ಅಂಬಾನಿಯನ್ನು ಹಿಂದಿಕ್ಕಿದ ಝಾಂಗ್ ಶಾನ್ಷನ್: ಏಷ್ಯಾದ ನಂಬರ್ 1 ಶ್ರೀಮಂತ

ನವದೆಹಲಿ, ಡಿಸೆಂಬರ್ 31: ದೀರ್ಘ ಸಮಯದವರೆಗೆ ಏಷ್ಯಾದ ಶ್ರೀಮಂತ ಪಟ್ಟದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಏಷ್ಯಾದ ಬಹುದೊಡ್ಡ ಉದ್ಯಮಿಗಳಾದ ಜಾಕ್ ಮಾ, ಅಂಬಾನಿಯನ್ನು ಹಿಂದಿಕ್ಕಿ "ಲೋನ್ ವುಲ್ಫ್" ಖ್ಯಾತಿಯ ಝಾಂಗ್ ಶಾನ್ಷನ್ ಅಗ್ರಸ್ಥಾನ ಪಡೆದಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ಸೂಚ್ಯಂಕದ ಪ್ರಕಾರ ಚೀನಾದ 66 ವರ್ಷದ ಝಾಂಗ್ ಏಷ್ಯಾದ ಖ್ಯಾತ ಉದ್ಯಮಿಗಳನ್ನು ಹಿಂದಿಕ್ಕಿ ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ವಿಶ್ವದ ಹನ್ನೊಂದನೇ ಅತಿದೊಡ್ಡ ಶ್ರೀಮಂತ ಎಂಬ ಸಾಧನೆ ಇವರ ಹೆಸರಿಗಿದೆ.

ಪತ್ರಿಕೋದ್ಯಮ, ಅಣಬೆ ಕೃಷಿ ಮತ್ತು ಹೆಲ್ತ್‌ ಕೇರ್ ಉದ್ಯಮಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಝಾಂಗ್ ಸಂಪತ್ತಿನ ನಿವ್ವಳ ಮೌಲ್ಯವು ಈ ವರ್ಷ ಬರೋಬ್ಬರಿ 70.9 ಬಿಲಿಯನ್ ಡಾಲರ್ ಏರಿಕೆಗೊಂಡು 77.8 ಬಿಲಿಯನ್ ಡಾಲರ್‌ಗೆ ತಲುಪಿದೆ.

The Lone Wolf Billionaire Zhong Shanshan Dethrones Ambani as Asia’s Richest

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಇತಿಹಾಸದಲ್ಲಿ ಯಾರೊಬ್ಬರೂ ಇಷ್ಟು ವೇಗವಾಗಿ ಒಂದೇ ವರ್ಷದಲ್ಲಿ ಸಂಪತ್ತನ್ನು ಇಷ್ಟರ ಮಟ್ಟಿಗೆ ಹೆಚ್ಚಿಸಿಲ್ಲ. ಈ ವರ್ಷ ಅಮೆಜಾನ್‌ ಜೆಫ್ ಬೇಜೋಸ್ ಮತ್ತು ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್‌ ಹೊರತುಪಡಿಸಿ ಅತಿ ಹೆಚ್ಚು ಸಂಪಾದನೆ ಮಾಡಿದ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಝಾಂಗ್ ಯಾವುದೇ ರಾಜಕೀಯದಲ್ಲಿ ಭಾಗಿಯಾಗಿಲ್ಲ ಮತ್ತು ಅವರ ವ್ಯಾಪಾರ ಹಿತಾಸಕ್ತಿಗಳು ಆಸ್ತಿ ಉದ್ಯಮವು ಇತರ ಯಾವುದೇ ಶ್ರೀಮಂತ ಕುಟುಂಬಗಳೊಂದಿಗೆ ಸಂಪರ್ಕ ಹೊಂದಿಲ್ಲ. ಅದಕ್ಕಾಗಿಯೇ ಅವರನ್ನು ಸ್ಥಳೀಯವಾಗಿ "ಲೋನ್ ವುಲ್ಫ್" ಎಂದು ಕರೆಯಲಾಗುತ್ತದೆ.

ಈ ವರ್ಷ ಅಸಾಧಾರಣ ಬೆಳವಣಿಗೆ ಸಾಧಿಸಿದ್ದ ಅಂಬಾನಿ ಫೇಸ್‌ಬುಕ್ ಸೇರಿದಂತೆ ಬಹುದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಅವರ ನಿವ್ವಳ ಸಂಪತ್ತು 18.3 ಬಿಲಿಯನ್ ಡಾಲರ್ ಏರಿಕೆಗೊಂಡು 76.9 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ.

ಅಂಬಾನಿ ಒಂದು ಹಂತದಲ್ಲಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದರೂ, ಅವರು ಭರವಸೆ ನೀಡಿದ ಡಿಜಿಟಲ್ ರೂಪಾಂತರವನ್ನು ತಲುಪಿಸಲು ಒತ್ತಡಕ್ಕೆ ಒಳಗಾಗಿದ್ದರಿಂದ ಅವರ ರಿಲಯನ್ಸ್‌ನ ಷೇರುಗಳು ಇಳಿಕೆಗೊಂಡವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+