ಟಿವಿ ಚಾನೆಲ್ ಆಯ್ಕೆ ಮಾಡಿಕೊಳ್ಳಲು ವೆಬ್‌ತಾಣ ಪರಿಚಯಿಸಿದ ಟ್ರಾಯ್
ಕೇಬಲ್ ಆಪರೇಟರ್ಸ್ ನೆರವಿಲ್ಲದೆ, ವೀಕ್ಷಕರು ತಮ್ಮ ಮನೆಯಲ್ಲಿನ ಟಿವಿ ಚಾನೆಲ್ ಗಳ ಪೈಕಿ ತಮಗಿಷ್ಟವಾದ ವಾಹಿನಿಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ಭಾರತೀಯ ದೂರಸಂಪರ್ಕ ಪ್ರಾಧಿಕಾರ(ಟ್ರಾಯ್) ಇನ್ನಷ್ಟು ಉತ್ತಮಗೊಳಿಸಿದೆ. ಈ ಹಿಂದೆ ಮೊಬೈಲ್ ಅಪ್ಲಿಕೇಷನ್ ಹೊರ ತಂದಿದ್ದ ಟ್ರಾಯ್ ಇದೀಗ ಪ್ರತ್ಯೇಕ ವೆಬ್ ತಾಣ ಪ್ರಕಟಿಸಿದೆ.
ಸುಮಾರು 16 ಡಿಟಿಎಚ್ ಹಾಗೂ ಕೇಬಲ್ ಆಪರೇಟರ್ಸ್ ಟ್ರಾಯ್ ಹೊಸ ವೆಬ್ ತಾಣದಲ್ಲಿ ಲಭ್ಯವಿದೆ. ಟ್ರಾಯ್ ಹೊರ ತಂದಿರುವ Channel Selector App ಈಗ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಆದರೆ, ಈ ಆಪ್ ಬಳಸಿ ಚಾನೆಲ್ ಆಯ್ಕೆ ಮಾಡಿಕೊಳ್ಳಲು ಸೇವಾ ಸಂಸ್ಥೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡಿರಬೇಕು.
ಟ್ರಾಯ್ ಹಾಗೂ ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟವು (AIDCF) ಮಾಸಿಕ ಕೇಬಲ್ ಟಿವಿ ಶುಲ್ಕದಲ್ಲಿ ಬದಲಾವಣೆ ತರಲು ಮುಂದಾಗಿದೆ. ತನ್ನ ಗ್ರಾಹಕರಿಗೆ 150 ಚಾನೆಲ್‌ಗಳ ಸೇವೆಯನ್ನು 130 ರೂ.ಗಳ ಕನಿಷ್ಠ ಮಟ್ಟದ ಶುಲ್ಕದ ದರದಲ್ಲಿ ನೀಡಲು AIDCF ನಿರ್ಧರಿಸಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಗೊಂದಲಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್) ಮತ್ತು 011-23220209 (ಅರವಿಂದ್ ಕುಮಾರ್) ಇಲ್ಲವೇ ಇ- ಮೇಲ್ [email protected] ಅಥವಾ [email protected]. ಗೆ ಸಂಪರ್ಕಿಸಬಹುದು

ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ಈಗ ಈ ಸಂಖ್ಯೆಯನ್ನು 150ಕ್ಕೇರಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಬೇಕಾಗಿಲ್ಲ, ಈ ಚಾನೆಲ್ ಬರದಿದ್ದರೆ ದೂರು ಸಲ್ಲಿಸಿ ಪಡೆಯಬಹುದು.
HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿತ್ತು. ಆದರೆ, ಈ ಶುಲ್ಕದಲ್ಲಿ ಭಾರಿ ಬದಲಾವಣೆ ತರಲಾಗಿದೆ. ಒಬ್ಬ ಬಳಕೆದಾರನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕವಿದ್ದರೆ ಆತನಿಗೆ 2 ಮತ್ತು ಆ ನಂತರ ಪಡೆಯುವ ಪ್ರತಿ ಮೊದಲ ಸಂಪರ್ಕಕ್ಕೆ ಶೇ 40ರಷ್ಟನ್ನು ಮಾತ್ರ ಎನ್‌ಸಿಎಫ್ ಶುಲ್ಕವಾಗಿ ವಿಧಿಸಬಹುದಾಗಿದೆ. 12 ರೂ. ಮತ್ತು ಅದಕ್ಕಿಂತ ಕಡಿಮೆ ಶುಲ್ಕ ಹೊಂದಿರುವ ಚಾನೆಲ್‌ಗಳನ್ನು ಮಾತ್ರ ಆಪರೇಟರ್‌ಗಳು ಚಾನೆಲ್ ಗುಚ್ಛದಲ್ಲಿ ಸೇರಿಸಬೇಕಾಗಿದೆ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications