ಮುಂಗಾರು ಲಾಸ್ಯ: ಗ್ರಾಮೀಣ ಮಾರುಕಟ್ಟೆಯಲ್ಲಿ ಜೀವಕಳೆ

ನವದೆಹಲಿ, ಸೆ.12: 'ಅಬ್ಬಾ ಈ ಪಾಟಿ ಮಳೆ ಬೀಳುತ್ತದಾ!?' ಎಂದು ಉದ್ಘರಿಸುವಷ್ಟು ಭರ್ಜರಿಯಾಗಿ ಈ ಬಾರಿ ಮಳೆಯಾಗಿದೆ. ಇಡೀ ದೇಶ ಕೃಷಿ ಕ್ಷೇತ್ರ ಸುಭಿಕ್ಷವಾಗಿ/ಸಮೃದ್ಧಿಯಾಗಿದೆ. ನಿರೀಕ್ಷೆಯನ್ನೂ ಮೀರಿ ಮಳೆಯಾಗಿರುವುದು ಕೇವಲ ಕೃಷ್ಟಿ ಕ್ಷೇತ್ರವನ್ನಷ್ಟೇ ಅಲ್ಲ ಇತರೆ ಕ್ಷೇತ್ರಗಳನ್ನೂ ಹಸಿರಾಗಿಸಿದೆ.

ಮುಖ್ಯವಾಗಿ ಗ್ರಾಮೀಣ ಭಾಗದ ಜನರ ಆದಾಯ ವೃದ್ಧಿಯಾಗತೊಡಗಿದೆ. ರೈತನ ಮೊಗದಲ್ಲಿ ಮಂದಹಾಸ ಮೂಡಿದ್ದು, ಧಾರಾಳವಾಗಿ ಖರ್ಚು ಮಾಡುವಷ್ಟು ಚೈತನ್ಯ ಪಡೆದಿದ್ದಾನೆ. ಇದರಿಂದ ಗ್ರಾಮಾಂತರದಲ್ಲಿ ಗ್ರಾಹಕ ವಸ್ತುಗಳ ಖರೀದಿ/ ಬಳಕೆ ವೃದ್ಧಿಸಲಿದೆ. ಇದು ವಾಹನ ಮತ್ತು ಗ್ರಾಹಕ ವಸ್ತುಗಳ ಕಂಪನಿಗಳಿಗೆ ಆಶಾದಾಯಕ ವಾತಾವರಣ ನಿರ್ಮಿಸಿ ಕೊಟ್ಟಿದೆ.

thanks-to-monsoon-rural-market-improving-consumer-companies-happy

ಅಧಿಕೃತ ವರದಿಗಳ ಪ್ರಕಾರ ಈ ಬಾರಿಯ ಮುಂಗಾರು ಸಕಾಲಿಕವಾಗಿ ಆಗಿದೆ. ಶೇ. 25ರಷ್ಟು ಹೆಚ್ಚೇ ಮಳೆಯಾಗಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಆದ ಲಾಭವೆಂದರೆ ಕೃಷಿ ಮಾಡುವ ಕ್ಷೇತ್ರದ ಗಾತ್ರ ಹೆಚ್ಚಾಗಿದೆ. ಶೇ. 9ರಷ್ಟು ಹೆಚ್ಚಿಗೆ ಕೃಷಿ ಕ್ಷೇತ್ರ ವಿಸ್ತರಣೆಯಾಗಿದ್ದು, ಹೆಚ್ಚುವರಿಯಾಗಿ 930 ಹೆಕ್ಟೇರಿನಲ್ಲಿ ಕೃಷಿ ಕೈಗೊಳ್ಳಬಹುದಾಗಿದೆ.

Q-3 ಮೇಲೆ ಭಾರಿ ಹೋಪ್: ಹೀಗೆ ಶೇ. 9ರಷ್ಟು ಕೃಷಿ ಕ್ಷೇತ್ರದ ಗಾತ್ರ ವಿಸ್ತರಣೆಯಾಗಿರುವುದರಿಂದ ಬೇಳೆ-ಕಾಳು, ಎಣ್ಣೆ ಬೀಜಗಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಾಗಲಿದೆ. ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮಾಂತರ ಭಾಗದಲ್ಲಿ ಗ್ರಾಹಕ ಮಾರುಕಟ್ಟೆ ವೃದ್ಧಿಸಿದೆ. ಆದರೆ ಗ್ರಾಮಾಂತರ ಮಾರುಕಟ್ಟೆ ಬೆಳವಣಿಗೆ ಇನ್ನೂ ಕಡಿಮೆಯಾಗಿದೆ.

ಗ್ರಾಮೀಣ ಭಾಗದಲ್ಲಿ ಗ್ರಾಹಕ ಮಾರುಕಟ್ಟೆ ವೃದ್ಧಿಸುತ್ತಿರುವುದರಿಂದ ಟ್ರಾಕ್ಟರ್ ಸೇರಿದಂತೆ ವಾಹನ ಕಂಪನಿಗಳು ಹಳ್ಳಿಗಾಡಿನತ್ತ ದಾಂಗುಡಿಯಿಡತೊಡಗಿವೆ. ಈ ಬಾರಿ ಹಬ್ಬದ ಋತುವಿನಲ್ಲಿ ನಗರ ಪ್ರದೇಶದ ಗ್ರಾಹಕರಿಗಿಂತ ಗ್ರಾಮೀಣರೇ ಹೆಚ್ಚು ಖರೀದಿ ಮಾಡುವ ಆಶಾದಾಯಕ ಪರಿಸ್ಥಿತಿಯಿದೆ. Again, Thanks to good Monsoon!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+