UPI Payment Charges: ಯುಪಿಐ ಶುಲ್ಕ ಜಾರಿ ವಿಚಾರದಲ್ಲಿ ತಾತ್ಕಾಲಿಕ ರಿಲೀಫ್ ಕೊಟ್ಟ NPCI: ದೀಪಾವಳಿ ಬಳಿಕ ಹೊಸ ನಿಯಮ ಜಾರಿ
UPI Payment Charges: ಯುಪಿಐ (UPI) ಪಾವತಿ ಶುಲ್ಕ ವಿಚಾರದಲ್ಲಿ ಕೇಂದ್ರ ಸರ್ಕಾರವು ತಾತ್ಕಾಲಿಕ ಗುಡ್‌ನ್ಯೂಸ್ ಕೊಟ್ಟಿದೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) (ವ್ಯಾಪಾರಿ ರಿಯಾಯಿತಿ ದರ - ಸರಳವಾಗಿ ಹೇಳುವುದಾದರೆ, ಗ್ರಾಹಕರು ಡಿಜಿಟಲ್ ಪಾವತಿ ಮಾಡಿದಾಗ ವ್ಯಾಪಾರಿಯಿಂದ ಪಾವತಿ ಸೇವಾ ಸಂಸ್ಥೆ ವಿಧಿಸುವ ಶುಲ್ಕ) ಶುಲ್ಕ ಜಾರಿಗೊಳಿಸುವ ನಿರ್ಧಾರವನ್ನು ಮುಂದೂಡಿದೆ. ಈ ಶುಲ್ಕವನ್ನು ದೀಪಾವಳಿಯ ನಂತರ, ನವೆಂಬರ್ ಎರಡನೇ ವಾರದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುಪಿಐ ಸ್ಟೀರಿಂಗ್ ಸಮಿತಿಯು ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗ ಹಬ್ಬದ ಋತು ನಡೆಯುತ್ತಿರುವುದರಿಂದ, ಮೊದಲು ನಿರ್ಧರಿಸಿದಂತೆ ಗುರುವಾರದಿಂದಲೇ MDR ಶುಲ್ಕ ಜಾರಿಗೊಳಿಸಲು ತೊಂದರೆಗಳಾಗುವ ಸಾಧ್ಯತೆ ಇತ್ತು. ಹೀಗಾಗಿ ಶುಲ್ಕ ಜಾರಿಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಭಾರತದ ಪ್ರಮುಖ ಡಿಜಿಟಲ್ ಪಾವತಿ ವ್ಯವಸ್ಥೆಯಾದ UPI ಅನ್ನು ನಿರ್ವಹಿಸುವ NPCI, ಈ ಶುಲ್ಕವನ್ನು ಈ ವಾರದಿಂದಲೇ ಜಾರಿ ಮಾಡುವುದಕ್ಕೆ ಮುಂದಾಗಿತ್ತು. ಆದರೆ, ಇದೀಗ ಹೊಸ ಯುಪಿಐ ಶುಲ್ಕ ಜಾರಿಯ ದಿನಾಂಕವನ್ನು ಮುಂದೂಡಲಾಗಿದೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿವೆ.
ಹೀಗಾಗಿ, ಆಯ್ದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ UPI ವಹಿವಾಟುಗಳಿಗೆ ವಿಧಿಸುವ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕವನ್ನು ದೀಪಾವಳಿಯ ನಂತರ ಜಾರಿಗೆ ತರಲು UPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿ ನಿರ್ಧರಿಸಿದೆ. ಈ ಶುಲ್ಕ ಜಾರಿಗೆ ಬರುವ ನಿಖರ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು NPCI ಪ್ರಕಟಣೆಯಲ್ಲಿ ತಿಳಿಸಿದೆ.
UPI ಸ್ಟೀರಿಂಗ್ ಸಮಿತಿಯು UPI MDR 0.4% ಗೆ ನಿಗದಿ
ಕಳೆದ ತಿಂಗಳು UPI ಸ್ಟೀರಿಂಗ್ ಸಮಿತಿಯು 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ UPI MDR ಅನ್ನು 0.4 ಪ್ರತಿಶತ ಅಥವಾ 40 ಬೇಸಿಸ್ ಪಾಯಿಂಟ್‌ಗಳಲ್ಲಿ ನಿಗದಿ ಮಾಡಿತ್ತು. MDR ಎಂದರೆ ಡಿಜಿಟಲ್ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ವ್ಯಾಪಾರಿಗಳು ಪಾವತಿಸುವ ಶುಲ್ಕ. 0.4 ಪ್ರತಿಶತದಲ್ಲಿ, ಇದು 2,000 ರೂ. ವಹಿವಾಟಿನ ಮೇಲೆ ಸರಿಸುಮಾರು 8 ರೂ. ಅಥವಾ UPI ಮೂಲಕ ಮಾಡಿದ 10,000 ರೂ. ಪಾವತಿಯ ಮೇಲೆ 40 ರೂ. ಆಗಿರಲಿದೆ.
MDR ಘೋಷಣೆಯ ನಂತರ, ಈ ಪ್ರಸ್ತಾವನೆಯು ವ್ಯಾಪಾರಿಗಳು ಮತ್ತು ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ಕಾರಣವಾಗಿತ್ತು. UPI ಶುಲ್ಕದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಇಷ್ಟಾದರೂ ಈ ಯೋಜನೆಯನ್ನು ಕೈಬಿಟ್ಟಿಲ್ಲ.
ಅಗತ್ಯ ಸೇವಾ ವಲಯಗಳ ವಹಿವಾಟುಗಳು
ಇನ್ನು ರೈಲ್ವೆ, ದೂರಸಂಪರ್ಕ, ವಿಮೆ, ಇಂಧನ ಹಾಗೂ ಕೃಷಿ ಪರಿಕರಗಳಂತಹ ಅಗತ್ಯ ಮತ್ತು ಕಡಿಮೆ ಲಾಭಾಂಶ ಇರುವ ವಲಯಗಳಲ್ಲಿ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳ ಮೇಲೆ ಪ್ರತಿ ವಹಿವಾಟಿಗೆ 5 ರೂಪಾಯಿಯಷ್ಟು ನಿಗದಿತ ಎಂಡಿಆರ್ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.


Click it and Unblock the Notifications
