ಇನ್ಫಿ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಸಿಕ್ಕಾ
ಬೆಂಗಳೂರು, ಜುಲೈ, 20: ಇನ್ಫೋಸಿಸ್ ತ್ರೈಮಾಸಿಕ ವರದಿ ಹೊರಕ್ಕೆ ಬಿದ್ದಿದ್ದು ಕಂಪನಿಯ ಷೇರುಗಳು ನಷ್ಟ ಅನುಭವಿಸಿವೆ. ತಕ್ಷಣ ಎಚ್ಚೆತ್ತುಕೊಂಡಿರುವ ಸಿಇಒ ವಿಶಾಲ್ ಸಿಕ್ಕಾ ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ.
ಅಲ್ಲದೇ ಕಂಪನಿಯ ನೌಕರರಿಗೆ ಈ ಮೇಲ್ ಬರೆದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಂಪನಿಯ ಷೇರುಗಳು ಶೇ. 10 ರಷ್ಟು ಕುಸಿತ ಕಂಡಿದ್ದಕ್ಕೆ ಕಾರಣ ಹುಡುಕುವ ಯತ್ನ ಮಾಡಿದ್ದಾರೆ.[ಇನ್ಫೊಸಿಸ್ ಷೇರುಗಳು ಪತನ: 5 ಕಾರಣಗಳು]

ಸಣ್ಣ ಕಂಪನಿಗಳನ್ನು ವಶಕ್ಕೆ ಪಡೆಯುವುದು, ಆಡಳಿತದಲ್ಲಿ ಮಹತ್ವದ ಬದಲಾವಣೆ ಮಾಡುವುದು ಮತ್ತು ಕ್ಷಿಪ್ರ ಗತಿಯ ಕೆಲಸ ಸಿಕ್ಕಾ ಮುಂದೆ ಇಟ್ಟುಕೊಂಡಿರುವ ಆಲೋಚನೆಗಳು.
ಏಪ್ರಿಲ್ -ಜೂನ್ ನ ಮೊದಲ ತ್ರೈಮಾಸಿಕದಲ್ಲೇ ಷೇರುಗಳು ಕುಸಿತ ಕಂಡಿದ್ದು ಸಿಕ್ಕಾ ಅವರನ್ನು ಕಂಗೆಡಿಸಿದೆ. ಸರಿಯಾಗಿ ಎರಡು ವರ್ಷದ ಹಿಂದೆ ಇನ್ಫೋಸಿಸ್ ಅಧಿಕಾರದ ಚುಕ್ಕಾಣಿ ಹಿಡಿದ ಸಿಕ್ಕ ಹಲವು ಬದಲಾವಣೆ ಮೂಲಕ ಕಂಪನಿಗೆ ಹೊಸ ದೃಷ್ಟಿಕೋನ ನೀಡಿದ್ದರು.











Click it and Unblock the Notifications