ಫ್ಲಿಪ್ ಕಾರ್ಟ್ ಜೊತೆ ಉಬರ್ ಒಪ್ಪಂದ, ಅಗತ್ಯ ಸೇವೆ ಆರಂಭ

ಬೆಂಗಳೂರು, ಏಪ್ರಿಲ್ 7: ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮುಂಬೈ ಮತ್ತು ದೆಹಲಿಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತದ ಅತಿದೊಡ್ಡ ಇ-ಪ್ಲಾಟ್‍ಫಾರ್ಮ್ ಆಗಿರುವ ಫ್ಲಿಪ್‍ಕಾರ್ಟ್ ಮತ್ತು ಉಬರ್ ಒಪ್ಪಂದ ಮಾಡಿಕೊಂಡಿವೆ.

Recommended Video

      ಫ್ಲಿಪ್‌ಕಾರ್ಟ್ ನಲ್ಲಿ 70 ಸಾವಿರದ ಗೂಗಲ್ ಫೋನ್ 11 ಸಾವಿರಕ್ಕೆ

      ಫ್ಲಿಪ್‍ಕಾರ್ಟ್ ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಗಳ ಹಿನ್ನೆಲೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಈ ಪಾಲುದಾರಿಕೆ ಸಹಕಾರಿಯಾಗಲಿದೆ. ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಮನೆಯಲ್ಲೇ ಉಳಿದಿದ್ದಾರೆ. ಇಂತಹ ನಾಗರಿಕರಿಗೆ ಈ ಪಾಲುದಾರಿಗೆ ನೆರವಾಗಲಿದೆ.

      ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ಫ್ಲಿಪ್‍ಕಾರ್ಟ್‍ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು, ''ಪ್ರಸ್ತುತ ದೇಶಾದ್ಯಂತ ಲಾಕ್‍ಡೌನ್ ಇರುವ ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ನಮ್ಮ ಮಾರಾಟಗಾರರು/ವೆಂಡರ್‍ಗಳು ನಾಗರಿಕರ ಮನೆ ಬಾಗಿಲುಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸುವುದಕ್ಕೆ ಈ ಪಾಲುದಾರಿಕೆ ನೆರವಾಗಲಿದೆ'' ಎಂದರು.

      21ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ

      21ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ

      ದೇಶಾದ್ಯಂತ ಕೋವಿಡ್-19 ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಫ್ಲಿಪ್‍ಕಾರ್ಟ್ ತನ್ನ ಸಂಪೂರ್ಣವಾದ ಬೆಂಬಲ ನೀಡುತ್ತಿದೆ. ಈ ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಗ್ರಾಹಕರಿಗೆ ಸಾಧ್ಯವಾದಷ್ಟು ಮಟ್ಟಿಗೆ ಲಭ್ಯವಿರುವ ಆಯ್ಕೆಗಳನ್ನು ಉಪಯೋಗಿಸಿಕೊಂಡು ಸೇವೆಗಳನ್ನು ಮುಂದುವರಿಸಲು ಬದ್ಧವಾಗಿದೆ. ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಇರುವ ಗ್ರಾಹಕರಿಗೆ ನಾವು ಅಗತ್ಯ ಸೇವೆಗಳನ್ನು ಪೂರೈಸುವ ಮೂಲಕ ಕೋವಿಡ್-19 ನಿರ್ಮೂಲನೆಗೆ ಸರ್ಕಾರಗಳು ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ರಜನೀಶ್ ತಿಳಿಸಿದರು.

      ಉಬರ್ ಇಂಡಿಯಾ ನಿರ್ದೇಶಕ ಮಾತನಾಡಿ

      ಉಬರ್ ಇಂಡಿಯಾ ನಿರ್ದೇಶಕ ಮಾತನಾಡಿ

      ಉಬರ್ ಇಂಡಿಯಾ & ದಕ್ಷಿಣ ಏಷ್ಯಾದ ಕಾರ್ಯಾಚರಣೆ ನಿರ್ದೇಶಕ ಮತ್ತು ಹೆಡ್ ಆಫ್ ಸಿಟೀಸ್ ಆಗಿರುವ ಪ್ರಭ್‍ಜೀತ್ ಸಿಂಗ್ ಅವರು ಮಾತನಾಡಿ, ''ಇಂದು ಫ್ಲಿಪ್‍ಕಾರ್ಟ್ ಜತೆಗೆ ಪಾಲುದಾರಿಕೆಯನ್ನು ಪ್ರಕಟಿಸಲು ಸಂತಸವಾಗುತ್ತಿದೆ. ಫ್ಲಿಪ್‍ಕಾರ್ಟ್‍ನೊಂದಿಗೆ ಸೇರಿ ನಾವು ಕಟ್ಟಕಡೆಯ ಮೈಲಿಯನ್ನು ತಲುಪಲು ಸಹಕಾರಿಯಾಗಲಿದೆ. ಲಕ್ಷಾಂತರ ಭಾರತೀಯರು ಮನೆಯಲ್ಲೇ ಇರುವ ಈ ಸಂದರ್ಭದಲ್ಲಿ ಆರ್ಥಿಕತೆ ಮುನ್ನಡೆಯಲು ಈ ಪಾಲುದಾರಿಕೆ ಸಹಕಾರಿಯಾಗಲಿದೆ ಮತ್ತು ಚಾಲಕರಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಅವಕಾಶವನ್ನು ಕಲ್ಪಿಸುತ್ತಿದೆ"'ಎಂದರು.

      ಚಾಲಕರಿಗೆ ಸಂಪೂರ್ಣ ಆದಾಯ

      ಚಾಲಕರಿಗೆ ಸಂಪೂರ್ಣ ಆದಾಯ

      ಸರ್ಕಾರದ ಮಾರ್ಗಸೂಚಿಗಳನ್ವಯ ಉಬರ್ ನ ಎಲ್ಲಾ ಚಾಲಕರಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅವರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಅನ್ನು ನೀಡಲಾಗುತ್ತಿದ್ದು, ಸುರಕ್ಷತೆಯ ಬಗ್ಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ. ಈ ಸೇವೆಗೆ ಉಬರ್ ಯಾವುದೇ ಕಮೀಷನ್ ಅನ್ನು ಪಡೆಯುವುದಿಲ್ಲ, ಬದಲಾಗಿ ಇದರಿಂದ ಬರುವ ಆದಾಯ ಸಂಪೂರ್ಣವಾಗಿ ಚಾಲಕರಿಗೇ ತಲುಪಲಿದೆ.

      ಬೆಂಗಳೂರಿನಲ್ಲಿ ಇ ಪಾಸ್ ಅಗತ್ಯ

      ಬೆಂಗಳೂರಿನಲ್ಲಿ ಇ ಪಾಸ್ ಅಗತ್ಯ

      ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆನ್ ಲೈನ್ ಡೆಲಿವರಿ ಮಾಡುವ ಸುಮಾರು 25ಕ್ಕೂ ಅಧಿಕ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ, ಇ ಪಾಸ್ ಪಡೆಯುವಂತೆ ಸೂಚಿಸಿದ್ದಾರೆ. ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸಬಹುದಾಗಿದೆ ಎಂದು ಪೊಲೀಸರು ಸೂಚಿಸಿದ್ದಾರೆ. ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+