ಗೋಲ್ಡ್ ಗುರು ಮಾತು: ಈ ವಾರದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಗೆ 3 ಕಾರಣ!
ಬೆಂಗಳೂರು, ಮಾರ್ಚ್ 23: ಚಿನ್ನ ಖರೀದಿಸುವರಿಗೆ ಸಂತಸದ ಸುದ್ದಿ. ಗೋಲ್ಡ್ ಗುರು ಹೇಳುವ ಪ್ರಕಾರ ಈ ವಾರ ಚಿನ್ನದ ಬೆಲೆಯಲ್ಲಿ ನಿರೀಕ್ಷೆಗೂ ಮೀರಿ ಇಳಿಕೆಯಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಷೇರು ಮಾರುಕಟ್ಟೆ ಅರಂಭವಾಗಿ ಅಂತ್ಯಗೊಳ್ಳುವ ವೇಳೆಗೆ ಗ್ರಾಂ ಚಿನ್ನದ ಬೆಲೆಯಲ್ಲಿ 45.8 ರೂ. ಇಳಿದಿದೆ. ಈ ವಾರ ಪೂರ್ತಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲಿದೆ . ಇದರ ಹಿಂದೆ ಮೂರು ಕಾರಣಗಳಿವೆ.
ಕಳೆದ ವಾರ ಚಿನ್ನದ ಬೆಲೆಯಲ್ಲಿ ಸ್ಥಿರತೆ ಇರಲ್ಲ ಎಂದು ಗೋಲ್ಡ್ ಗುರು ಹೇಳಿಕೆ ನೀಡಿದ್ದರು. ಅದರಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಏರಿಕೆ ಕಂಡಿತ್ತು. ಚಿನ್ನದ ಬೆಲೆ ಏರಿಕೆ- ಇಳಿಕೆಯಲ್ಲಿ ಸ್ಥಿರತೆ ಇರಲಿಲ್ಲ. ಇದನ್ನು ಕಳೆದ ಸೋಮವಾರವೇ ಗೋಲ್ಡ್ ಗುರು ಭವಿಷ್ಯ ನುಡಿದಿದ್ದರು. ಗೋಲ್ಡ್ ಗುರು ಹೇಳಿಕೆಯಂತೆ ಇದೀಗ ವಾರದ ಮೊದಲ ದಿನವೇ ಚಿನ್ನದ ಬೆಲೆ ಪ್ರತಿ ಗ್ರಾಂ ಮೇಲೆ 45.8 ರೂ. ಇಳಿಕೆಯಾಗಿದೆ. ಈ ವಾರ ಪೂರ್ತಿ ಇದೇ ರೀತಿಯ ಟ್ರೆಂಡ್ ಇರಲಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಚಿನ್ನದ ಮೇಲೆ ಹೂಡಿಕೆ ಮಾಡಲಿಕ್ಕೆ ಈ ವಾರ ಸೂಕ್ತವಾಗಲಿದೆ. ಚಿನ್ನ ಖರೀದಿ ಬೇಕಾದ್ರೂ ಮಾಡಬಹುದು ಎಂದು ಗೋಲ್ಡ್ ಗುರು ಸಾಮಾನ್ಯ ಜನರಿಗೆ ಟಿಪ್ಸ್ ನೀಡಿದ್ದಾರೆ.
ಪುನಃ ಕುಸಿತ ಕಂಡ ಬಂಗಾರದ ಬೆಲೆ: ಮಾರ್ಚ್ 22ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ
ಸೋಮವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರತೀಯ ರೂಪಾಯಿಯಲ್ಲಿ ಒಂದು ಗ್ರಾಂ 4030 ರೂ. ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಅನಿರೀಕ್ಷಿತ ಬದಲಾವಣೆ ಇಲ್ಲದಿದ್ದರೆ ಚಿನ್ನದ ಬೆಲೆ ಗ್ರಾಂ 4 ಸಾವಿರಕ್ಕೆ ಇಳಿಯಲಿದೆ. ಒಂದು ವೇಳೆ ಹೆಚ್ಚಾದರೂ 4130 ಮೀರಿ ಹೆಚ್ಚಾಗುವುದಿಲ್ಲ. ಆಕಸ್ಮಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನಾದರೂ ಬದಲಾವಣೆ ಆದರೆ ಚಿನ್ನದ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಈ ವಾರ ಪೂರ್ತಿ ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ ಸಿಗಲಿದೆ ಎಂದು ಗೋಲ್ಡ್ ಗುರು ತಿಳಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಸೋಮವಾರ ಒಂದು ಗ್ರಾಂ ಚಿನ್ನದ ಬೆಲೆ 4618 ರೂ. (24 ಕ್ಯಾರೆಟ್ ) ಇದ್ದು, ಈ ವಾರಾಂತ್ಯದೊಳಗೆ 4575 ಕ್ಕೆ ಇಳಿಕೆಯಾಗಲಿದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕಸ್ಮಿಕ ಬದಲಾವಣೆ ಆಗಿ ಏರಿಕೆಯಾದರೆ ಒಂದು ಗ್ರಾಂ ಚಿನ್ನದ ಬೆಲೆ 4705 ಕ್ಕೆ ಏರಿಕೆಯಾಗಲಿದೆ. ಇನ್ನು ಚಿನ್ನದ ಬೆಲೆ ಇಳಿಕೆಯಾಗಲು ಮೂರು ಕಾರಣಗಳಿವೆ. ಅಮೆರಿಕಾದಲ್ಲಿ ಗ್ಲೋಬಲ್ ಈಲ್ಡ್ ಬಾಂಡ್ ಮೇಲಿನ ಹೂಡಿಕೆ ಜಾಸ್ತಿಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕೂಡ ಇಳಿಕೆಯಾಗುತ್ತಿದೆ. ಇದರ ಜತೆಗೆ ಡಾಲರ್ ಬೆಲೆ ಸ್ಥಿರವಾಗಿರುವುದರಿಂದ ಚಿನ್ನದ ಬೆಲೆ ಈ ವಾರ ಪೂರ್ತಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂಬುದು ಗೋಲ್ಡ್ ಗುರು ಅಭಿಪ್ರಾಯ.