ಮೃದುತ್ವದಿಂದಾಗಿ, ಅದನ್ನು ಬಾಗಿಸುವುದು, ಆಕಾರ ನೀಡುವುದು ಮತ್ತು ಹೊಳಪು ನೀಡುವುದು ಸುಲಭವಾಗಿತ್ತು. ಅಲ್ಲದೆಬಂಗಾರ ಎಷ್ಟು ಕಾಲ ಕಳೆದರೂ ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ.

ಚಿನ್ನವನ್ನು ಬಳಸಿದ ಮೊದಲ ನಾಗರಿಕತೆಗಳು

1. ಈಜಿಪ್ಟಿನವರು ರಾಜಮನೆತನದ ಸಮಾಧಿಗಳು ಮತ್ತು ಆಭರಣಗಳಿಗಾಗಿ ಚಿನ್ನವನ್ನು ಬಳಸುತ್ತಿದ್ದರು
2. ಮೆಸೊಪಟ್ಯಾಮಿಯನ್ನರು ಚಿನ್ನದ ಆಭರಣಗಳು ಮತ್ತು ನಾಣ್ಯಗಳನ್ನು ತಯಾರಿಸಿದರು.
3. ಸಿಂಧೂ ಕಣಿವೆ ನಾಗರಿಕತೆಯಲ್ಲಿ ಚಿನ್ನದ ಮಣಿಗಳು ಮತ್ತು ಆಭರಣಗಳನ್ನು ವ್ಯಾಪಾರ ಮಾಡಲಾಗುತ್ತಿತ್ತು.
4. ರೋಮನ್ನರು ಮತ್ತು ಗ್ರೀಕರು ದೇವಾಲಯಗಳು, ನಾಣ್ಯಗಳು ಮತ್ತು ರಕ್ಷಾಕವಚಗಳಲ್ಲಿ ಚಿನ್ನವನ್ನು ಬಳಸುತ್ತಿದ್ದರು.
5. ಕಾಲ ಕಳೆಯುತ್ತಿದ್ದ ಹಾಗೆ ಚಿನ್ನವು ಜಾಗತಿಕ ವ್ಯಾಪಾರ ಲೋಹವಾಯಿತು ಮತ್ತು ಸಂಪತ್ತಿನ ಸಂಕೇತವಾಯಿತು.

ಚಿನ್ನ ಅಮೂಲ್ಯ ಲೋಹವಾಗಿದ್ದು ಹೇಗೆ?

ಚಿನ್ನ ಇಂದಿಗೂ ಅಮೂಲ್ಯವಾದುದು ಏಕೆಂದರೆ:

1. ಇದು ಅಪರೂಪವಾಗಿ ಸಿಗುವ ಲೋಹ ಮಾತ್ರವಲ್ಲ ಇದರ ಗಣಿಗಾರಿಕೆ ಮಾಡುವುದು ಕಷ್ಟ.
2. ಇದು ತುಕ್ಕು ಹಿಡಿಯುವುದಿಲ್ಲ ಅಥವಾ ಬಣ್ಣ ಮಾಸುವುದಿಲ್ಲ.
3. ಇದನ್ನು ಸುಲಭವಾಗಿ ನಾಣ್ಯಗಳು ಅಥವಾ ಆಭರಣಗಳಾಗಿ ರೂಪಿಸಬಹುದು.
4. ಇದನ್ನು ತಂತ್ರಜ್ಞಾನದಲ್ಲಿ ಬಳಸಲಾಗುತ್ತದೆ
5. ಕಾಲ ಕಳೆದಂತೆ ಚಿನ್ನದ ಮೌಲ್ಯ ಹೆಚ್ಚುತ್ತಿದ್ದು, ಅದನ್ನು ಅಮೂಲ್ಯ ಹೂಡಿಕೆ ಮತ್ತು ಸಾಂಸ್ಕೃತಿಕ ಸಂಕೇತವನ್ನಾಗಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+