ವಿರ್ಲ್‌ಪೂಲ್ ಆಫ್ ಇಂಡಿಯಾ ಎಂಡಿ ವಿಶಾಲ್ ಭೋಲಾ ರಾಜೀನಾಮೆ

ನವದೆಹಲಿ, ಜನವರಿ 14: ವರ್ಲ್‌ಪೂಲ್ ಆಫ್ ಇಂಡಿಯಾ ತನ್ನ ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಭೋಲಾ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪೆನಿ ತಿಳಿಸಿದೆ. ಅವರ ಸ್ಥಾನಕ್ಕೆ ಕಂಪನಿಯು ನರಸಿಂಹನ್ ಈಶ್ವರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ನಿಯಂತ್ರಕ ಫೈಲಿಂಗ್ ಪ್ರಕಾರ, ಈಶ್ವರ್ ಅವರು ಪ್ರಸ್ತುತ ಸಿಇಒ ಮತ್ತು ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಕಿ ಮೊಬಿಲಿಟಿ ಸೊಲ್ಯೂಷನ್ಸ್‌ನಿಂದ ವರ್ಲ್‌ಪೂಲ್ ಆಫ್ ಇಂಡಿಯಾವನ್ನು ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ನಡೆದ ಸಭೆಯಲ್ಲಿ, ಕಂಪನಿಯ ಮಂಡಳಿಯು ಭೋಲಾ ಅವರ ರಾಜೀನಾಮೆಯನ್ನು ಅಂಗೀಕರಿಸಿತು.

ಕಂಪನಿಯು ತನ್ನ ಪ್ರಸ್ತುತ ಎಂಡಿ ಏಪ್ರಿಲ್ 3, 2023 ರವರೆಗೆ ಸೇವೆ ಸಲ್ಲಿಸುತ್ತಾರೆ. ಇದರ ನಂತರ, ಈಶ್ವರ್ ಅವರ ನೇಮಕಾತಿ ಜಾರಿಗೆ ಬರಲಿದೆ ಎಂದು ಹೇಳಿದೆ. " ಭೋಲಾ ಅವರು ಇತರ ಆಸಕ್ತಿ ಕಾರಣಗಳನ್ನು ಕಂಪನಿಯನ್ನು ತೊರೆಯಲು ನಿರ್ಧರಿಸಿದ್ದು, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿಸಲಾಗಿದೆ.

Whirlpool of India MD Vishal Bhola resigns

ಈಶ್ವರ್ ಅವರ ನೇಮಕಾತಿಯು ಏಪ್ರಿಲ್ 4, 2023 ರಿಂದ ಪ್ರಾರಂಭವಾಗುವ ಐದು ವರ್ಷಗಳ ಅವಧಿಗೆ ಅಗತ್ಯ ಅನುಮೋದನೆಗಳು ಮತ್ತು ಔಪಚಾರಿಕತೆಗಳಿಗೆ ಒಳಪಟ್ಟಿರುತ್ತದೆ ಎಂದು ವಿರ್ಲ್‌ಪೂಲ್ ಆಫ್ ಇಂಡಿಯಾ ಹೇಳಿದೆ. ಈಶ್ವರ್ ಅವರು ಸುಮಾರು 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ ಪ್ರಾಕ್ಟರ್ & ಗ್ಯಾಂಬಲ್‌ನಂತಹ ಬ್ರ್ಯಾಂಡ್‌ಗಳೊಂದಿಗೆ ಹೆಚ್ಚಾಗಿ ಕೆಲಸ ಮಾಡಿದ್ದಾರೆ.

ವಿರ್ಲ್‌ಪೂಲ್ ಆಫ್ ಇಂಡಿಯಾ ಯುಎಸ್- ಮೂಲದ ವರ್ಲ್‌ಪೂಲ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾಗಿದೆ. ಅದರ ಪೋರ್ಟ್‌ಫೋಲಿಯೊ ವಾಷಿಂಗ್ ಮೆಷಿನ್‌ಗಳು ಮತ್ತು ರೆಫ್ರಿಜರೇಟರ್‌ಗಳಿಂದ ಹಿಡಿದು ಹವಾನಿಯಂತ್ರಣಗಳು ಮತ್ತು ಅಡುಗೆ ಸಲಕರಣೆಗಳವರೆಗೆ ಉತ್ಪಾದನೆ ಮತ್ತು ಮಾರಾಟ ಮಾಡುತ್ತದೆ. ಕಂಪನಿಯು ಫರಿದಾಬಾದ್, ಪುದುಚೇರಿ ಮತ್ತು ಪುಣೆಯಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+