ವಾಟ್ಸಾಪ್ ನಿಂದ ಭಾರತೀಯ ಮೂಲದ ಹಿರಿಯ ಅಧಿಕಾರಿ ಹೊರಕ್ಕೆ

ಬೆಂಗಳೂರು, ನವೆಂಬರ್ 27: ಮೊಬೈಲ್ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ನೀರಜ್ ಅರೋರಾ ಅವರು ವೈಯಕ್ತಿಕ ಕಾರಣಕ್ಕಾಗಿ ಸಂಸ್ಥೆಯನ್ನು ತೊರೆದಿದ್ದಾರೆ. ಕುಟುಂಬದ ಜತೆ ಹೆಚ್ಚಾಗಿ ಕಾಲ ಕಳೆಯಬೇಕಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಭಾರತೀಯ ಮೂಲದ ನೀರಜ್​ ಅರೋರಾ ಅವರು ಈಗ ಫೇಸ್​ಬುಕ್​ ತೆಕ್ಕೆಯಲ್ಲಿರುವ ವಾಟ್ಸಾಪ್ ಸಂಸ್ಥೆಯಲ್ಲಿ ಮುಖ್ಯ ಉದ್ಯಮ ಅಧಿಕಾರಿ (ಚೀಫ್​ ಬಿಸಿನೆಸ್​ ಆಫೀಸರ್​) ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಜಾನ್​ ಕೋಮ್​ ಹಾಗೂ ಬ್ರೇನ್​ ಆ್ಯಕ್ಟನ್​ ಅವರು ನನ್ನನ್ನು ವಾಟ್ಸಾಪ್ ತಂಡಕ್ಕೆ ಕರೆ ತಂದರು. ಇಲ್ಲಿ ವೃತ್ತಿ ಬದುಕು ಆರಂಭಿಸಿ ಏಳು ವರ್ಷಗಳು ಕಳೆದಿದೆ ಎಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ. ನಿಜಕ್ಕೂ ಈ ಪಯಣವನ್ನು ನಾನು ಮನಸಾರೆ ಎಂಜಾಯ್​ ಮಾಡಿದ್ದೇನೆ ಎಂದು ಅವರು ಫೇಸ್​ಬುಕ್​ ಪೋಸ್ಟ್​ನಲ್ಲಿ ಹೇಳಿದ್ದಾರೆ. ಭಾರತೀಯ ಉದ್ಯಮ ಶಾಲೆಯಲ್ಲಿ (ಐಎಸ್​ಬಿ) ಓದಿದ್ದ ಅರೋರಾ ಅವರು ಈ ಹಿಂದೆ ಗೂಗಲ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

WhatsApp business chief Neeraj Arora quits

ಬಳಕೆದಾರರ ಮಾಹಿತಿ ಸುರಕ್ಷತೆ, ಖಾಸಗಿ ಸಂದೇಶಗಳ ದುರ್ಬಳಕೆ ವಿಚಾರವಾಗಿ ಫೇಸ್​ಬುಕ್​ ಜತೆ ಭಿನ್ನಾಭಿಪ್ರಾಯ ಹೊಂದಿದ್ದ ವಾಟ್ಸಾಪ್ ಸಂಸ್ಥಾಪಕ ಜಾನ್​ ಕೋಮ್​ ಅವರ ಜಾಗಕ್ಕೆ ಅರೋರಾ ಅವರನ್ನು ನೇಮಿಸಲಾಗುವುದು ಎಂಬ ಸುದ್ದಿ ಹರಿದಾಡುತ್ತಿತ್ತು. ಅಷ್ಟರಲ್ಲೇ ಅರೋರಾ ರಾಜೀನಾಮೆ ನೀಡಿದ್ದಾರೆ.

ಕಳೆದ ವಾರದಲ್ಲಿ ವಾಟ್ಸಾಪ್ ನ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಎಜೆಟಾಪ್ ಸಹ ಸ್ಥಾಪಕ ಅಭಿಜಿತ್ ಬೋಸ್ ಅವರನ್ನು ನೇಮಿಸಲಾಗಿದೆ. ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಈಗ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+