ಯುಎಸ್ -ಇರಾನ್ ಸಂಘರ್ಷ;ಕಚ್ಚಾತೈಲ ಬೆಲೆ ಏರಿಕೆ, ಇಂಧನ ದರ ಹೆಚ್ಚಳ
ನವದೆಹಲಿ, ಜನವರಿ 06: ಯುಎಸ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮದಿಂದಾಗಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ತೈಲ ಆಮದು ಮಾಡುವ ಪ್ರಮುಖ ದೇಶವಾದ ಭಾರತದಲ್ಲಿಇಂದು ಇಂಧನ ಬೆಲೆ ಹೆಚ್ಚಳವಾಗಿದೆ. ಕಳೆದ ಐದು ದಿನಗಳಿಂದ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ.
ಬಾಗ್ದಾದಿನ ವಿಮಾನ ನಿಲ್ದಾಣದ ಮೇಲೆ ನಡೆದ ವಾಯುದಾಳಿಯಲ್ಲಿ ಇರಾನ್ನಿನ ಸೇನಾಧಿಕಾರಿ ಸೋಲೆಮನಿ ಹತ್ಯೆಯ ಪ್ರತೀಕಾರವಾಗಿ ಅಮೆರಿಕದ ವಿರುದ್ಧ ಇರಾನ್ ದಾಳಿ ನಡೆಸುವ ಬೆದರಿಕೆ ಹಾಕಿದೆ. ಇರಾನ್ನಿನ ಪ್ರಮುಖ 52 ತಾಣಗಳನ್ನು ಗುರಿಯನ್ನಾಗಿಸಿ ದಾಳಿ ನಡೆಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಈ ಎಲ್ಲಾ ಉದ್ವಿಗ್ನ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ ಎರಡು ದಿನದಲ್ಲಿ 1,700ಕ್ಕೂ ಹೆಚ್ಚು ಹೆಚ್ಚಳ ಕಂಡಿದೆ. ಸೆನ್ಸೆಕ್ಸ್ ಕುಸಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ. ಇದೇ ವೇಳೆ, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 72 ರೂ ಗಡಿ ದಾಟಿ ಹೋಗಿದೆ. ಒಂದು ಡಾಲರ್ಗೆ 72.03 ರೂಪಾಯಿ ದರ ನಂತೆ ಟ್ರೇಡ್ ಆಗುತ್ತಿದೆ.
ಬ್ರೆಂಟ್ ಕಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 70 ಯುಎಸ್ ಡಾಲರ್ ನಷ್ಟಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಬೆಲೆ 78.28 ರೂ ಇದೆ. ಡೀಸೆಲ್ ಬೆಲೆ 70.27ರು ಪ್ರತಿ ಲೀಟರ್ ನಷ್ಟಿದೆ.

ಜನವರಿಯಿಂದ ಸತತ ಇಂಧನ ದರ ಏರಿಕೆ
ಇರಾನ್ ಹಾಗೂ ಯುಎಸ್ ನಡುವಿನ ವ್ಯಾಪಾರ, ವಹಿವಾಟು ತಿಕ್ಕಾಟ ಮುಂದುವರಿದಿದೆ. ಯುಎಸ್ ನಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಉಂಟಾಗುತ್ತಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಭಾರತದಲ್ಲಿ ಇಂಧನ ದರ ಏರಿಕೆ(ಜನವರಿಯಿಂದ ಪೆಟ್ರೋಲ್ 55 ಪೈಸೆ, ಡೀಸೆಲ್ 72 ಪೈಸೆ) ಇನ್ನಷ್ಟು ಕಾಲ ಮುಂದುವರೆಯುವ ಸೂಚನೆ ಸಿಕ್ಕಿದೆ. ಭಾರತದ ತನ್ನ ಇಂಧನ ಬಳಕೆಯ ಶೇ80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ 15 ದಿನಗಳ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆಯನ್ನು ನಿರ್ಧರಿಸಲಿವೆ.

ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ
ಪೆಟ್ರೋಲ್, ಡೀಸೆಲ್ ದರ ನಿಗದಿಯಲ್ಲಿ ಯುಎಸ್ ಡಾಲರ್ ಹಾಗೂ ರುಪಾಯಿ ವಿನಿಮಯ ದರ ಕೂಡಾ ಪ್ರಮುಖ ಪಾತ್ರವಹಿಸಲಿದೆ. ಡಾಲರ್ ದರ ಹೆಚ್ಚಾದರೆ ಭಾರತಕ್ಕೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ. ಗಲ್ಫ್ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳಲು ಡಾಲರ್ ಕರೆನ್ಸಿಯನ್ನೇ ಭಾರತ ಬಳಸುತ್ತಿದೆ. ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 72 ರೂ ಗಡಿ ದಾಟಿ ಹೋಗಿದೆ. ಒಂದು ಡಾಲರ್ಗೆ 72.03 ರೂಪಾಯಿ ದರ ನಂತೆ ಟ್ರೇಡ್ ಆಗುತ್ತಿದೆ.

ಬೆಂಗಳೂರಿನ ಕಳೆದ 5 ದಿನಗಳಲ್ಲಿ ಇಂಧನ ಬೆಲೆ
ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ
ಜನವರಿ 06: 78.22ರು (0.15 ಪೈಸೆ ಏರಿಕೆ)
ಜನವರಿ 05: 78.07 ರು (10 ಪೈಸೆ ಏರಿಕೆ)
ಜನವರಿ 04: 77.97 ರು (10 ಪೈಸೆ ಏರಿಕೆ)
ಜನವರಿ 03: 77.87 ರು (08 ಪೈಸೆ ಏರಿಕೆ)
ಜನವರಿ 02: 77.79 ರು (08 ಪೈಸೆ ಏರಿಕೆ)
ಡೀಸೆಲ್
ಜನವರಿ 06: 70.97ರು (0.18 ಪೈಸೆ ಏರಿಕೆ)
ಜನವರಿ 05: 70.79 ರು (11 ಪೈಸೆ ಏರಿಕೆ)
ಜನವರಿ 04: 70.68 ರು (16 ಪೈಸೆ ಏರಿಕೆ)
ಜನವರಿ 03: 70.52 ರು (13 ಪೈಸೆ ಏರಿಕೆ)
ಜನವರಿ 02: 70.39 ರು (11 ಪೈಸೆ ಏರಿಕೆ)

ಮುಂಬೈ ಕಳೆದ 5 ದಿನಗಳಲ್ಲಿ ಇಂಧನ ಬೆಲೆ
ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ
ಜನವರಿ 06: 81.28 ರು (0.15 ಪೈಸೆ ಏರಿಕೆ)
ಜನವರಿ 05: 81.13 ರು (0.09 ಪೈಸೆ ಏರಿಕೆ)
ಜನವರಿ 04: 81.04 ರು (10 ಪೈಸೆ ಏರಿಕೆ)
ಜನವರಿ 03: 80.94 ರು (0.07 ಪೈಸೆ ಏರಿಕೆ)
ಜನವರಿ 02: 80.87 ರು (0.08 ಪೈಸೆ ಏರಿಕೆ)
ಡೀಸೆಲ್
ಜನವರಿ 06: 72.02ರು (0.18 ಪೈಸೆ ಏರಿಕೆ)
ಜನವರಿ 05: 71.84 ರು (12 ಪೈಸೆ ಏರಿಕೆ)
ಜನವರಿ 04: 71.72 ರು (16 ಪೈಸೆ ಏರಿಕೆ)
ಜನವರಿ 03: 71.56 ರು (13 ಪೈಸೆ ಏರಿಕೆ)
ಜನವರಿ 02: 71.43 ರು (12 ಪೈಸೆ ಏರಿಕೆ)

ಚೆನ್ನೈ ಕಳೆದ 5 ದಿನಗಳಲ್ಲಿ ಇಂಧನ ಬೆಲೆ
ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ
ಜನವರಿ 06: 78.64 ರು (0.16 ಪೈಸೆ ಏರಿಕೆ)
ಜನವರಿ 05: 78.48 ರು (0.09 ಪೈಸೆ ಏರಿಕೆ)
ಜನವರಿ 04: 78.39 ರು (0.11 ಪೈಸೆ ಏರಿಕೆ)
ಜನವರಿ 03: 78.28 ರು (0.08 ಪೈಸೆ ಏರಿಕೆ)
ಜನವರಿ 02: 78.20 ರು (0.08 ಪೈಸೆ ಏರಿಕೆ)
ಡೀಸೆಲ್
ಜನವರಿ 06: 72.58ರು (0.19 ಪೈಸೆ ಏರಿಕೆ)
ಜನವರಿ 05: 72.39 ರು (11 ಪೈಸೆ ಏರಿಕೆ)
ಜನವರಿ 04: 72.28 ರು (16 ಪೈಸೆ ಏರಿಕೆ)
ಜನವರಿ 03: 72.12 ರು (14 ಪೈಸೆ ಏರಿಕೆ)
ಜನವರಿ 02: 71.98 ರು (12 ಪೈಸೆ ಏರಿಕೆ)












Click it and Unblock the Notifications