ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಬೇಡಿ: ಭಾರತಕ್ಕೆ ಅಮೆರಿಕ ಎಚ್ಚರಿಕೆ
ವಾಷಿಂಗ್ಟನ್, ಆಗಸ್ಟ್ 30: ರಷ್ಯಾದಿಂದ ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸಿದರೆ ತನ್ನ ನಿರ್ಬಂಧಗಳಿಗೆ ಒಳಪಡಬೇಕಾಗಬಹುದು ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
ಜಗತ್ತಿನ ಅತಿ ದೊಡ್ಡ ರಕ್ಷಣಾ ಆಮದುದಾರ ದೇಶವಾಗಿರುವ ಭಾರತ, ಶಸ್ತ್ರಾಸ್ತ್ರಗಳಿಗಾಗಿ ಅಮೆರಿಕ ಮಿಲಿಟರಿಯೊಂದಿಗೆ ವ್ಯವಹಾರ ನಡೆಸುತ್ತಿದೆ. ಜತೆಗೆ ರಷ್ಯಾದಿಂದ ವಾಯು ಕ್ಷಿಪಣಿ ವ್ಯವಸ್ಥೆಯಂತಹ ಅನೇಕ ತಾಂತ್ರಿಕ ಸಾಧನಗಳನ್ನು ಖರೀದಿಸಿದೆ.
ರಷ್ಯಾದೊಂದಿಗೆ ಸುದೀರ್ಘಕಾಲದ ವೈಮನಸ್ಸು ಹೊಂದಿರುವ ಅಮೆರಿಕವು ರಷ್ಯಾದ ರಕ್ಷಣಾ ಅಥವಾ ಬೇಹುಗಾರಿಕಾ ವಲಯದೊಂದಿಗೆ ಯಾವುದೇ ವ್ಯವಹಾರ ನಡೆಸುವ ತೃತೀಯ ರಾಷ್ಟ್ರಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ.

ತನ್ನ ಮಿತ್ರ ದೇಶವು ರಷ್ಯಾದಿಂದ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸಾಧನಗಳನ್ನು ಖರೀದಿಸುವ ವ್ಯವಹಾರಗಳನ್ನು ನಡೆಸಿದಾಗಲೂ ಅವರಿಗೆ ಅದಕ್ಕೆ ಸವಲತ್ತು ಒದಗಿಸುವ ಅಧಿಕಾರವನ್ನು ಅಮೆರಿಕದ ಸಂಸತ್ತು ಅಧ್ಯಕ್ಷರು ಮತ್ತು ವಿದೇಶಾಂಗ ಕಾರ್ಯದರ್ಶಿಗೆ ನೀಡಿದೆ.
ಏಷ್ಯ ಮತ್ತು ಪೆಸಿಫಿಕ್ ವಲಯದ ಭದ್ರತಾ ವ್ಯವಹಾರಗಳ ರಕ್ಷಣಾ ವಿಭಾಗದ ಪೆಂಟಗನ್‌ನ ಸಹಾಯಕ ಕಾರ್ಯದರ್ಶಿ ರಾಂಡಾಲ್ ಸ್ಕ್ರೈವರ್, ರಷ್ಯಾದಿಂದ ಭಾರತವು ಪ್ರಮುಖ ಹೊಸ ವ್ಯವಸ್ಥೆ ಮತ್ತು ತಂತ್ರಜ್ಞಾನಗಳನ್ನು ಪಡೆದುಕೊಳ್ಳಲು ಮುಂದಾಗುತ್ತದೆಯೇ ಎಂಬ ಕಳವಳ ಇದೆ. ಭಾರತಕ್ಕೆ ಇದರಿಂದ ವಿನಾಯಿತಿ ಕೊಡಬಹುದೇ ಅಥವಾ ಅದಕ್ಕೆ ನಿಬಂಧನೆಗಳನ್ನು ವಿಧಿಸಬಹುದೇ ಎಂದು ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತವು ರಷ್ಯಾದಿಂದ ಎಸ್-400 ಕ್ಷಿಪಣಿಯನ್ನು ಖರೀದಿಸುವುದು ಅನೇಕ ಕಾರಣಗಳಿಂದ ಸಮಸ್ಯಾತ್ಮಕವಾಗಲಿದೆ. ನಮ್ಮ ಪ್ರಬಲವಾದ ಆದ್ಯತೆ ಏನೆಂದರೆ ಭಾರತವು ಪರ್ಯಾಯಗಳನ್ನು ನೋಡಬೇಕು ಮತ್ತು ಅದಕ್ಕೆ ಅಗತ್ಯವಾಗಿರುವ ದಕ್ಷಣಾ ಅಗತ್ಯಗಳನ್ನು ಪೂರೈಸುವಲ್ಲಿ ನಾವು ಸಹಭಾಗಿಗಳಾಗಬಹುದೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಏಷ್ಯಾದಲ್ಲಿ ಚೀನಾದ ಪ್ರಾಬಲ್ಯವನ್ನು ಹೆಣೆಯುವ ಉದ್ದೇಶದಿಂದ ಅಮೆರಿಕವು ಭಾರತದೊಂದಿಗೆ ಇತ್ತೀಚಿನ ವರ್ಷಗಳಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಒಪ್ಪಂದಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದೆ.
ಅಮೆರಿಕ ಮತ್ತು ಫ್ರಾನ್ಸ್ ದೇಶಗಳಿಂದ ಭಾರತ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಿದೆ. ಆದರೆ, ತನ್ನ ಹಾಲಿ ವ್ಯವಸ್ಥೆಯನ್ನು ನಿಭಾಯಿಸಲು ಹಾರ್ಡ್‌ವೇರ್ ಮತ್ತು ಪರಿಣತರಿಗಾಗಿ ಭಾರತ ಈಗಲೂ ರಷ್ಯಾವನ್ನು ಅವಲಂಬಿಸಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications