ಟೈಟಾನ್ ಐ ಪ್ಲಸ್: ಹೊಸ ಬ್ರ್ಯಾಂಡ್ ಐಡೆಂಡಿಟಿ ಅನಾವರಣ

Posted By:
Subscribe to Oneindia Kannada

ಬೆಂಗಳೂರು, ಮಾ. 02: ಟೈಟಾನ್ ಕಂಪನಿ ಲಿಮಿಟೆಡ್ ನ ಟೈಟಾನ್ ಐ ಪ್ಲಸ್ ಭಾರತದ ಮುಂಚೂಣಿ ಕನ್ನಡಕ ವಹಿವಾಟು ಸಂಸ್ಥೆಯಾಗಿದೆ. ಈ ವಲಯದಲ್ಲಿ ಸಂಶೋಧನೆ, ವಿನ್ಯಾಸ ಮತ್ತು ರೀಟೇಲ್ ಅನುಭವಕ್ಕೆ ಒಂದು ಮೈಲುಗಲ್ಲು ಸೃಷ್ಟಿಸಿದ್ದು, ಗುಣಮಟ್ಟಕ್ಕೆ ಮತ್ತೊಮ್ಮೆ ಮರುವ್ಯಾಖ್ಯಾನ ನೀಡುತ್ತಿದೆ.

ಟೈಟಾನ್ ಐಪ್ಲಸ್ ಹೊಸ ಬ್ರ್ಯಾಂಡ್ ಲಾಂಛನವನ್ನು ಬಿಡುಗಡೆಗೊಳಿಸಿದ್ದು, ಯುವಕರ ವ್ಯಕ್ತಿತ್ವವವನ್ನು ಬಿಂಬಿಸುವ ಅತ್ಯಾಧುನಿಕ ನೋಟವನ್ನು ಹೊಂದಿದೆ. ಬ್ರ್ಯಾಂಡ್ ಹೊಸ ರೀಟೇಲ್ ಹೆಗ್ಗುರುತನ್ನು ಬಿಡುಗಡೆಗೊಳಿಸಿದ್ದು, ಕನ್ನಡಕ ಉದ್ಯಮದಲ್ಲಿನ ರೀಟೇಲ್ ಅನುಭವಕ್ಕೆ ಹೊಸ ವ್ಯಾಖ್ಯಾನ ನೀಡುವ ಗುರಿ ಹೊಂದಿದೆ. ಇಂದಿನ ಜೀವನಶೈಲಿಗೆ ಅಗತ್ಯವಾದ ಫ್ಯಾಷನ್ ಸಲಕರಣೆಯಾಗಿ ಈ ಉದ್ಯಮ ವರ್ಗಾಂತರಗೊಂಡಿರುವುದನ್ನು ಹೊಸ ಐಡೆಂಟಿಟಿ ಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್‍ನ ಕನ್ನಡಕ ವಹಿವಾಟು ವಿಭಾಗದ ಸಿಇಒ ರೊನಿ ಟಲಟಿ, ಕನ್ನಡಕ ವಹಿವಾಟಿನ ವಲಯದ ನಾಯಕನಾಗಿ, ಟೈಟಾನ್ ಐಪ್ಲಸ್ ನಲ್ಲಿ ನಾವು ನಿರಂತರವಾಗಿ ನಾವು ಮುಂದಿರುವುದನ್ನು ಸಾಬೀತುಗೊಳಿಸುತ್ತಿದ್ದೇವೆ. ನಾವು ಸಂಶೋಧನೆ ಮತ್ತು ಪ್ರಯೋಗದತ್ತ ದೃಷ್ಟಿ ಹಾಯಿಸಿದ್ದು, ಕನ್ನಡಕ ಉತ್ಪನ್ನವನ್ನು ಅತ್ಯಂತ ಅಪೇಕ್ಷಣೀಯ ಉತ್ಪನ್ನದ ವಲಯವಾಗಿಸುವ ಮತ್ತು ಗ್ರಾಹಕರಿಗೆ ಹೊಸ ಅನುಭವ ನೀಡುವ ಉದ್ದೇಶ ಹೊಂದಿದ್ದೇವೆ. ನಮ್ಮ ಹೊಸ ಐಡೆಂಟಿಟಿ ಜೀವನಶೈಲಿಯ ಅಗತ್ಯತೆಯಲ್ಲಿನ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಜೀವನಶೈಲಿ ಅಥವಾ ಸಾಂದರ್ಭಿಕ ಅಗತ್ಯ ಪೂರೈಕೆ

ಜೀವನಶೈಲಿ ಅಥವಾ ಸಾಂದರ್ಭಿಕ ಅಗತ್ಯ ಪೂರೈಕೆ

ಅಂತಾರಾಷ್ಟ್ರೀಯ ನೀತಿಗಳು, ಮಹಿಳೆಯರ ಉತ್ಪನ್ನದ ಮೇಲೆ ನಿರ್ಧಿಷ್ಟ ದೃಷ್ಟಿಕೋನ, ಮಕ್ಕಳು ಮತ್ತು ಯುವಕರಿಗೆ ಪ್ರತ್ಯೇಕ ವಿಭಾಗ ಮೊದಲಾದವುಗಳನ್ನು ಹೊಂದಿದೆ.

ಪ್ರತಿ ಗ್ರಾಹಕ ವಲಯ ಜೀವನಶೈಲಿ ಅಥವಾ ಸಾಂದರ್ಭಿಕ ಅಗತ್ಯಗಳಾದ ಕಾರ್ಪೋರೇಟ್, ಫ್ಯಾಷನ್, ಸ್ಫೋರ್ಟ್ಸ್ ಇತ್ಯಾದಿ ಪ್ರತ್ಯೇಕ ಉತ್ಪನ್ನಗಳನ್ನು ಹೊಂದಿರುತ್ತದೆ. ಪ್ರತಿ ವಲಯದಲ್ಲಿ ಫ್ಯಾಷನ್ ಕೌಂಟರ್ ಪ್ರಸ್ತುತದ ಟ್ರೆಂಡ್ ನ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಹೊಸ ಐಡೆಂಟಿಟಿ ಟೈಟಾನ್ಸ್ ನಿಂದ ಜೀವನಶೈಲಿ ಆಧಾರಿತ ಲೆನ್ಸ್ ಗಳನ್ನು ಹೊಂದಿದೆ.

ವೈವಿಧ್ಯಮಯ ಶ್ರೇಣಿ ಹಾಗೂ ಫ್ಯಾಷನ್ ಉತ್ಪನ್ನ

ವೈವಿಧ್ಯಮಯ ಶ್ರೇಣಿ ಹಾಗೂ ಫ್ಯಾಷನ್ ಉತ್ಪನ್ನ

ಕನ್ನಡಕ ಫ್ಯಾಷನ್ ನ ಸಾಮಾಗ್ರಿಯಾಗಿ ಬದಲಾಗುತ್ತಿರುವ ಸಮಯದಲ್ಲಿ ಉತ್ಪನ್ನ ಪ್ರದರ್ಶನ ರೀತಿ ಕೂಡ ಬದಲಾಗುವುದು ಅಗತ್ಯ. ಹೊಸ ಮತ್ತು ಸಂಶೋಧನಾತ್ಮಕ ಪ್ರದರ್ಶನ ವ್ಯವಸ್ಥೆ ಫ್ರಂಟ್ ಐ ಶೇಪ್ ಮತ್ತು ಟೆಂಪಲ್ಸ್ ಗಳನ್ನು ಪ್ರದರ್ಶಿಸುತ್ತದೆ.

ಹೊಸ ಮಳಿಗೆ ಟೈಟಾನ್, ಎನಿಗ್ಮಾ ಮತ್ತು ಆಡ್ರೆನೊ ಬ್ರ್ಯಾಂಡ್ ಗಳನ್ನು ಮಹಿಳೆ ಮತ್ತು ಪುರುಷರಿಗಾಗಿ ಹೊಂದಿದೆ. ಟೈಟಾನ್ ಗ್ಲೇರ್ಸ್ ಮತ್ತು ಫಾಸ್ಟ್ ಟ್ರ್ಯಾಕ್ಸ್ ಗಳ ಸನ್ ಗ್ಲಾಸ್ ಹೊಂದಿದೆ. ಡ್ಯಾಶ್ ಸರಣಿಯ ಉತ್ಪನ್ನಗಳು ಮಕ್ಕಳ ಅಗತ್ಯತೆ ಪೂರೈಸುತ್ತದೆ.

ಐಷಾರಾಮಿ ವಲಯದಲ್ಲಿ ಜಾಗತಿಕ ಬ್ರ್ಯಾಂಡ್ ಗಳು

ಐಷಾರಾಮಿ ವಲಯದಲ್ಲಿ ಜಾಗತಿಕ ಬ್ರ್ಯಾಂಡ್ ಗಳು

ಟೈಟಾನ್ ಐಪ್ಲಸ್ ಸಮರ್ಪಿತ ಐಷಾರಾಮಿ ವಲಯ ಹೊಂದಿದ್ದು, ಬೃಹತ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳಾದ ಮೌಂಟ್ ಬ್ಲ್ಯಾಂಕ್, ಸ್ವರೋಸ್ಕಿ, ಪೊರ್ಶೆ, ಟ್ಯಾಗ್-ಹ್ಯುಯರ್, ಕರೆರ, ರೇ-ಬಿನ್, ಮೌಯಿ ಜಿಮ್ ಮತ್ತು ಟಾಮಿ ಹಿಲ್ಫಿಂಗರ್ ಗಳನ್ನು ಹೊಂದಿದೆ.

ಹೈಟೆಕ್ ಲೆನ್ಸ್ ಗಳ ಮಳಿಗೆ

ಹೈಟೆಕ್ ಲೆನ್ಸ್ ಗಳ ಮಳಿಗೆ

ಆಂತರಿಕ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳ ಹೊರತಾಗಿ ಗ್ರಾಹಕ ವಲಯಕ್ಕೆ ಅಗತ್ಯ ಸಿಂಗಲ್ ವಿಷನ್, ಬೈಫೋಕಲ್ ಮತ್ತು ಪ್ರೊಗ್ರೆಸಿವ್ ಹೈಟೆಕ್ ಲೆನ್ಸ್ ಗಳನ್ನು ಮಳಿಗೆ ಹೊಂದಿದೆ. ಈ ಲೆನ್ಸ್ ಗಳು ಗ್ಲಾಸ್, ಪ್ಲಾಸ್ಟಿಕ್, ಪಾಲಿಕಾರ್ಬೊನೆಟ್ಸ್ ಮತ್ತು ಟ್ರಿವೆಕ್ಸ್ ಲೇಪನದ ಲೆನ್ಸ್ ಗಳನ್ನು ಹೊಂದಿದೆ. ಸ್ಕ್ರಾಚ್ ರೆಸಿಸ್ಟೆಂನ್ಸ್, ಆಂಟಿ ರಿಫ್ಲೆಕ್ಟೀವ್, ಶೇ.99ರಷ್ಟು ದೃಷ್ಟಿ ಸ್ಪಷ್ಟತೆಯ ಲೆನ್ಸ್ ಗಳಿವು. ಎಲ್ಲ ಟೈಟಾನ್ ಲೆನ್ಸ್ ಗಳು ಟೈಟಾನ್ ನ ಆಂತರಿಕ ಲೆನ್ಸ್ ಘಟಕದಲ್ಲಿ ಉತ್ಪಾದಿತ.

ಟೈಟಾನ್ ಐಪ್ಲಸ್ ಕುರಿತು

ಟೈಟಾನ್ ಐಪ್ಲಸ್ ಕುರಿತು

ಟೈಟಾನ್ ಐ, ಟೈಟಾನ್ ಕಂಪನಿ ಲಿಮಿಟೆಡ್ ನ ಗ್ರಾಹಕ ಉದ್ಯಮ ಆಧಾರಿತ ತೃತೀಯ ವಹಿವಾಟು. 2007ರ ಮಾರ್ಚ್ ನಲ್ಲಿ ಚಟುವಟಿಕೆ ಆರಂಭಿಸಿತು. ಈ ನಡೆ, ಉದ್ಯಮ ಮರು ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಗುಣಮಟ್ಟ ಸುಧಾರಣೆಯಲ್ಲಿ ಪಾಲು ಪಡೆದಿದೆ.

148 ನಗರಗಳಲ್ಲಿ 395 ಮಳಿಗೆಗಳು

148 ನಗರಗಳಲ್ಲಿ 395 ಮಳಿಗೆಗಳು

ದೇಶದ ನಾನಾ ಮಳಿಗೆಗಳ ಮೂಲಕ ಆಕರ್ಷಕ ಮತ್ತು ಪ್ರಸ್ತುತಕ್ಕೆ ಅಗತ್ಯವಾದ ಕನ್ನಡಕಗಳನ್ನು ಒದಗಿಸುತ್ತಿದೆ. ಟಾಟಾದ ಗುಣಮಟ್ಟ ಮತ್ತು ನಂಬಿಕೆಗೆ ಬದ್ಧವಾಗಿರುವ ಟೈಟಾನ್ ಐ, ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುತ್ತಿದೆ. ಪ್ರಸ್ತುತ ದೇಶದ 148 ನಗರಗಳಲ್ಲಿ 395 ಮಳಿಗೆಗಳನ್ನು ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Titan Eyeplus unveiled a new brand logo that has a minimalistic and contemporary look, reflecting a youthful persona of the brand. The brand has also launched a new retail identity that aims to rejuvenate one’s experience of retail in the eyewear category.
Please Wait while comments are loading...