ಹಾಟ್‍ಸ್ಟಾರ್ ಜತೆ ವಿಐ: ನಿಮ್ಮದೇ ಭಾಷೆಯಲ್ಲಿ ಲೈವ್ ಕ್ರೀಡೆ ನೋಡಿ
ಬೆಂಗಳೂರು, ಮಾರ್ಚ್ 11: ಭಾರತದ ಪ್ರಮುಖ ದೂರಸಂಪರ್ಕ ಬ್ರ್ಯಾಂಡ್ ಆಗಿರುವ ವಿಐ (Vi), ತನ್ನ ಗ್ರಾಹಕರಿಗೆ ಗರಿಷ್ಠ ಗುಣಮಟ್ಟದ ಮನರಂಜನೆ ಮತ್ತು ಒಂದು ವರ್ಷ ಪೂರ್ತಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಸೌಲಭ್ಯಗಳನ್ನು ಒದಗಿಸುತ್ತಿದೆ. ಭಾರತದಲ್ಲಿ ವಿಡಿಯೊ ಕಾರ್ಯಕ್ರಮ ಪ್ರಸಾರದ ಪ್ರಮುಖ ವೇದಿಕೆಯಾಗಿರುವ ಡಿಸ್ನಿ+ ಹಾಟ್‍ಸ್ಟಾರ್ ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಭಾರತೀಯರಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಮನರಂಜನೆ ಮತ್ತು ಕ್ರಿಕೆಟ್‍ಗೆ ಸಂಬಂಧಿಸಿದ ಅತ್ಯುತ್ತಮ ದರ್ಜೆಯ ವಿಡಿಯೊ ಮಾಹಿತಿ ಒದಗಿಸುವುದು ಈ ಪಾಲುದಾರಿಕೆಯ ಮುಖ್ಯ ಉದ್ದೇಶವಾಗಿದೆ.
'ವಿಐ' ಪ್ರೀಪೇಯ್ಡ್ ಬಳಕೆದಾರರಿಗೆ: 'ವಿಐ', 3 ಹೊಸ ಸೀಮಿತವಲ್ಲದ ರೀಚಾರ್ಜ್ ಪ್ಲ್ಯಾನ್‍ಗಳು + ಕೇವಲ 1 ಡೇಟಾ ಪ್ಲ್ಯಾನ್ ನೀಡಲಿದ್ದು, ಬಂಡಲ್ ಬೆನೆಫಿಟ್‍ನಡಿ 1 ವರ್ಷದವರೆಗೆ ಡಿಸ್ನಿ+ ಹಾಟ್‍ಸ್ಟಾರ್ ವಿಐಪಿ ಚಂದಾದಾರಿಕೆ ಒದಗಿಸಲಿದೆ. ಹೊಸ ಮತ್ತು ಸದ್ಯದ ಗ್ರಾಹಕರು, 2021ರ ಮಾರ್ಚ್ 10ರಿಂದ ರೀಚಾರ್ಜ್‍ಗಳೊಂದಿಗೆ ಈ ಕೊಡುಗೆ ಪಡೆದುಕೊಳ್ಳಬಹುದು.
'ವಿಐ' ಪೋಸ್ಟ್ ಪೇಯ್ಡ್ ಬಳಕೆದಾರರಿಗೆ: ರೂ 499 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಬಾಡಿಗೆ ಯೋಜನೆಗಳ ಮೇಲೆ ತುಂಬ ಆಕರ್ಷಕ ಕೊಡುಗೆಗಳು ಇವೆ. ಇದರ ಜತೆಗೆ, ಹಾಲಿ ಪ್ಲ್ಯಾನ್ ಜತೆಗೆ ಈ ಎಲ್ಲ ಕೊಡುಗೆಗಳ ಜತೆಗೆ 1 ವರ್ಷದ ಡಿಸ್ನಿ+ ಹಾಟ್‍ಸ್ಟಾರ್ ವಿಐಪಿ ಚಂದಾದಾರಿಕೆಯೂ ಇರಲಿದೆ. 'ವಿಐ' ಗ್ರಾಹಕರು ಇತರ ಪ್ಲ್ಯಾನ್‍ಗಳನ್ನು ಹೊಂದಿದ್ದರೆ ಈ ಪ್ಲ್ಯಾನ್‍ಗಳಿಗೆ ಬದಲಾಗಿ ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು.

ಡಿಸ್ನಿ+ ಹಾಟ್‍ಸ್ಟಾರ್ ಜತೆಗಿನ ಪಾಲುದಾರಿಕೆ ಬಗ್ಗೆ ಪ್ರತಿಕ್ರಿಯಿಸಿರುವ 'ವಿಐ'ನ ಸಿಎಂಒ ಅವನೀಶ್ ಖೋಸ್ಲಾ, 'ಭಾರತದಲ್ಲಿ ಕ್ರಿಕೆಟ್ ಎನ್ನುವುದು ಧರ್ಮವಾಗಿದೆ. ಜನಸಮುದಾಯಕ್ಕೆ ತುಂಬ ಇಷ್ಟವಾಗುವ ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿರುವ ಅಭಿಮಾನಕ್ಕೆ ಸರಿಸಾಟಿಯಾಗಿರುವುದು ಯಾವುದೂ ಇಲ್ಲ. ಹಾಟ್‍ಸ್ಟಾರ್ ಸ್ಪೆಷಲ್ಸ್, ಹಾಟ್‍ಸ್ಟಾರ್ ಮಲ್ಟಿಪ್ಲೆಕ್ಸ್, ವಿಶ್ವದ ಎಲ್ಲ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು. ಈ ಉಪಕ್ರಮದ ಮೂಲಕ ನಾವು 'ವಿಐ' ಗ್ರಾಹಕರಿಗೆ, ಭಾರತದ ಅತ್ಯಂತ ವೇಗದ ನೆಟ್‍ವರ್ಕ್ ಆಗಿರುವ 'ವಿಐ ಗಿಗಾನೆಟ್'ನಲ್ಲಿ ಕ್ರಿಕೆಟ್‍ನ ರೋಚಕ ಪಂದ್ಯಗಳ ನೇರ ಪ್ರಸಾರ ವೀಕ್ಷಿಸಲು ಅವಕಾಶ ಒದಗಿಸಲಿದ್ದೇವೆ' ಎಂದು ಹೇಳಿದ್ದಾರೆ.
ಎರಡು ಹೊಸ ರೀಚಾರ್ಜ್ ಪ್ಯಾಕ್‍ಗಳ ನೆರವಿನಿಂದ 'ವಿಐ' ಗ್ರಾಹಕರು 'ಡಿಸ್ನಿ+ ಹಾಟ್‍ಸ್ಟಾರ್ ವಿಐಪಿ'ಯ ಮನರಂಜನಾ ಕೊಡುಗೆಗಳನ್ನು ಆನಂದಿಸಬಹುದು. 12 ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳ ತಡೆರಹಿತ ವೀಕ್ಷಣೆಯೂ ಸೇರಿದಂತೆ, ಹಿಂದಿ, ತಮಿಳಿನ ಭರ್ಜರಿ ಯಶಸ್ಸು ಕಂಡಿರುವ ಚಲನಚಿತ್ರಗಳು (ಅಜಯ್ ದೇವಗನ್ ಅವರ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಅಭಿಷೇಕ್ ಬಚ್ಚನ್ ಅವರ ದಿ ಬಿಗ್ ಬುಲ್, ಆರ್ಯ ಅವರ ಟೆಡ್ಡಿ) ಸೇರಿದಂತೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗೆ ಡಬ್ ಮಾಡಿದ ವಿಶ್ವದ ಚಲನಚಿತ್ರಗಳು ಮತ್ತು ಟೆಲಿವಿಷನ್ ಕಾರ್ಯಕ್ರಮಗಳನ್ನು, ಮಾರ್ವೆಲ್‍ನ ಸೂಪರ್ ಹೀರೊ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳು (ದಿ ಫಾಲ್ಕನ್ ಆ್ಯಂಡ್ ದಿ ವಿಂಟರ್ ಸೋಲ್ಜರ್, ಅವೆಂಜರ್ಸ್: ಎಂಡ್‍ಗೇಮ್, ಐರನ್ ಮ್ಯಾನ್ 3), ಇತ್ತೀಚಿನ ಅನಿಮೇಷನ್ ಸಿನಿಮಾಗಳಾದ (ದಿ ಲಯನ್ ಕಿಂಗ್, ಫ್ರೋಜನ್ 2), ಚಿಣ್ಣರ ಜನಪ್ರಿಯ ಕಾರ್ಯಕ್ರಮಗಳು (ಡೊರಾಯೆಮಾನ್, ಶಿಂಚನ್) ಮತ್ತು ಹಾಟ್‍ಸ್ಟಾರ್ ವಿಶೇಷತೆಗಳಾದ (ನೇರ ಪ್ರಸಾರ ಕಾರ್ಯಕ್ರಮಗಳು, ಒಕೆ ಕಂಪ್ಯೂಟರ್, ಸ್ಪೆಷಲ್ ಆಪ್ಸ್ 1.5, ಆರ್ಯಾ ಸೀಸನ್ 2, ಕ್ರಿಮಿನಲ್ ಜಸ್ಟಿಸ್: ಬಿಹೈಂಡ್ ಕ್ಲೋಸ್ಡ್ ಡೋರ್), ಕ್ರೀಡೆಗಳ ನೇರ ಪ್ರಸಾರ ಮುಂತಾದವುಗಳನ್ನು ವೀಕ್ಷಿಸುವ ಸೌಲಭ್ಯ ಪಡೆಯಲಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications