ಜಿಯೋಗೆ ಸೆಡ್ಡು ಹೊಡೆಯಲು ವೋಡಾಫೋನ್ 2 ಹೊಸ ಯೋಜನೆ

ಬೆಂಗಳೂರು, ಫೆಬ್ರವರಿ 21: ಜಿಯೋ ಸಂಸ್ಥೆಯ 149 ರು ಪ್ರೀಪೇಯ್ಡ್ ಯೋಜನೆಗೆ ಪೈಪೋಟಿ ನೀಡಲು ವೋಡಾಫೋನ್ ಮುಂದಾಗಿದ್ದು, ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಈ ಮೂಲಕ ಟೆಲಿಕಾಂ ಸಂಸ್ಥೆಗಳ ದರ ಸಮರ ಜಾರಿಯಲ್ಲಿದೆ.

ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ ಹಾಗೂ ವೋಡಾಫೋನ್ ನಡುವೆ ಪೈಪೋಟಿ ಜೋರಾಗಿದ್ದು, ಪ್ರಿಪೇಯ್ಡ್ ಗ್ರಾಹಕರಿಗೆ ಭರಪೂರ ಅವಕಾಶ ಸಿಗುತ್ತಿದೆ.

ಮುಖ್ಯವಾಗಿ ಜಿಯೋ ಸಂಸ್ಥೆಯ 149 ರು ಪ್ರೀಪೇಯ್ಡ್ ಯೋಜನೆಗೆ ಪೈಪೋಟಿ ನೀಡಲು ವೋಡಾಫೋನ್ ಮುಂದಾಗಿದ್ದು, ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದೆ.

ವೋಡಾಫೋನ್ ನ 158 ರು ಹಾಗೂ 151 ರುಗಳ ಯೋಜನೆ ಪ್ರಕಟಿಸಿದ್ದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 1ಜಿಬಿ ಡೇಟಾ ಸಿಗಲಿದೆ. ವೋಡಾಫೋನಿನ ಈ ಯೋಜನೆಗಳು ಜಿಯೋದ 149ರು ಪ್ಯಾಕ್, ಏರ್ ಟೆಲ್ ನ 169 ಪ್ಯಾಕ್ ಯೋಜನೆಗೆ ಸ್ಪರ್ಧೆ ಒಡ್ಡಲಿವೆ. ಸದ್ಯಕ್ಕೆ ಸೀಮಿತ ಟೆಲಿಕಾಂ ಸರ್ಕಲ್ ನಲ್ಲಿ ಮಾತ್ರ ಈ ಯೋಜನೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲೆಡೆ ಲಭ್ಯವಾಗಲಿದೆ.

ವೋಡಾಫೋನ್ ನ 158 ರು ಗಳ ಯೋಜನೆ

ವೋಡಾಫೋನ್ ನ 158 ರು ಗಳ ಯೋಜನೆ

* ವೋಡಾಫೋನಿನ ಸೂಪರ್ ಪ್ಲಾನ್ ಯೋಜನೆಯ ಮುಂದುವರೆದಿದ ಭಾಗವಾಗಿ 158 ರು ಗಳ ಪ್ಯಾಕ್ ಘೋಷಿಸಲಾಗಿದೆ.
* ಇದರಲ್ಲಿ ಅನಿಯಮಿತ ವಾಯ್ಸ್ ಕಾಲ್ಸ್, ಸ್ಥಳೀಯ/ಎಸ್ಟಿಡಿ ಹಾಗೂ ರೋಮಿಂಗ್ ಕರೆ (250 ನಿಮಿಷ/ಪ್ರತಿದಿನಕ್ಕೆ ಹಾಗೂ 1,000 ನಿಮಿಷ/ವಾರಕ್ಕೆ) ಸಿಗಲಿದೆ.
* ಪ್ರತಿದಿನ 1 ಜಿಬಿ 4ಜಿ/3ಜಿ ಡೇಟಾ.
* ವ್ಯಾಲಿಡಿಟಿ 28ದಿನಗಳು ಮಾತ್ರ.

ವೋಡಾಫೋನ್ ನ 151 ರು ಗಳ ಯೋಜನೆ

ವೋಡಾಫೋನ್ ನ 151 ರು ಗಳ ಯೋಜನೆ

* ವೋಡಾಫೋನಿನ ಸೂಪರ್ ಪ್ಲಾನ್ ಯೋಜನೆಯ ಮುಂದುವರೆದಿದ ಭಾಗವಾಗಿ 151 ರು ಗಳ ಪ್ಯಾಕ್ ಘೋಷಿಸಲಾಗಿದೆ.
* ಇದರಲ್ಲಿ ಅನಿಯಮಿತ ವಾಯ್ಸ್ ಕಾಲ್ಸ್,ಸ್ಥಳೀಯ/ಎಸ್ಟಿಡಿ ಹಾಗೂ ರೋಮಿಂಗ್ ಕರೆ (250 ನಿಮಿಷ/ಪ್ರತಿದಿನಕ್ಕೆ ಹಾಗೂ 1,000 ನಿಮಿಷ/ವಾರಕ್ಕೆ) ಸಿಗಲಿದೆ.
* ಪ್ರತಿದಿನ 1 ಜಿಬಿ 4ಜಿ/3ಜಿ ಡೇಟಾ.
* ವ್ಯಾಲಿಡಿಟಿ 28ದಿನಗಳು ಮಾತ್ರ.

ಏರ್ ಟೆಲ್ ಯೋಜನೆ 169 ರು

ಏರ್ ಟೆಲ್ ಯೋಜನೆ 169 ರು

ಭಾರ್ತಿ ಏರ್ ಟೆಲ್ ನ 169 ರು ಪ್ರೀಪೇಯ್ಡ್ ಯೋಜನೆಯಂತೆ ಅನಿಯಮಿತ ವಾಯ್ಸ್ ಕರೆಗಳು, ಪ್ರತಿ ದಿನ 100 ಎಸ್ಎಂಎಸ್ ಉಚಿತ, 1 ಜಿಬಿ ಡೇಟಾ ಉಚಿತ, 28 ದಿನಗಳ ವರೆಗೆ ವ್ಯಾಲಿಡಿಟಿ. ಏರ್ ಟೆಲ್ ಜತೆ ಒಪ್ಪಂದ ಮಾಡಿಕೊಂಡಿರುವ ಹ್ಯಾಂಡ್ ಸೆಟ್ ಗಳಿಗೆ 28 ದಿನಗಳ ವ್ಯಾಲಿಡಿಟಿ, ಇತರೆ ಹ್ಯಾಂಡ್ ಸೆಟ್ ಗಳಿಗೆ 14ದಿನಗಳ ತನಕ ಮಾತ್ರ ಇದೆ.

ಜಿಯೋ ಯೋಜನೆ 149 ರು

ಜಿಯೋ ಯೋಜನೆ 149 ರು

ರಿಲಯನ್ಸ್ ಜಿಯೋದ 149 ರು ಪ್ರೀಪೇಯ್ಡ್ ಯೋಜನೆಯಂತೆ ಪ್ರತಿ ನಿತ್ಯ 100 ಎಸ್ಎಂಎಸ್ ಗಳು ಉಚಿತವಾಗಿ ಸಿಗಲಿದೆ. ಪ್ರತಿ ದಿನ 1.58 ಜಿಬಿ ಡೇಟಾ ಸಿಗಲಿದೆ. ಈ ಯೋಜನೆ ವ್ಯಾಲಿಡಿಟಿ ಕೂಡಾ 28 ದಿನಗಳ ತನಕ ಇರುತ್ತದೆ. ಅನಿಯಮಿತ ವಾಯ್ಸ್ ಕರೆಗಳು ಲಭ್ಯವಿದೆ.

ವೋಡಾಫೋನ್ ನ 198 ರು ಗಳ ಯೋಜನೆ

ವೋಡಾಫೋನ್ ನ 198 ರು ಗಳ ಯೋಜನೆ

ವೊಡಾಫೋನ್ 198 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಈ ಪ್ಲಾನ್ ನಲ್ಲಿ ಇನ್ಮುಂದೆ ಗ್ರಾಹಕರಿಗೆ ಪ್ರತಿ ದಿನ 1.4 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆ ಹಾಗೂ ರೋಮಿಂಗ್ ಕಾಲ್ ಜೊತೆ 100 ಸಂದೇಶಗಳು ಉಚಿತವಾಗಿ ಸಿಗಲಿದೆ. ಈ ಯೋಜನೆಯ ವ್ಯಾಲಿಡಿಟಿ 24 ದಿನಗಳವರೆಗೆ ಇರಲಿದೆ. ಕರೆ ಮಾಡಲು ಪ್ರತಿದಿನ 250 ನಿಮಿಷ ಮಾತ್ರ ಮಿತಿ ಇರುತ್ತದೆ. 24 ದಿನ ವ್ಯಾಲಿಡಿಟಿಗೆ 1000 ನಿಮಿಷ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+