ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ಹ್ಯಾಕ್, 2 ಲಕ್ಷ ಖಾತೆಗೆ ಭಯ-ಭೀತಿ?

By Mahesh
|
Google Oneindia Kannada News

ಬೆಂಗಳೂರು, ಸೆ. 10: ಫೇಸ್ ಬುಕ್ ಒಡೆತನದ ಸಾಮಾಜಿಕ ಸಂದೇಶ ರವಾನೆ ತಂತ್ರಾಂಶ ಸೇವೆ ವಾಟ್ಸಪ್ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ಇಲ್ಲಿದೆ. ಸರಿ ಸುಮಾರು 2 ಲಕ್ಷಕ್ಕೂ ಅಧಿಕ ಖಾತೆಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಎದ್ದಿದೆ.

ವಾಟ್ಸಪ್ ಸೇವೆಯನ್ನು ವೆಬ್ ಮೂಲಕ ಬಳಸುವವರಿಗೆ ಈ ಭೀತಿ ಎದುರಾಗಿದೆ. ಹ್ಯಾಕರ್ ಗಳು 2 ಲಕ್ಷಕ್ಕೂ ಅಧಿಕ ವಾಟ್ಸಪ್ ಖಾತೆಗಳ ಖಾಸಗಿ ಮಾಹಿತಿಗಳನ್ನು ಕದ್ದಿದ್ದಾರೆ ಎಂಬ ಮಾಹಿತಿ ಇದೆ. [ಎಫ್ ಬಿ-ವಾಟ್ಸಪ್ ಖರೀದಿ ಹಿಂದಿರುವ ಉದ್ದೇಶವೇನು?]

ಈಗ ವಾಟ್ಸಪ್ ಅಪ್ಲಿಕೇಷನ್ ಮೂಲಕ ಅಷ್ಟೇ ಅಲ್ಲದೆ ವೆಬ್ ಬ್ರೌಸರ್, ಸ್ಮಾರ್ಟ್ ಫೋನ್, ಕಂಪ್ಯೂಟರ್ ಮೂಲಕ ಬಳಸಬಹುದಾಗಿದೆ.

WhatsApp hack attack puts 200,000 at risk

ಹ್ಯಾಕರ್ ಗಳು ವಿ ಕಾರ್ಡ್ ಗಳನ್ನು ಆಯ್ದ ಫೋನ್ ನಂಬರ್ ಗಳಿಗೆ ಕಳಿಸುತ್ತಿದ್ದಾರೆ ಎನ್ನಲಾಗಿದೆ. ವಿಕಾರ್ಡ್ ಮೂಲಕದ ಒಬ್ಬ ವ್ಯಕ್ತಿಯ ಫೋನ್ ನಂಬರ್ ಅಷ್ಟೇ ಅಲ್ಲದೆ, ಇಮೇಲ್, ಚಿತ್ರ, ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಗಳು ಕೂಡಾ ರವಾನೆಯಾಗುತ್ತದೆ.

ಇಂಥ ವಿಕಾರ್ಡ್(virtual card) ಗಳನ್ನು ವೆಬ್ ಮೂಲಕ ಹಂಚಿಕೊಂಡಾಂಗ ರಿಮೋಟ್ ಆಕ್ಸೆಸ್ ಟೂಲ್ಸ್ (RATs) ಮೂಲಕ ಬಳಕೆದಾರರ ಫೋನ್ ಅಥವಾ ಪರ್ಸನಲ್ ಕಂಪ್ಯೂಟರ್ ವ್ಯವಸ್ಥೆ ಹಾಳುಗೆಡವಬಹುದು. ಎಲ್ಲೋ ಕುಳಿತ ಹ್ಯಾಕರ್ ಗಳು ನಿಮ್ಮ ಸಾಧನವನ್ನು ಬೇಕಾದ ರೀತಿಯಲ್ಲಿ ಆಡಿಸಬಹುದು. [ಹುಚ್ಚುತನದ ಪರಮಾವಧಿ, ವಾಟ್ಸಪ್ ಗ್ರೂಪ್ ಕಥೆ ನೋಡಿ]

ಆಗಸ್ಟ್ 21ರಂದೇ ಈ ರೀತಿಯ ಸುರಕ್ಷತಾ ಪ್ರಮಾದದ ಬಗ್ಗೆ ವಾಟ್ಸಪ್ ಗೆ ಗೊತ್ತಾಗಿದ್ದು, ಆಗಸ್ಟ್ 27ರ ವೇಳೆಗೆ ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿದೆ. ಅದರೆ, ವಿಶ್ವದೆಲ್ಲೆಡೆ 900 ಮಿಲಿಯನ್ ಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಅನ್ನು 200ಮಿಲಿಯನ್ ಗೂ ಅಧಿಕ ಸಕ್ರಿಯ ಬಳಕೆದಾರರು ವೆಬ್ ಆಪ್ಲಿಕೇಷನ್ ಮೂಲಕ ಬಳಸುತ್ತಿದ್ದು, ಇನ್ನೂ ಭೀತಿಯಿಂದ ಹೊರ ಬಂದಿಲ್ಲ.

English summary
More than 200,000 users of WhatsApp's web-based service may have been hit in a cyberattack that let hackers compromise personal data using just their phone number reports BBC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X