ವಿಜಯ್ ಮಲ್ಯ ಭಾರತದಲ್ಲಿಲ್ಲ, ಲಂಡನ್ನಿಗೆ ಪರಾರಿ!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 09: ಉದ್ಯಮಿ ವಿಜಯ್ ಮಲ್ಯ ಅವರ ಪಾಸ್ ಪೋರ್ಟ್ ಜಪ್ತಿ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಬ್ಯಾಂಕ್ ಗಳ ಒಕ್ಕೂಟಕ್ಕೆ ಹಿನ್ನಡೆ ಉಂಟಾಗಿದೆ. ವಿಜಯ್ ಮಲ್ಯ ಅವರು ಈಗ ಭಾರತದಲ್ಲಿಲ್ಲ, ಮಾರ್ಚ್ 02ರಂದೇ ಲಂಡನ್ನಿಗೆ ಹಾರಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಜಸ್ಟೀಸ್ ಯು.ಯು ಲಲಿತ್ ಅವರಿದ್ದ ನ್ಯಾಯಪೀಠ. ಬ್ಯಾಂಕುಗಳು ಸಲ್ಲಿಸಿರುವ ಅರ್ಜಿ ಸ್ವೀಕರಿಸಿ, ಬುಧವಾರ (ಮಾರ್ಚ್ 09) ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ವಿಷಯವನ್ನು ಆಟರ್ನಿ ಜನರಲ್ ಆಫ್ ಇಂಡಿಯಾ ಮುಕುಲ್ ರೋಹ್ಟಗಿ ಅವರು ಕೋರ್ಟಿಗೆ ತಿಳಿಸಿದ್ದಾರೆ. [ಮಲ್ಯರಿಂದ ಸಾಲ ವಸೂಲಿ ಕಷ್ಟ ಕಷ್ಟ]

ಎಜಿ ಅವರು ನೀಡಿದ ಮಾಹಿತಿಯನ್ನು ಪುಷ್ಟಿಕರಿಸಿ ತನಿಖಾ ಸಂಸ್ಥೆ ಸಿಬಿಐ ಕೂಡಾ ಇದೇ ರೀತಿ ಹೇಳಿಕೆ ನೀಡಿದೆ. ಹೀಗಾಗಿ ಮಲ್ಯರನ್ನು ವಿಮಾನ ಏರಲು ಬಿಡದಂತೆ ತಡೆಯಲು ಬಯಸಿದ್ದ ಎಸ್ಬಿಐ ನೇತೃತ್ವ ಸಾಲ ವಸೂಲಾತಿ ನ್ಯಾಯಾಧಿಕರಣ (DRT) ಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 30ಕ್ಕೆ ಮೂಂದೂಡಲಾಗಿದೆ.

ಇದಲ್ಲದೆ, ಡಿಯಾಜಿಯೋ ನೀಡಿದ ಮಲ್ಯ ಕೈ ಸೇರದಂತೆ ತಾತ್ಕಾಲಿಕವಾಗಿ ಜಪ್ತಿ ಮಾಡಲು ಡಿಆರ್ ಟಿ ಆದೇಶಿಸಿದೆ. ಜೊತೆಗೆ ಜಾರಿ ನಿರ್ದೇಶನಾಲಯದಿಂದ ಹಣ ದುರಪಯೋಗ ಕೇಸು ದಾಖಲಾಗಿದೆ

ಬ್ಯಾಂಕುಗಳನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್

ಬ್ಯಾಂಕುಗಳನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್

ಮಲ್ಯ ಅವರ ಬಹುತೇಕ ಆಸ್ತಿ ವಿದೇಶದಲ್ಲಿದೆ ಎಂದು ನಿಮಗೆ ತಿಳಿದಿದ್ದರೂ ಯಾವ ಆಧಾರದ ಮೇಲೆ ಅವರಿಗೆ ಇಷ್ಟು ದೊಡ್ಡ ಮೊತ್ತದ ಸಾಲ ನೀಡಿದ್ರಿ?ಎಂದು ಜಸ್ಟೀಸ್ ಕುರಿಯನ್ ಅವರು ಪ್ರಶ್ನಿಸಿದರು.

ಸಿಬಿಐ ನೀಡಿದ ಹೇಳಿಕೆ

ಸಿಬಿಐ ನೀಡಿದ ಹೇಳಿಕೆ

ಸಿಬಿಐ ಕಲೆ ಹಾಕಿರುವ ಮಾಹಿತಿ ಪ್ರಕಾರ ಮಲ್ಯ ಅವರು ಈಗಾಗಲೇ ಲಂಡನ್ ತಲುಪಿದ್ದಾರೆ. ಈಗ ಅಲ್ಲಿನ ತನಿಖಾ ಸಂಸ್ಥೆಯ ನೆರವು ಪಡೆದು ಅವರನ್ನು ಇಲ್ಲಿಗೆ ಕರೆಸಿಕೊಳ್ಳುವ ಅಥವಾ ವಿಚಾರಣೆ ನಡೆಸುವ ಬಗ್ಗೆ ನಿರ್ಧರಿಸಬೇಕಿದೆ ಎಂದಿದ್ದಾರೆ.

7,800 ಕೋಟಿ ರುಗೂ ಅಧಿಕ ಸಾಲ

7,800 ಕೋಟಿ ರುಗೂ ಅಧಿಕ ಸಾಲ

ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನಯಾನಕ್ಕಾಗಿ 17ಕ್ಕೂ ಹೆಚ್ಚು ಬ್ಯಾಂಕ್ ಗಳಿಂದ ಮಲ್ಯ ಅವರು ಸುಮಾರು 7,800 ಕೋಟಿ ರು ಸಾಲ ಪಡೆದುಕೊಂಡಿದ್ದಾರೆ. ಯುನೈಟೆಡ್ ಸ್ಪಿರೀಟ್ ಚೆರ್ಮನ್ ಸ್ಥಾನ ತೊರೆದ ಮಲ್ಯ ಅವರಿಗೆ ಡಿಯಾಜಿಯೋ ಸಂಸ್ಥೆ ಸುಮಾರು 515 ಕೋಟಿ ರು ನೀಡಲು ಮುಂದಾಗಿತ್ತು.

ಪಾಸ್ ಪೋರ್ಟ್ ವಶಪಡಿಸಿಕೊಳ್ಳಬಹುದು

ಪಾಸ್ ಪೋರ್ಟ್ ವಶಪಡಿಸಿಕೊಳ್ಳಬಹುದು

ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10 (3) ಇ ಅನ್ವಯ ಪ್ರಯಾಣಿಕರೊಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೆ, ಅವರ ಪಾಸ್ ಪೋರ್ಟ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಏರ್ ಪೋರ್ಟ್ ನ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Vijay Mallya left the country on March 2, the Supreme Court was informed today. The Supreme Court is hearing a plea by 17 banks seeking a directive to prevent Mallya from leaving the country.
Please Wait while comments are loading...