ಹೊಸ ವರ್ಷಕ್ಕೆ ಭಾರತದಲ್ಲಿ ಟೆಸ್ಲಾ ಕಾರುಗಳ ಮಾರಾಟ: ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ, ಡಿಸೆಂಬರ್ 28: ಜಗತ್ತಿನ ನಂಬರ್ ಒನ್ ಎಲೆಕ್ಟ್ರಿಕ್ ವಾಹನ ತಯಾರಕ ಎಲೋನ್‌ ಮಸ್ಕ್‌ರವರ ಟೆಸ್ಲಾ ಕಂಪನಿಯು 2021 ರ ಆರಂಭದಲ್ಲಿ ಭಾರತದಲ್ಲಿ ಕಾರುಗಳ ಮಾರಾಟವನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವರೂ ಆದ ನಿತಿನ್ ಗಡ್ಕರಿ ಟೆಸ್ಲಾ ಮುಂದಿನ ವರ್ಷದಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಎಕನಾಮಿಕ್ ಟೈಮ್ಸ್‌ ಆಟೋ ವರದಿಯು ಟೆಸ್ಲಾ ತನ್ನ ಮೊದಲ ಕಾರನ್ನು ಜೂನ್ 2021 ರೊಳಗೆ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿಸಿತ್ತು.

2021 ರಿಂದ ಟೆಸ್ಲಾ ತಮ್ಮ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವುದನ್ನು ಪ್ರಾರಂಭಿಸುತ್ತದೆ ಮತ್ತು ನಂತರ ಕಂಪನಿಯು ಪಡೆಯುವ ಪ್ರತಿಕ್ರಿಯೆಯ ಆಧಾರದ ಮೇಲೆ ಭಾರತದಲ್ಲಿ ಉತ್ಪಾದನಾ ಮತ್ತು ಜೋಡಣೆ ಮಾರ್ಗಗಳನ್ನು ಸ್ಥಾಪಿಸಲು ಪರಿಗಣಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದರು.

Tesla To Start Selling Cars In India Early Next Year: Nitin Gadkari Confirms

ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳ ಅಭಿಮಾನಿಗಳು ಸಾಕಷ್ಟಿದ್ದು, ಅದನ್ನು ಖರೀದಿಸಲು ಎದುರು ನೋಡುತ್ತಿದ್ದಾರೆ. ಎಲೋನ್ ಮಸ್ಕ್ ಅವರ ಪ್ರಕಾರ, ಸ್ಥಳೀಯವಾಗಿ ನಿಯಮಗಳು ಇಷ್ಟು ದಿನ ಕಾರು ಬಿಡುಗಡೆಗೆ ವಿಳಂಬಗೊಳಿಸಿದೆ ಎಂದಿದ್ದಾರೆ.

ಟೆಸ್ಲಾ ಈ ಹಿಂದೆ 2016ರಲ್ಲಿ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸಿತು. ಆದರೆ ಎಲೆಕ್ಟ್ರಿಕ್ ವಾಹನಗಳ ನೀತಿಯ ಅನಿಶ್ಚಿತತೆಯಿಂದಾಗಿ ಕಂಪನಿಯು ಕಾರುಗಳ ಬಿಡುಗಡೆಯನ್ನು ಮುಂದೂಡಿತು. ಆದರೆ ಈಗ ಮತ್ತೆ ನಾಲ್ಕು ವರ್ಷಗಳ ನಂತರ ಕಂಪನಿಯು ತನ್ನ ಬುಕಿಂಗ್ ಪ್ರಾರಂಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+