Gold: ಬಂಗಾರ ಖರೀದಿಸುವವರಿಗೆ ಕೇಂದ್ರದಿಂದ ಖುಷಿ ಸುದ್ದಿ?

ಬಂಗಾರ ಪ್ರೀಯರಿಗೆ ಗುಡ್‌ ನ್ಯೂಸ್‌ ಸಿಗುವ ಸಾಧ್ಯತೆ ಇದೆ. ಜುಲೈ 23 ರಂದು ಕೇಂದ್ರ ಬಜೆಟ್‌ ಮಂಡನೆ ಆಗಲಿದ್ದು, ಚಿನ್ನದ ಬೆಲೆ ಇಳಿಕೆ ಆಗುತ್ತದಾ ಎಂಬ ಕುತೂಹಲ ಮನೆ ಮಾಡಿದೆ.

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆಯ ಹಾವು ಏಣಿಯ ಆಟ ನಡೆಯುತ್ತಲೇ ಇದೆ. ಚಿನ್ನ ದುಬಾರಿ ಆಗುತ್ತಿದ್ದರಿಂದ ನೋಡಿ ಆನಂದಿಸ ಬಹುದು ಅಷ್ಟೇ ಎಂಬ ನಿರ್ಧಾರ ಮಾಡುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಬಂಗಾರ ಪ್ರೀಯರಿಗೆ ಬಜೆಟ್‌ನಲ್ಲಿ ಖುಷಿ ಸಿಗುತ್ತದಾ ಎಂಬುದನ್ನು ಕಾಯುತ್ತಿದ್ದಾರೆ.

Union Budget 2024-25 Gold Prices Reach 1-Month High Expected to Drop Post-Budget

ಈ ವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡ 2ರಷ್ಟು ಏರಿಕೆ ಕಂಡಿದೆ. ಶುಕ್ರವಾರ, ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 2,411 ಯುಎಸ್‌ ಡಾಲರ್‌ಗೆ ಮುಚ್ಚಲ್ಪಟ್ಟಿದ್ದು, ಇದು ಒಂದು ತಿಂಗಳಿನ ಅತ್ಯಧಿಕ ಮಟ್ಟವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅದೇ ಪ್ರವೃತ್ತಿ ಮುಂದುವರೆದಿದೆ. ಶುಕ್ರವಾರ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 73,285 ರೂ. ಆಗಿದೆ.

ಶೇಕಡಾ 15 ರಷ್ಟು ಬೆಲೆ ಏರಿಕೆ

ಪ್ರಸಕ್ತ ವರ್ಷ ಚಿನ್ನ ಖರೀದಿದಾರರಿಗೆ ಶಾಕ್‌ ಕಾದಿತ್ತು. ವರ್ಷದ ಆರಂಭದಲ್ಲಿ 63,870 ಇದ್ದ ಚಿನ್ನದ ಬೆಲೆ ಈಗ 73 ಸಾವಿರ ದಾಟಿದೆ. ಅಂದರೆ ಚಿನ್ನದ ಬೆಲೆ ಈ ವರ್ಷ ಶೇಕಡಾ 15 ರಷ್ಟು ಹೆಚ್ಚಳ ಕಂಡಿದೆ. ಇದರ ನೇರ ಪರಿಣಾಮ ಬೇಡಿಕೆ ಮೇಲೆ ಕಂಡು ಬಂದಿದೆ. ಇಟಿ ವರದಿಯ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಾರ್ಷಿಕ ಆಧಾರದ ಮೇಲೆ ದೇಶದಲ್ಲಿ ಚಿನ್ನದ ಬೇಡಿಕೆಯು ಶೇಕಡಾ 15 ರಷ್ಟು ಕುಸಿದಿದೆ.

Union Budget 2024-25 Gold Prices Reach 1-Month High Expected to Drop Post-Budget

ಬೆಲೆ ಏರಿಕೆಯಿಂದಾಗಿ ಜನರು ಚಿನ್ನದ ಖರೀದಿಯಿಂದ ದೂರ ಉಳಿದಿದ್ದಾರೆ. ಮತ್ತೊಂದೆಡೆ ಮದುವೆಗೆ ಶುಭ ಮುಹೂರ್ತ ಕಡಿಮೆಯಾದ ಕಾರಣ ಜುಲೈ ತಿಂಗಳಿನಲ್ಲಿ ಚಿನ್ನಾಭರಣಕ್ಕೆ ಬೇಡಿಕೆ ಬಂದಿಲ್ಲ.

ಸುಂಕ ಕಡಿತಕ್ಕೆ ಆಗ್ರಹ

ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿತವಾಗಿದ್ದು, ಉದ್ಯಮಿಗಳು ಹೈರಾಣಾಗಿದ್ದಾರೆ. ಈ ಬಗ್ಗೆ ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಚಿನ್ನ ಆಭರದಣದ ಆಮದು ಸುಂಕವನ್ನು ಶೇಕಡಾ 5 ರಿಂದ 10 ಕ್ಕೆ ಇಳಿಸಬೇಕೆಂದು ಉದ್ಯಮಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇನ್ನು ಹಲವರು ಈ ಸುಂಕವನ್ನು 15 ಪ್ರತಿಶತದಿಂದ 4 ಪ್ರತಿಶತಕ್ಕೆ ಇಳಿಸಲು ಬೇಡಿಕೆಯನ್ನು ಇಡಲಾಗಿದೆ. ಕಸ್ಟಮ್ ಸುಂಕ ಕಡಿತವು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಚಿನ್ನದ ಖರೀದಿಯು ಅಗ್ಗವಾಗಲಿದೆ.

ಬಜೆಟ್‌ ಮೇಲೆ ಚಿತ್ತ

ಆಭರಣ ಉದ್ಯಮಿಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದ್ದೇ ಆದಲ್ಲಿ, ಬೇಡಿಕೆಯಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ. ಈ ಬೇಡಿಕೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಮನ್‌ ಅವರು ಮಂಡಿಸುವ ಬಜೆಟ್‌ನಲ್ಲಿ ಮಂಡಿಸಿದರೆ, ಬೇಡಿಕೆ ಹೆಚ್ಚಾಗುತ್ತದೆ. ಬಜೆಟ್ ನಂತರ ಜನರು ಚಿನ್ನ ಖರೀದಿಸಲು ಸುವರ್ಣಾವಕಾಶ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+