ಕಳೆದ 1 ವಾರದಲ್ಲಿ 1.37 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಸಂಪಾದನೆ: ಟಾಪ್ 10 ಸಂಸ್ಥೆಗಳು

ನವದೆಹಲಿ, ಜುಲೈ 6: ಭಾರತ-ಚೀನಾ ಗಡಿ ಸಂಘರ್ಷಣೆಯ ಒತ್ತಡ ಸ್ವಲ್ಪ ತಿಳಿಯಾಗುವ ಲಕ್ಷಣ ಕಾಣುತ್ತಿರುವ ಬೆನ್ನಲ್ಲೇ ಕಳೆದ ಒಂದು ವಾರದಲ್ಲಿ ಷೇರುಪೇಟೆಯು ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದೆ. ಈ ವೇಳೆ ಭಾರತೀಯ ಕಂಪನಿಗಳಿಗೆ ವಿದೇಶಿ ಬಂಡವಾಳವು ಕೂಡ ಹರಿದುಬರುತ್ತಿದೆ.

ಹೀಗೆ ಕಳೆದ ಒಂದು ವಾರದಲ್ಲಿ ಭಾರತದ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಗಮನಾರ್ಹವಾಗಿ ಏರಿಕೆ ದಾಖಲಿಸಿದೆ. ಭಾರತೀಯ ಕಂಪನಿಗಳು ಕಳೆದ ಒಂದು ವಾರದಲ್ಲಿ ಮಾರುಕಟ್ಟೆ ಮೌಲ್ಯಮಾಪನದಲ್ಲಿ 1,37,508.61 ಕೋಟಿಗಳನ್ನು ಸೇರಿಸಿವೆ.

ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಏರಿಕೆ ಕಂಡ ಟಿಸಿಎಸ್‌

ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಏರಿಕೆ ಕಂಡ ಟಿಸಿಎಸ್‌

ಹೌದು, ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ಬಂಡವಾಳ ಮೌಲ್ಯ ಏರಿಕೆ ಕಂಡ ಉದ್ಯಮಗಳಲ್ಲಿ ಮೊದಲಿನದು ಟಾಟಾ ಕನ್ಸಟ್ಲೆನ್ಸಿ ಸರ್ವೀಸಸ್( ಟಿಸಿಎಸ್). ಟಿಸಿಎಸ್ ಮತ್ತು ಆರ್ಐಎಲ್ ಅತಿ ಹೆಚ್ಚು ಲಾಭ ಗಳಿಸಿದ್ದು, ಟಿಸಿಎಸ್‌ ಎಲ್ಲರಿಗಿಂತ ಮುಂದೆ ಮಾರುಕಟ್ಟೆ ಮೌಲ್ಯಮಾಪನ, 31,294.89 ಕೋಟಿ ಜಿಗಿದು 8,25,149.40 ಕೋಟಿಗೆ ತಲುಪಿದೆ.

ಟಿಸಿಎಸ್‌ ಬಳಿಕ ಅತಿಹೆಚ್ಚು ಲಾಭ ಕಂಡ ಕಂಪನಿ ರಿಲಯನ್ಸ್

ಟಿಸಿಎಸ್‌ ಬಳಿಕ ಅತಿಹೆಚ್ಚು ಲಾಭ ಕಂಡ ಕಂಪನಿ ರಿಲಯನ್ಸ್

ಟಿಸಿಎಸ್ ಬಳಿಕ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಮಾಲ್ಯವರ್ಧನೆ ಕಂಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ತನ್ನ ಮಾರುಕಟ್ಟೆ ಮೌಲ್ಯಮಾಪನವನ್ನು, 11,33,168.55 ಕೋಟಿಗೆ ತಲುಪಲು, 28,464.11 ಕೋಟಿಗಳನ್ನು ಸೇರಿಸಿದೆ.

ಹೆಚ್‌ಡಿಎಫ್‌ಸಿಯ ಮಾರುಕಟ್ಟೆ ಬಲವರ್ಧನೆ

ಹೆಚ್‌ಡಿಎಫ್‌ಸಿಯ ಮಾರುಕಟ್ಟೆ ಬಲವರ್ಧನೆ

ಎಚ್‌ಡಿಎಫ್‌ಸಿಯ ಮಾರುಕಟ್ಟೆ ಬಂಡವಾಳೀಕರಣವು 20,519.86 ಕೋಟಿ ಹೆಚ್ಚಾಗಿ 3,27,120.52 ಕೋಟಿಗೆ ತಲುಪಿದೆ ಮತ್ತು ಐಟಿಸಿಯ 15,057.98 ಕೋಟಿ ಏರಿಕೆಯಾಗಿ 2,54,879.41 ಕೋಟಿಗೆ ತಲುಪಿದೆ.

 ಏರ್‌ಟೆಲ್ , ಐಸಿಐಸಿಐ ಬ್ಯಾಂಕ್, ಇನ್ಪೋಸಿಸ್ ಮಾರುಕಟ್ಟೆ ಮೌಲ್ಯವು ಹೆಚ್ಚಳ

ಏರ್‌ಟೆಲ್ , ಐಸಿಐಸಿಐ ಬ್ಯಾಂಕ್, ಇನ್ಪೋಸಿಸ್ ಮಾರುಕಟ್ಟೆ ಮೌಲ್ಯವು ಹೆಚ್ಚಳ

ಭಾರತಿ ಏರ್‌ಟೆಲ್‌ನ ಮೌಲ್ಯಮಾಪನ 11,347.56 ಕೋಟಿಯಿಂದ 3,17,022.44 ಕೋಟಿಗೆ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ 10,211.92 ಕೋಟಿಯನ್ನು ಸೇರಿಸಿ 5,89,765.72 ಕೋಟಿಗೆ ತಲುಪಿದೆ.

ಐಸಿಐಸಿಐ ಬ್ಯಾಂಕಿನ ಮೌಲ್ಯಮಾಪನ, 7,780.46 ಕೋಟಿ ಏರಿಕೆ ಕಂಡು 2,33,782.89 ಕೋಟಿಗೆ ತಲುಪಿದೆ ಮತ್ತು ಇನ್ಫೋಸಿಸ್‌ನ ಮೌಲ್ಯ 6,154.48 ಕೋಟಿ ಏರಿಕೆಯಾಗಿ 3,24,803.13 ಕೋಟಿಗೆ ತಲುಪಿದೆ.

ಇದರ ಜೊತೆಗೆ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ನ ಮಾರುಕಟ್ಟೆ ಬಂಡವಾಳೀಕರಣವು, 4,193.95 ಕೋಟಿ ಏರಿಕೆ ಕಂಡು, 5,10,392.76 ಕೋಟಿಗೆ ತಲುಪಿದೆ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ 2,483.4 ಕೋಟಿಗಳನ್ನು ಸೇರಿಸಿ ಅದರ ಮೌಲ್ಯಮಾಪನವನ್ನು 2,67,831.17 ಕೋಟಿಗೆ ತೆಗೆದುಕೊಂಡಿದೆ.

ಹೆಚ್ಚು ಮೌಲ್ಯಯುತ ಕಂಪನಿಗಳಲ್ಲಿ ಮುಕೇಶ್ ಅಂಬಾನಿ ಕಂಪನಿಯೇ ಟಾಪ್

ಹೆಚ್ಚು ಮೌಲ್ಯಯುತ ಕಂಪನಿಗಳಲ್ಲಿ ಮುಕೇಶ್ ಅಂಬಾನಿ ಕಂಪನಿಯೇ ಟಾಪ್

ಹೌದು, ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೊಂದಿರುವ ಕಂಪನಿಯಾಗಿದ್ದು, ಆರ್‌ಐಎಲ್ ಭಾರತೀಯ ಕಂಪನಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ನಂತರದಲ್ಲಿ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಯುಎಲ್, ಎಚ್‌ಡಿಎಫ್‌ಸಿ, ಇನ್ಫೋಸಿಸ್, ಭಾರತಿ ಏರ್‌ಟೆಲ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಟಿಸಿ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನದಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+