ಟಿಸಿಎಸ್ ಕಚೇರಿ ಬಂದ್, 2 ಸಾವಿರ ಉದ್ಯೋಗಿಗಳಿಗೆ ಕೊಕ್

Posted By:
Subscribe to Oneindia Kannada

ಲಕ್ನೋ, ಜುಲೈ 13 : ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆ ತನ್ನ ಲಕ್ನೋ ಘಟಕದ ಬಾಗಿಲು ಮುಚ್ಚುತ್ತಿದೆ.
ಕಳೆದ 33 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿ ಬಂದ್ ಆಗಲಿರುವ ಸುದ್ದಿ ಹೊರ ಬಂದಿದೆ.

ಲಕ್ನೋ ಘಟಕ ಬೇರೆಡೆಗೆ ಶಿಫ್ಟ್ ಆಗಲಿದ್ದು, ಇದರಿಂದ ಸುಮಾರು 2,000 ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈ ಪೈಕಿ ಶೇ 50ಕ್ಕೂ ಅಧಿಕ ಮಹಿಳಾ ಉದ್ಯೋಗಿಗಳಿದ್ದಾರೆ.

TCS to wind up Lucknow operations, 2,000 IT professionals stare at crisis

ಈ ವರ್ಷಾಂತ್ಯಕ್ಕೆ ಲಕ್ನೋ ಕಚೇರಿ ಸಂಪೂರ್ಣ ಬಂದ್ ಆಗಲಿದೆ. ಹಾಲಿ ಉದ್ಯೋಗಿಗಳು ಬೇರೆ ಕಡೆ ಕೆಲಸ ನೋಡಿಕೊಳ್ಳಬಹುದು ಎಂಬ ಅಘೋಷಿತ ಸಂದೇಶ ಎಲ್ಲರಿಗೂ ತಲುಪಿದೆ.

ಹಲವಾರು ಉದ್ಯೋಗಿಗಳು ಈಗಾಗಲೇ ಈ ಬಗ್ಗೆ ಆತಂಕಗೊಂಡು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೆರವು ಕೋರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಮಧ್ಯಸ್ಥಿಕೆ ನಡೆಸಿ ಮಾತುಕತೆ ಮಾಡಿ ಎಂದು ಮನವಿ ಸಲ್ಲಿಸಿದ್ದಾರೆ. ಕೆಲವರು ಪ್ರಧಾನಿ ಮೋದಿ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Consultancy Services (TCS) is preparing to bid farewell to Lucknow, according to staff members at the centre.The TCS office in Lucknow has been in function for the last 33 years.At least 2,000 employees, of whom 50% are women, will be affected by this shift.
Please Wait while comments are loading...