17ರ ಹರೆಯಕ್ಕೆ ಕಾಲಿಟ್ಟ ಗೂಗಲ್ ಗೆ ವಿಶ್ ಮಾಡಿ
ಸೆಪ್ಟೆಂಬರ್ 4ಕ್ಕೆ ಗೂಗಲ್ 17ರ ಹರೆಯಕ್ಕೆ ಕಾಲಿಟ್ಟಿದೆ. ಇದೀಗ ಹರೆಯದ ಸಂಭ್ರಮದಲ್ಲಿರುವ ಗೂಗಲ್ ತನ್ನ ಲೋಗೊವನ್ನು ಇತ್ತೀಚಿಗೆ ಬದಲಿಸಿಕೊಂಡಿದೆ. ಗೂಗಲ್ ಲೋಗೊ ಬದಲಾಗಿರುವುದು ಒಮ್ಮೆ ಗಡಿಬಿಡಿಯಲ್ಲಿ ನೋಡಿದರೆ ಗಮನಕ್ಕೆ ಬರುವುದಿಲ್ಲಾ ತಾಳ್ಮೆಯಿಂದ ನೋಡಿದರೆ ಮಾತ್ರ ಗಮನಕ್ಕೆ ಬರುವಂತೆ ನಾಜೂಕಾಗಿ ಲೋಗೊ ಬದಲಾವಣೆ ಮಾಡಿದೆ.
ಇತ್ತೀಚಿಗೆ ಇಂಗ್ಲೀಷ ವರ್ಣ ಮಾಲೆಯ 26 ಅಕ್ಷರಗಳ ಕ್ರಮದಲ್ಲಿ ತನ್ನ ಕಂಪನಿಗಳನ್ನು ಪರಿಚಯಿಸಿದೆ. ಆಲ್ಫಾಬೆಟ್ ಅಡಿಯಲ್ಲಿ ಈಗ ಸರ್ಚ್ ಇಂಜಿನ್ ಗೂಗಲ್ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಮೂಲದ ಸುಂದರ್ ಪಿಚ್ಚೈ ಗೂಗಲ್ ನ ನಿರ್ವಾಹಕ
ಗೂಗಲ್ ಒಂದು ಸರ್ಚ್ ಇಂಜಿನ್ ಮಾತ್ರವೇ ಅಥವಾ ಅದೊಂದು ಕಂಪನಿಯೇ. ಇವುಗಳಿಗೆ ಉತ್ತರ ಬೇಕೆಂದರು ನೀವು ಮೊರೆ ಹೊಗಬೇಕಾಗಿದ್ದು ಕೂಡ ಗೂಗಲ್ ಸರ್ಚ್ ಇಂಜಿನ್‌ಗೆ. ಯಾಕೆಂದರೆ ಅದು ಕೊಟ್ಟಷ್ಟು ಮಾಹಿತಿಯನ್ನು ಬೇರಾವುದೇ ಸರ್ಚ್ ಇಂಜಿನ್ ನೀಡುವುದಿಲ್ಲಾ. ನೀವು ಅಂತರಜಾಲದಲ್ಲಿ ಯೂಟ್ಯುಬ್, ಜಿಮೇಲ್, ಆರ್ಕುಟ್, ಗೂಗಲ್ ಮ್ಯಾಪ್ ಇವುಗಳನ್ನೆಲ್ಲಾ ಬಳಸಲು ಗೂಗಲ್ ಅತೀ ಅಗತ್ಯ.

ಗೂಗಲ್ ಎಂದು ಹೆಸರಿನ ಮಾಹಿತಿ: 1996ರಲ್ಲಿ ಇದ್ದ ಅಂತರಜಾಲದ ಸರ್ಚಇಂಜಿನ್ ಒಂದರಿಂದ ಸ್ಪೂರ್ತಿ ಪಡೆದು ಹುಟ್ಟಿದ್ದೆ ಗೂಗಲ್, ಇದರ ಮೊದಲ ಹೆಸರು ಬ್ಯಾಕ್ ರಬ್ ಎಂದು,
ಮೊದಲಿಗೆ ಗೂಗಲ್ ಎಂಬ ಪದವೇ ಇರಲ್ಲಿಲ್ಲಾ, ಗೂಗೊಲ್ ಎಂಬ ಬದವನ್ನು ಕೊಂಚ ಬದಲಿಸಿ ಗೂಗಲ್ ಎಂದು ಹೆಸರಿಸಲಾಯಿತು. ಗೂಗಲ್ ಎಂದರೆ 1 ಅಂಕೆಯ ಮುಂದೆ ನೂರು ಸೊನ್ನೆಗಳು ಎಂದು ಅರ್ಥ. ಈ ಪದ 2003ರಲ್ಲಿ ಆಕ್ಸ್ ಫರ್ಡ್ ಡಿಕ್ಷನರಿಯಲ್ಲೂ ಸೇರಿಕೊಂಡಿದೆ.
ಮಾಹಿತಿ ಕಣಜ ಈ ಗೂಗಲ್: ಜಗತ್ತಿನ ಯಾವುದೇ ವಿಷಯದ ಬಗ್ಗೆ ಗೂಗಲ್ ನಿಮಗೆ ಮಾಹಿತಿ ನೀಡುತ್ತದೆ. ಇತಿಹಾಸ, ಗಣಿತ ಅಥವ ಇನ್ಯಾವುದೇ ವಿಷಯವಿದ್ದರು ಕೂಡ ಗೂಗಲ್ ಕ್ಷಣಾರ್ಧದಲ್ಲಿ ನೀವು ಬಯಸಿದ್ದನ್ನು ನೀಡುತ್ತದೆ. ಆದರೆ ನೀಡಿದ ಎಲ್ಲಾ ಮಾಹಿತಿ ನಿಖರವಾಗಿರುವುದಿಲ್ಲಾ. ಕೇಲವು ಅಂಕಿ ಸಂಖ್ಯೆಗಳು ತಪ್ಪು ನೀಡಿದರು ಅದು ಸತ್ಯಕ್ಕೆ ಸನಿಹವಾಗಿರುತ್ತದೆ. ಇನ್ನು ಹಲವಾರು ಸರ್ಚ್ ಇಂಜಿನ್ ಇದ್ದರು ಕೂಡ ಗೂಗಲ್ ಹತ್ತಿರ ಇರುವ ಡಾಟಾ ಯಾರ ಹತ್ತರವು ಇಲ್ಲಾ.
4 September 1998. Google was founded by Larry Page and Sergey Brin, two students at Stanford University,USA. pic.twitter.com/Z5MmSpTKMI
— Prof.Frank McDonough (@FXMC1957) September 4, 2015 ಅಂದ ಹಾಗೇ ನಮಗೆಲ್ಲಾ ಮಾಹಿತಿ ನಿಡುವ ಗೂಗಲ ಉದ್ಯೋಗಿಗಳ ಸಂಖ್ಯೆ ಸುಮಾರು 50,000 ಕ್ಕಿಂತ ಹೆಚ್ಚು. ಆದಾಯ ಕಳೆದ ವರ್ಷ 91 ಸಾವಿರ ಕೋಟಿ. ಇದೆಲ್ಲವನ್ನು ಓದಿ ಇದನ್ನು ಕೂಡ ನೀವು ಗೂಗಲನಲ್ಲೆ ಹುಡುಕುವುದಕ್ಕಿಂತ ಮುಂಚೆ ಜನ್ಮದಿನದ ಶುಭಾಶಯ ಹೇಳಿ ಬಿಡಿ ಗೂಗಲ್‌ಗೆ.












Click it and Unblock the Notifications