ವೊಡಾಫೋನ್‍ನಿಂದ ಅನಿಯಮಿತ ಕರೆ ಆಫರ್!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26: ವೊಡಾಫೋನ್ ಇಂಡಿಯಾ ಗುರುವಾರದಂದು ಸೂಪರ್ ವೀಕ್ ಪ್ಲಾನ್ ಅನ್ನು ಅನಾವರಣ ಮಾಡಿದೆ. ಈ ಯೋಜನೆ ಅನ್ವ 69 ರುಗೆ ಯಾವುದೇ ನೆಟ್‍ವರ್ಕ್‍ಗೆ ಅನಿಯಮಿತ ಕರೆ ಮತ್ತು ಹೆಚ್ಚಿನ ಡಾಟಾ ಲಭ್ಯವಾಗಲಿದೆ.

ವೊಡಾಫೋನ್ ಸೂಪರ್ ವೀಕ್ ಮೂಲಕ ಗ್ರಾಹಕರು ಅನಿಯಮಿತ ಸ್ಥಳೀಯ ಮತ್ತು ಎಸ್‍ಟಿಡಿ ಕರೆ ಸೌಲಭ್ಯವು ಯಾವುದೇ ನೆಟ್‍ವರ್ಕ್‍ಗೆ ಸಿಗಲಿದೆ. ಜೊತೆಗೆ ವಾರಕ್ಕೆ 500 ಎಂಬಿ ಡಾಟಾ ಕೂಡಾ ಲಭ್ಯವಾಗಲಿದೆ.

Vodafone launches Unlimited Calls to any network and loads of data at just Rs.69

ಹೆಚ್ಚಿನದಾಗಿ ಪ್ರತಿ ವರ್ಷವು ಈ ಪ್ಯಾಕ್‍ನ ಮರು ಖರೀದಿ ಮೂಲಕ ಪ್ರತಿ ವಾರವೂ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದಾಗಿದೆ.

ಗ್ರಾಹಕರು ಈ ಮೂಲಕ ವೊಡಾಫೋನ್‍ನ ಸೂಪರ್ ನೆಟ್ ಅನುಭವವನ್ನು ಪಡೆಯಲು ಆಹ್ವಾನಿಸಿದ ವೊಡಾಫೋನ್ ಇಂಡಿಯಾದ ಸಹ ನಿರ್ದೇಶಕ (ಕನ್ಸೂಮರ್ ಬ್ಯುಸಿನೆಸ್) ಅವನೀಶ್ ಖೊಸ್ಲಾ ಅವರು, ವೊಡಾಫೋನ್ ಮೂಲಕ ನಾವು ಅತ್ಯುತ್ತಮ ನೆಟ್‍ವರ್ಕ್ ಸೇವೆಯ ಅನುಭವವನ್ನು ಗ್ರಾಹಕರಿಗೆ ನೀಡಲು ಬಯಸುತ್ತೇವೆ. ಸೂಪರ್ ವೀಕ್ ಮೂಲಕ ನಮ್ಮ ಮುಖ್ಯ ಉದ್ದೇಶ ಕೈಗೆಟುಕುವ ದರದಲ್ಲಿ ಎಲ್ಲ ಪ್ರೀಪೇಯ್ಡ್ ಗ್ರಾಹಕರಿಗೆ ಸೌಲಭ್ಯ ಕಲ್ಪಿಸುವುದೇ ಆಗಿದೆ.ಈ ಪ್ಲಾನ್ ಗ್ರಾಹಕರು ಅನಿಯಮಿತವಾಗಿ ಸಂಪರ್ಕದಲ್ಲಿ ಇರಲು, ಸೂಪರ್ ನೆಟ್ 4ಜಿ ಸೌಲಭ್ಯವನ್ನು ಆನಂದಿಸಲು ನೆರವಾಗಲಿದೆ' ಎಂದು ಹೇಳಿದರು.

ಸೂಪರ್ ವೀಕ್ ಪ್ಯಾಕ್ ಎಲ್ಲ ಬಿಡಿ ಮಳಿಗೆಗಳು, ಯುಎಸ್‍ಎಸ್‍ಡಿ ವೆಬ್‍ಸೈಟ್ ಮತ್ತು ಮೈವೊಡಾಫೋನ್ ಆ್ಯಪ್ ಮೂಲಕ ಲಭ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vodafone India today announced the SuperWeek plan, offering unlimited calling and loads of data at a never before price of Rs. 69.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ