ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂನ್‌ಲೈಟಿಂಗ್ ಬಗ್ಗೆ ವಿಪ್ರೋ ಸಿಇಒ ಥಿಯೆರ್ರಿ ಡೆಲಾಪೋರ್ಟೆ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಮೂನ್‌ಲೈಟಿಂಗ್‌ ಬಗ್ಗೆ ವಿಪ್ರೋ ಸಿಇಒ ಮತ್ತು ಎಂ.ಡಿ ಥಿಯೆರಿ ಡೆಲಾಪೋರ್ಟೆ ಸ್ಪಷ್ಟನೆ ನೀಡಿದ್ದು, ಕಂಪನಿಯು ಉದ್ಯೋಗಿಗಳಿಗೆ ಅಲ್ಲೊಂದು ಇಲ್ಲೊಂದು ಕಡೆ ಕೆಲಸ ಮಾಡುವುದರಿಂದ ಕಂಪನಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಕಂಪನಿಯ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಸುಮಾರು ಎರಡು ತಿಂಗಳ ಹಿಂದೆ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಐಟಿ ಉದ್ಯೋಗಿಗಳ ಹಿತಾಸಕ್ತಿಯ ಸ್ಪಷ್ಟ ಸಂಘರ್ಷದಲ್ಲಿ ಹೊಂದಿರುವ ಉದ್ಯೋಗಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪರಸ್ಪರ ಗೌರವಿಸಬೇಕಾದ ಒಪ್ಪಂದಗಳಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಉದ್ಯೋಗಿಗಳು ವಿಪ್ರೋನೊಂದಿಗೆ ವಿವಾದಿತ ಮತ್ತೊಂದು ಕೆಲಸಕ್ಕೆ ಹೋಗುತ್ತಿರುವಾಗ ನಾವು ಅದನ್ನು ಹೇಗೆ ಒಪ್ಪಿಕೊಳ್ಳಬಹುದು? ಆದ್ದರಿಂದ ನಾವು ಅದನ್ನು ಸ್ವೀಕರಿಸುವುದಿಲ್ಲ ಎಂದು ಕ್ಯೂ 2 ಫಲಿತಾಂಶಗಳ ಪ್ರಕಟಣೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಡೆಲಾಪೋರ್ಟೆ ಹೇಳಿದರು.

ವಿಪ್ರೋ ಉದ್ಯೋಗ ಒಪ್ಪಂದಗಳಂತೆ ಉದ್ಯೋಗಿಗಳು ಕಂಪನಿಗೆ ಸಮಯವನ್ನು ಮೀಸಲಿಡಲು ಮಾತ್ರವಲ್ಲ, ತಮ್ಮ ಮತ್ತು ಅವರ ಕುಟುಂಬಕ್ಕೂ ಸಹ ಸಮಯ ಕಳೆಯುವುದಕ್ಕೆ ಸಾಧ್ಯವಾಗುತ್ತದೆ. ನಮ್ಮಲ್ಲಿ ಅಥವಾ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ತಾವು ಚೆನ್ನಾಗಿದ್ದಂತೆ ಎನಿಸಬೇಕು. ಉದಾಹರಣೆಗೆ ನೀವು ನಮ್ಮ ಪರಿಸರದಲ್ಲಿ ಕಂಪನಿಗೆ ಕೆಲಸ ಮಾಡುತ್ತಿದ್ದರೆ, ಇದು ಕಾನೂನುಬದ್ಧತೆಯ ಪ್ರಶ್ನೆಯಲ್ಲ. ಇದು ನೈತಿಕತೆಯ ಪ್ರಶ್ನೆಯಾಗಿದೆ. ಹಿತಾಸಕ್ತಿ ಸಂಘರ್ಷದೊಂದಿಗೆ ಎರಡು ಉದ್ಯೋಗಗಳನ್ನು ಹೊಂದುವುದು ಸರಿ ಎಂದು ನಾವು ನಂಬುವುದಿಲ್ಲ ಎಂದಿದ್ದಾರೆ.

ವಿಪ್ರೋ, ಇನ್ಫೋಸಿಸ್ ಬಳಿಕ ಅಕ್ಸೆಂಚರ್‌ನಿಂದ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದುವಿಪ್ರೋ, ಇನ್ಫೋಸಿಸ್ ಬಳಿಕ ಅಕ್ಸೆಂಚರ್‌ನಿಂದ ಫ್ರೆಶರ್‌ಗಳ ಆಫರ್‌ ಲೆಟರ್‌ ರದ್ದು

ಕಂಪನಿಯು ಹೊಸ ಅಥವಾ ವಿಭಿನ್ನವಾದ ಏನನ್ನೂ ಮಾಡುತ್ತಿಲ್ಲ. ಆದರೆ ಅದರ ಉದ್ಯೋಗ ಒಪ್ಪಂದದಲ್ಲಿನ ಷರತ್ತುಗಳ ಮೂಲಕ ನಿಂತಿದೆ ಎಂದು ಒತ್ತಿ ಹೇಳಿದರು. ನಾವು ಹೊಸ ಅಥವಾ ವಿಭಿನ್ನವಾಗಿ ಏನನ್ನೂ ಮಾಡುತ್ತಿಲ್ಲ. ವಿಪ್ರೋಗೆ ಸೇರುವವರಿಗೆ ಇದು ಸ್ಪಷ್ಟವಾಗಿದೆ. ನಾನು ಪಕ್ಕದವರ ಕೆಲಸಗಳ ಬಗ್ಗೆ ಮಾತನಾಡುವುದಿಲ್ಲ. ನಾನು ನಿಜವಾಗಿಯೂ ಮೂನ್‌ಲೈಟಿಂಗ್‌ ವಿವಾದ ಸ್ಪಷ್ಟ ಪರಿಸ್ಥಿತಿಯಲ್ಲಿರುವ ಬಗ್ಗೆ ಮಾತನಾಡುತ್ತಿದ್ದೇನೆ. ನಮ್ಮ ಉದ್ಯೋಗಿಗಳು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

 ಸಾಫ್ಟ್‌ವೇರ್ ರಫ್ತು ಉದ್ಯಮದಲ್ಲಿ ತೀವ್ರ ಚರ್ಚೆ

ಸಾಫ್ಟ್‌ವೇರ್ ರಫ್ತು ಉದ್ಯಮದಲ್ಲಿ ತೀವ್ರ ಚರ್ಚೆ

ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಆಗಸ್ಟ್ 20 ರಂದು ಮೂನ್‌ಲೈಟಿಂಗ್ ಬಗ್ಗೆ ಮಾಡಿದ ಟ್ವೀಟ್‌ನಿಂದ ಭಾರತದ 150 ಬಿಲಿಯನ್ ಡಾಲರ್‌ ಮೌಲ್ಯದ ಸಾಫ್ಟ್‌ವೇರ್ ರಫ್ತು ಉದ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಆದಾಯ ಉತ್ಪಾದಿಸುವ ಅನ್ಯ ಕೆಲಸಗಳನ್ನು ತೆಗೆದುಕೊಳ್ಳಲು ಅದರ 45 ಲಕ್ಷ ಉದ್ಯೋಗಿಗಳನ್ನು ಅನುಮತಿಸಬೇಕೇ ಅಥವಾ ಬೇಡವೇ? ಎಂಬುದು ಚರ್ಚೆಗೆ ಗ್ರಾಸವಾಗಿತ್ತು.

ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ಬ್ಯಾಕ್-ಟು-ಆಫೀಸ್ ಎಂದ ವಿಪ್ರೋ ಕಂಪನಿಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ಬ್ಯಾಕ್-ಟು-ಆಫೀಸ್ ಎಂದ ವಿಪ್ರೋ ಕಂಪನಿ

 300 ಉದ್ಯೋಗಿಗಳ ವಜಾ ಮಾಡಿದ ವಿಪ್ರೋ

300 ಉದ್ಯೋಗಿಗಳ ವಜಾ ಮಾಡಿದ ವಿಪ್ರೋ

ಐಟಿ ಉದ್ಯಮದ ಹೆಚ್ಚಿನ ಅಗ್ರಗಣ್ಯ ಜನರು ಇದನ್ನು ಹೆಚ್ಚಾಗಿ ಟೀಕಿಸಿದ್ದರು. ವಿಪ್ರೋ 300 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ ಎಂದು ಪ್ರೇಮ್‌ಜಿ ಹೇಳಿದ್ದಾರೆ. ಈ ಚರ್ಚೆಯಲ್ಲಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಿಒಒ ಎನ್. ಗಣಪತಿ ಸುಬ್ರಮಣ್ಯಂ ಕಂಪನಿಯು ಉದ್ದಿಮೆಗೆ ದೀರ್ಘಾವಧಿಯ ನಷ್ಟವನ್ನು ಕಾಣುತ್ತಿದೆ ಎಂದರೆ, ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ಎರಡು ಉದ್ಯೋಗಗಳನ್ನು ಕಂಡುಕೊಂಡಿದ್ದರೆ ಇದು ನೈತಿಕವಾಗಿ ಸರಿಯಲ್ಲ ಎಂದು ಹೇಳಿದ್ದಾರೆ.

 ಸಿಕ್ಕಿಬಿದ್ದವರ ಉದ್ಯೋಗಿಗಳ ವಜಾ

ಸಿಕ್ಕಿಬಿದ್ದವರ ಉದ್ಯೋಗಿಗಳ ವಜಾ

ಕೆಲಸದ ಸಮಯದಲ್ಲಿ ಅಥವಾ ನಂತರ ಎರಡನೇ ಕೆಲಸವನ್ನು ಕೈಗೊಳ್ಳುವುದು ಅನೈತಿಕವಾಗಿರುವುದರಿಂದ ಮೂನ್‌ಲೈಟ್‌ನಲ್ಲಿ ಸಿಕ್ಕಿಬಿದ್ದ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಇನ್ಫೋಸಿಸ್ ಎಚ್ಚರಿಸಿದೆ. ಆದರೆ ಆರ್‌ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಟ್ವೀಟ್‌ನಲ್ಲಿ ವಿಪ್ರೋವನ್ನು ಬೆಂಬಲಿಸಿದ್ದಾರೆ.

 ಇದು ವಂಚನೆಗೆ ಸಮಾನವಲ್ಲ

ಇದು ವಂಚನೆಗೆ ಸಮಾನವಲ್ಲ

ಮೂನ್‌ಲೈಟಿಂಗ್ ಕೆಲವು ಪ್ರತಿಪಾದಕರನ್ನು ಸಹ ಕಂಡುಕೊಂಡಿದೆ. ಟೆಕ್ ಮಹೀಂದ್ರಾ ಎಂಡಿ ಮತ್ತು ಸಿಇಒ ಸಿ.ಪಿ. ಗುರ್ನಾನಿ ಈ ಕಲ್ಪನೆಯನ್ನು ಬೆಂಬಲಿಸಿದ್ದು, ಉದ್ಯೋಗಿಗಳಿಗೆ ಅದರ ಬಗ್ಗೆ ಹೆಚ್ಚು ಮುಕ್ತವಾಗಿರಲು ಅನುವು ಮಾಡಿಕೊಡುವ ನೀತಿಗಳನ್ನು ಪರಿಚಯಿಸುವುದಾಗಿ ಹೇಳಿದ್ದಾರೆ. ಇದು ವಂಚನೆಗೆ ಸಮಾನವಲ್ಲ ಎಂದು ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಹೇಳಿದ್ದಾರೆ. ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ತಮ್ಮ ಉದ್ಯೋಗಿಗಳನ್ನು ಕೆಳಗಿಳಿಸುವ ಕಂಪನಿಗಳ ಪ್ರಯತ್ನಗಳು ವಿಫಲಗೊಳ್ಳುತ್ತವೆ ಎಂದು ಹೇಳಿದ್ದಾರೆ.

English summary
Wipro CEO and MD Thierry Delaporte clarified about moonlighting and said that the company does not have any problem as employees work here and there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X