ವಿ ಆ್ಯಪ್ ಮೂಲಕ ಕೋವಿಡ್-19 ಲಸಿಕೆ ಸ್ಲಾಟ್ ಬುಕ್ ಸಾಧ್ಯ!
ಬೆಂಗಳೂರು, ಜುಲೈ 11: ವಿ ಆ್ಯಪ್ ಅನ್ನು ಕೋವಿನ್ ಜತೆ ಸಮನ್ವಯಗೊಳಿಸಲಾಗಿದೆ. ಲಸಿಕೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಲು ನೆರವಾಗಿದೆ. ಕೋವಿಡ್-19 ಹರಡುವಿಕೆಯಿಂದ ತಮ್ಮನ್ನು, ತಮ್ಮ ಕುಟುಂಬವನ್ನು ಮತ್ತು ಸಮಾಜವನ್ನು ರಕ್ಷಿಸಲು ಇರುವ ಏಕೈಕ ಮಹತ್ವದ ಮಾರ್ಗವೆಂದರೆ ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಲಸಿಕೆ ಪಡೆಯುವುದು.
ಲಸಿಕೆ ಪಡೆಯುವ ಅಪಾಯಿಂಟ್‍ಮೆಂಟ್ ನಿಗದಿಪಡಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ, ವಿಐ ತನ್ನ ಗ್ರಾಹಕರಿಗಾಗಿ ಕೋವಿನ್ ಆ್ಯಪ್‍ನ ಸ್ಲಾಟ್ ಪತ್ತೆ ವಿಭಾಗವನ್ನು ವಿ ಆ್ಯಪ್ ಜತೆ ಸಮನ್ವಯಗೊಳಿಸಿದೆ. ಇದೀಗ ವಿ ಬಳಕೆದಾರರು ಲಸಿಕೆ ಪಡೆಯುವ ಸ್ಲಾಟ್‍ಗಳ ಲಭ್ಯತೆಯನ್ನು ಈ ಆ್ಯಪ್ ಮೂಲಕ ಕಂಡುಹಿಡಿಯಬಹುದಾಗಿದ್ದು, ವಿ ಆ್ಯಪ್‍ನಲ್ಲೇ ಅಧಿಸೂಚನೆಗಳನ್ನು ಪಡೆಯಲು ಕೂಡಾ ಅವಕಾಶವಿದೆ. ವಿ ಗ್ರಾಹಕರು ಇದೀಗ ತನ್ನ ಕೋವಿಡ್-19 ಲಸಿಕೆ ಅಪಾಯಿಂಟ್‍ಮೆಂಟ್‍ಗಳಿಗಾಗಿ ತಮ್ಮ ಮೊಬೈಲ್‍ನಿಂದಾಚೆ ಬೇರೇನನ್ನೂ ಹುಡುಕಬೇಕಾಗಿಲ್ಲ.
ವಿ ಗ್ರಾಹಕರು ತಮ್ಮ ಹುಡುಕಾಟವನ್ನು ವಯೋಮಾನ, ಲಸಿಕೆ ಹೆಸರುಗಳು (ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ 5, ಡೋಸ್, ಪಾವತಿಯ ಲಸಿಕೆ/ ಉಚಿತ ಲಸಿಕೆ ಹೀಗೆ ಫಿಲ್ಟರ್ ಮಾಡಲು ಕೂಡಾ ಅವಕಾಶವಿದೆ. ಇದರ ಜತೆಗೆ ತಮ್ಮ ವಿಳಾಸಕ್ಕೆ ಸನಿಹದಲ್ಲಿ ಲಭ್ಯವಿರುವ ಸ್ಲಾಟ್‍ಗಳ ವಿವರಗಳನ್ನೂ ಪಡೆಯಬಹುದಾಗಿದೆ. ವಿ ಆ್ಯಪ್ ಮೂಲಕ ನೋಂದಾಯಿಸಿದ ಗ್ರಾಹಕರಿಗೆ ಬಳಕೆದಾರರ ಸನಿಹದಲ್ಲಿ ಲಭ್ಯವಿರುವ ಸ್ಲಾಟ್‍ಗಳ ಸಂಬಂಧ ಅಧಿಸೂಚನೆಯೂ ಲಭ್ಯವಾಗಲಿದೆ. ಈ ಸೇವೆಯು ವಿ ಪ್ರೀಪೆಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಲಭ್ಯವಿರುತ್ತದೆ.

ವಿ ಆ್ಯಪ್ ಬಳಕೆದಾರರು ಇದೀಗ ಲಸಿಕೆ ಸ್ಲಾಟ್‍ಗಳನ್ನು ಈ ಕೆಳಗಿನ ಮೂರು ಸುಲಭ ಕ್ರಮಗಳ ಮೂಲಕ ಕಾಯ್ದಿರಿಸಬಹುದಾಗಿದೆ.
* "ಗೆಟ್ ಯುವರ್‍ಸೆಲ್ಫ್ ವ್ಯಾಕ್ಸಿನೇಟೆಡ್ ಟುಡೇ" ಆಪ್ಷನ್ ಕ್ಲಿಕ್ ಮಾಡಿ
* ಲಸಿಕೆ ಸ್ಲಾಟ್ ಅಥವಾ ನೋಟಿಫಿಕೇಶನ್ ಅಲರ್ಟ್ ಸೆಟ್ ಮಾಡಲು ಹುಡುಕಿ
* ಪ್ರಕ್ರಿಯೆ ಪೂರ್ಣಗೊಳ್ಳಲು ಬಳಕೆದಾರರು ಕೋವಿನ್ ಪೋರ್ಟೆಲ್‍ಗೆ ನಿರ್ದೇಶಿಸಲ್ಪಡುತ್ತಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications