'ಪ್ರಿಯಾಂಕಾಗಿಂತ ಸುಂದರಿ ಸ್ಟಾರ್ ಪ್ರಚಾರಕಿಯರು ಸಾಕಷ್ಟಿದ್ದಾರೆ'

Posted By:
Subscribe to Oneindia Kannada

ಭೋಪಾಲ್, ಜನವರಿ 25: ಪ್ರಿಯಾಂಕಾ ಗಾಂಧಿ ಅವರಿಗಿಂತ ಸುಂದರವಾದ ಮಹಿಳಾ ಪ್ರಚಾರಕಿಯರಿದ್ದಾರೆ ಎಂದು ಹೇಳುವ ಮೂಲಕ ಭಜರಂಗ ದಳದ ಸ್ಥಾಪಕ-ಅಧ್ಯಕ್ಷ ವಿನಯ್ ಕಟಿಯಾರ್ ವಿವಾದಕ್ಕೆ ಕಾರಣರಾಗಿದ್ದಾರೆ. "ಪ್ರಿಯಾಂಕಾ ಗಾಂಧಿಗಿಂತ ಒಳ್ಳೆ ಸ್ಟಾರ್ ಪ್ರಚಾರಕಿಯರು ಸಾಕಷ್ಟು ಇದ್ದಾರೆ" ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಉತ್ತರ ಪ್ರದೇಶದ ಬಿಜೆಪಿ ಮುಖಂಡ ಕೇಶವ್ ಪ್ರಸಾದ್ ಮೌರ್ಯ, ಉರಿಯುವ ಬೆಂಕಿಗೆ ತುಪ್ಪ ಹಾಕುವಂತೆ ಮತ್ತೊಂದು ಹೇಳಿಕೆ ನೀಡಿದ್ದಾರೆ. "ರಾಮ ಮಂದಿರದ ನಿರ್ಮಾಣವನ್ನು ಉತ್ತರ ಪ್ರದೇಶ ಚುನಾವಣೆ ನಂತರ ಮಾಡುತ್ತೇವೆ" ಎಂದು ಹೇಳಿದ್ದಾರೆ. "ರಾಮನ ಭವ್ಯ ಮಂದಿರವನ್ನು ಎರಡು ತಿಂಗಳಲ್ಲಿ ಮಾಡ್ತಿಲ್ಲ. ಈಗ ಚುನಾವಣೆ ನಡೆಯುತ್ತಿದೆ. ಆ ನಂತರ ಕಟ್ಟುತ್ತೇವೆ" ಎಂದು ಹೇಳಿದ್ದಾರೆ.[ಉಪ್ರ ಚುನಾವಣೆಯಲ್ಲಿ ಪ್ರಿಯಾಂಕಾ ಚಮತ್ಕಾರ ತೋರಬಲ್ಲರೆ?]

There are many beautiful campaigners than Priyanka Gandhi

ವಿನಯ್ ಕಟಿಯಾರ್ ಕೂಡ ರಾಮ ಮಂದಿರ ನಿರ್ಮಾಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣ ಹಳೇ ವಿಚಾರ. ರಾಮ ಜನ್ಮ ಸ್ಥಳದಲ್ಲಿ ಮಂದಿರ ನಿರ್ಮಾಣ ಆಗುವವರೆಗೆ ಈ ವಿಚಾರ ಪ್ರಸ್ತಾವ ಮಾಡುತ್ತಲೇ ಇರುತ್ತೇವೆ. ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಮಂದಿರ ನಿರ್ಮಾಣವನ್ನು ಚುನಾವಣೆ ವಿಷಯವಾಗಿ ಮಾಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There are many beautiful campaigners than Priyanka Gandhi. There is no dearth of such leaders in BJP, Bajarang dal founder and President Vinay Katiyar said in Uttar pradesh.
Please Wait while comments are loading...