ಏರುತ್ತಲೇ ಸಾಗಿದ ಚಿನ್ನದ ಬೆಲೆ: ಆಗಸ್ಟ್ 03 ರ ದರ ಹೀಗಿದೆ
ನವದೆಹಲಿ, ಆಗಸ್ಟ್ 03: ವಿಶ್ವದಲ್ಲಿ ಕೊರೊನಾವೈರಸ್ ಸೋಂಕು ಹೇಗೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆಯೋ, ಹಾಗೆಯೇ ಹಳದಿ ಲೋಹದ ಬೆಲೆ ಗಗನಕ್ಕೇರುತ್ತಿದೆ. ಸೋಮವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 52,450 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 53,650 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 280 ರೂಪಾಯಿ ಹೆಚ್ಚಾಗಿ 65,400 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 03: 50,760-55,370 (110 ರೂಪಾಯಿ ಏರಿಕೆ)
ಆಗಸ್ಟ್ 02: 50,660-55,260
ಆಗಸ್ಟ್ 01: 50,650-55,250
ಜುಲೈ 31: 50,500-55,000

ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 03: 52,450-53,650 (190 ರೂಪಾಯಿ ಏರಿಕೆ)
ಆಗಸ್ಟ್ 02: 52,260-53,460
ಆಗಸ್ಟ್ 01: 52,250-53,450
ಜುಲೈ 31: 52,200-53,200

ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 03: 51,880-56,590 (90 ರೂಪಾಯಿ ಏರಿಕೆ)
ಆಗಸ್ಟ್ 02: 51,790-56,500
ಆಗಸ್ಟ್ 01: 51,780-56,490
ಜುಲೈ 31: 51,250-55,820

ಮುಂಬೈ ಚಿನ್ನದ ಬೆಲೆ
ಆಗಸ್ಟ್ 03: 52,400-53,400 (100 ರೂಪಾಯಿ ಇಳಿಕೆ)
ಆಗಸ್ಟ್ 02: 52,500-53,500
ಆಗಸ್ಟ್ 01: 52,500-53,500
ಜುಲೈ 31: 51,900-52,900

ಜೈಪುರ ಚಿನ್ನದ ಬೆಲೆ
ಆಗಸ್ಟ್ 03: 52,450-53,650 (190 ರೂಪಾಯಿ ಏರಿಕೆ)
ಆಗಸ್ಟ್ 02: 52,260-53,460
ಆಗಸ್ಟ್ 01: 52,250-53,450
ಜುಲೈ 31: 52,200-53,200

ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 03: 52,200-54,290 (60 ರೂಪಾಯಿ ಇಳಿಕೆ)
ಆಗಸ್ಟ್ 02: 52,260-55,010
ಆಗಸ್ಟ್ 01: 52,250-55,000
ಜುಲೈ 31: 51,500-54,500

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications