LPG ಸಿಲಿಂಡರ್ ಬೆಲೆ ಸೇರಿದಂತೆ ಮೇ 1ರಿಂದ ಹಣಕಾಸಿಗೆ ಸಂಬಂಧಿಸಿದ ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ?
ಹಣಕಾಸು ವಿಚಾರದಲ್ಲೂ ಪ್ರತಿ ತಿಂಗಳ ಮೊದಲ ದಿನದಿಂದಲೇ ಹಲವು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಇದು ಇಡೀ ದೇಶಕ್ಕೆ ಅನ್ವಹಿಸುತ್ತದೆ. ಇದೀಗ ಏಪ್ರಿಲ್ 2024 ಮುಗಿಯುವ ಹಂತದಲ್ಲಿದ್ದು, ಮೇ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಮೇನಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಸೇರಿದಂತೆ ಏನೆಲ್ಲ ಬದಲಾವಣೆ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೇ 1ರಿಂದ ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ಸಂಬಂಧಿಸಿದ ಇಂತಹ ಅನೇಕ ಬದಲಾವಣೆಗಳು ಆಗಲಿವೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳಿಂದ ಜಿಎಸ್‌ಟಿವರೆಗೆ ಅನೇಕ ವಿಷಯಗಳು ಬದಲಾಗಲಿವೆ.

* ಎಲ್‌ಪಿಜಿ ಸಿಲಿಂಡರ್ ಬೆಲೆ: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಪ್ರತಿ ತಿಂಗಳ ಮೊದಲ ದಿನದಂದೇ ಬದಲಾವಣೆ ಆಗುತ್ತದೆ. ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ತೈಲ ಮಾರುಕಟ್ಟೆ ಕಂಪನಿಗಳು ನಿಗದಿಪಡಿಸುತ್ತವೆ. 14 ಕೆ.ಜಿ. ದೇಶೀಯ ಮತ್ತು 19 ಕೆ.ಜಿ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಕಂಪನಿಗಳು ನವದೆಹಲಿಯಲ್ಲಿ ಲಭ್ಯವಿರುವ ಗ್ಯಾಸ್ ಸಿಲಿಂಡರ್ ಬೆಲೆಯನ್ನು 2,253-2028 ರೂಪಾಯಿಗೆ ಇಳಿಕೆ ಮಾಡಿವೆ.
* ಬ್ಯಾಂಕ್ ನಿಯಮಗಳು: ಯೆಸ್ ಬ್ಯಾಂಕ್‌ನ ವೆಬ್ಸೈಟ್ ಪ್ರಕಾರ, ಉಳಿತಾಯ ಖಾತೆಗಳ ವಿವಿಧ ರೂಪಾಂತರಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ಬದಲಾವಣೆ ಮಾಡಲಾಗಿದೆ. ಅಕೌಂಟ್ ಪ್ರೊ ಮ್ಯಾಕ್ಸ್‌ನಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ 50,000 ರೂಪಾಯಿಗಳಾಗಿರುತ್ತದೆ. ಅದೇ ಸಮಯದಲ್ಲಿ, ಗರಿಷ್ಠ ಶುಲ್ಕಕ್ಕೆ 1,000 ರೂಪಾಯಿಗಳ ಮಿತಿಯನ್ನು ನಿಗದಿಪಡಿಸಲಾಗಿದೆ.
ಉಳಿತಾಯ ಖಾತೆ ಪ್ರೊ ಪ್ಲಸ್, ಎಸೆನ್ಸ್ ಎಸ್‌ಎ, ಯೆಸ್ ರೆಸ್ಪೆಕ್ಟ್ ಎಸ್‌ಎ ಇದೀಗ ಕನಿಷ್ಠ ಬ್ಯಾಲೆನ್ಸ್ 25,000 ಹೊಂದಿರುತ್ತದೆ. ಈ ಖಾತೆಗೆ ಶುಲ್ಕದ ಗರಿಷ್ಠ ಮಿತಿಯನ್ನು 750 ರೂಪಾಯಿಗೆ ನಿಗದಿಪಡಿಸಲಾಗಿದೆ. ಅಲ್ಲದೆ, ಉಳಿತಾಯ ಖಾತೆ ಪ್ರೊನಲ್ಲಿ ಕನಿಷ್ಠ ಬ್ಯಾಲೆನ್ಸ್ ಈಗ 10,000 ರೂಪಾಯಿ ಮತ್ತು ಶುಲ್ಕಗಳ ಗರಿಷ್ಠ ಮಿತಿಯನ್ನು 750 ರೂಪಾಯಿಗೆ ನಿಗದಿಪಡಿ ಮಾಡಲಾಗಿದ್ದು, ಈ ಬದಲಾವಣೆಗಳು ಮೇ 1 ರಿಂದ ಜಾರಿಯಾಗಲಿವೆ.
* ವಿಶೇಷ ಎಫ್‌ಡಿಗಳಲ್ಲಿ ಹೂಡಿಕೆ: ಎಚ್‌ಡಿಎಫ್‌ಸಿ ಬ್ಯಾಂಕ್ ನಡೆಸುತ್ತಿರುವ ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಇದು ವಿಶೇಷ ಹಿರಿಯ ನಾಗರಿಕರ ಆರೈಕೆ ಎಫ್ಡಿ ಯೋಜನೆ ಆಗಿದ್ದು, ಇದರಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳ ಪ್ರಯೋಜನವನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ಮೇ 2020ರಲ್ಲಿ ಆರಂಭಿಸಲಾಯಿತು. ಹೂಡಿಕೆಯ ಕೊನೆಯ ದಿನಾಂಕವನ್ನು ಮೇ 10, 2024ರವರೆಗೆ ವಿಸ್ತರಣೆ ಮಾಡಲಾಗಿದೆ.
* ಬ್ಯಾಂಕ್ ಶುಲ್ಕ ಹೆಚ್ಚಳ: ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಗೆ ಸಂಬಂಧಿಸಿದ ಸೇವಾ ಶುಲ್ಕದ ನಿಯಮಗಳನ್ನು ಸಹ ಬದಲಾವಣೆ ಮಾಡಿದೆ. ಇದೀಗ ಡೆಬಿಟ್ ಕಾರ್ಡ್‌ಗಳಿಗಾಗಿ ಗ್ರಾಹಕರು ನಗರ ಪ್ರದೇಶಗಳಲ್ಲಿ 200 ರೂಪಾಯಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 99 ರೂಪಾಯಿ ವಾರ್ಷಿಕ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಅಷ್ಟೇ ಅಲ್ಲದೆ, ಇದೀಗ ಬ್ಯಾಂಕ್‌ನ 25 ಪುಟಗಳ ಚೆಕ್ ಪುಸ್ತಕಕ್ಕೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದರೂ ಇದರ ನಂತರ, ಪ್ರತಿ ಚೆಕ್‌ಗೆ 4 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಈ ಬದಲಾವಣೆಗಳು 1 ಮೇ 2024ರಿಂದ ಜಾರಿಯಾಗಲಿವೆ ಎಂದು ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಡಿಡಿ ಅಥವಾ ಪಿಒ ರದ್ದುಗೊಳಿಸಿದರೆ ಅಥವಾ ನಕಲು ಮರುಮೌಲ್ಯೀಕರಿಸಿದರೆ, ಐಎಂಪಿಎಸ್ ಮೂಲಕ ಹಣವನ್ನು ವರ್ಗಾಯಿಸಲು 100 ಮತ್ತು 1,000 ರೂಪಾಯಿ ಪ್ರತಿ ವಹಿವಾಟಿಗೆ 2.50 ರೂಪಾಯಿ ಆಗುತ್ತದೆ.












Click it and Unblock the Notifications