ಹೊಸ ವರ್ಷಕ್ಕೆ ಟಿಸಿಎಸ್ ಉದ್ಯೋಗಿಗಳಿಗೆ ಬಂಪರ್‌, ಭಾರಿ ವೇತನ ಹೆಚ್ಚಳ

ಬೆಂಗಳೂರು, ಡಿಸೆಂಬರ್‌ 29: ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ತನ್ನ 70% ಉದ್ಯೋಗಿಗಳಿಗೆ 20% ಕ್ರಿಸ್‌ಮಸ್ ವೇತನ ಹೆಚ್ಚಳವನ್ನು ನೀಡುತ್ತಿದೆ. ಉಳಿದ ಉದ್ಯೋಗಿಗಳು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನ ಹೆಚ್ಚಳವನ್ನು ಪಡೆಯುತ್ತಾರೆ ಎಂದು ತಿಳಿಸಿದೆ.

ಸಂಸ್ಥೆಯಲ್ಲಿ ಸುಮಾರು 6 ಲಕ್ಷ ಉದ್ಯೋಗಿಗಳಿದ್ದು, ನೌಕರರು ತಮ್ಮ ಸಂಬಳದ 10ರಿಂದ 20% ಸರಾಸರಿ ವೇತನವನ್ನು ಹೆಚ್ಚಳವನ್ನು ಪಡೆಯುತ್ತಾರೆ. ಇದರೊಂದಿಗೆ ಟಿಸಿಎಸ್‌ 2022ರ ಹಣಕಾಸು ವರ್ಷಕ್ಕೆ 4 ಲಕ್ಷ ಉದ್ಯೋಗಿಗಳಿಗೆ 100% ವೇರಿಯಬಲ್ ವೇತನವನ್ನು ಬಿಡುಗಡೆ ಮಾಡಲು ಯೋಜಿಸಿದೆ.

ಟಾಟಾ ಕನ್ಸಲ್‌ಟೆನ್ಸಿ ಸವೀಸ್‌ ಕಂಪೆನಿ ಉದ್ಯೋಗಿಗಳಿಗೆ ಶೇ. 100ರಷ್ಟು ಸರಾಸರಿ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಹಿಂದಿನ ವರದಿಗಳ ಪ್ರಕಾರ ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 8% ರಷ್ಟು ಏರಿಕೆಯಾಗಿದ್ದು, 10,000 ಕೋಟಿಗಳಿಗಿಂತ ಹೆಚ್ಚು ಲಾಭ ಪಡೆದಿದೆ ಎನ್ನಲಾಗಿದೆ. ಕಂಪನಿಯ ತ್ರೈಮಾಸಿಕ ಲಾಭದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ನಂತರ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕರ್ ಈ ಘೋಷಣೆ ಮಾಡಿದ್ದಾರೆ.

TCS employees get huge pay hike form the new year

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ತನ್ನ 70% ಉದ್ಯೋಗಿಗಳಿಗೆ ಎಲ್ಲಾ ಸರಾಸರಿ ವೇತನ ಪಾವತಿಸಲಿದೆ. ಉದ್ಯೋಗಿಗಳ ಕಾರ್ಯಕ್ಷಮತೆ ಆಧಾರಿತ ಸಂಭಾವನೆಯು ಕಾರ್ಮಿಕರ ವೇತನದ 30% ಹೆಚ್ಚಳವಾಗುತ್ತದೆ ಎಂದು ಅವರು ಹೇಳಿದರು. ಮೊದಲ ತ್ರೈಮಾಸಿಕದಲ್ಲಿ ಟಿಸಿಎಸ್‌, ವಿಪ್ರೋ ಮತ್ತು ಇನ್ಫೋಸಿಸ್‌ ಎಲ್ಲಾ ತಮ್ಮ ಉದ್ಯೋಗಿಗಳಿಗೆ ಸರಾಸರಿ ವೇತನವನ್ನು ಕಡಿಮೆಗೊಳಿಸಿದವು. ವಿಪ್ರೋದಲ್ಲಿ ಆರಂಭಿಕ ಮಟ್ಟದ ಉದ್ಯೋಗಿಗಳು ಹಿರಿಯ ಸಿಬ್ಬಂದಿ ಪಡೆಯುವ ಸರಾಸರಿ ವೇತನದ 70% ಅನ್ನು ಮಾತ್ರ ಪಡೆದರು. ಇನ್ಫೋಸಿಸ್ ಇದನ್ನು ಅನುಸರಿಸಿತು.

ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಟಿಸಿಎಸ್‌ 20,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. 2022 ರ ಒಟ್ಟು ಹೊಸ ನೇಮಕಗಳ ಸಂಖ್ಯೆಯನ್ನು 35,000 ಆಗಿದೆ. ಈ ಹಿಂದೆ ಸಂಸ್ಥೆಯು 40,000 ಹೊಸ ಪದವೀಧರರನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಿತ್ತು. 10,000 ದಿಂದ 12,000 ಹೊಸ ಉದ್ಯೋಗಿಗಳನ್ನು ಟಿಸಿಎಸ್ ನೇಮಿಸಿಕೊಳ್ಳಲಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಮಾನವ ಸಂಪನ್ಮೂಲ ನಿರ್ದೇಶಕ ಲಕ್ಕರ್ ಪ್ರಕಾರ ಮೂರನೇ ತ್ರೈಮಾಸಿಕದ ನಂತರ ಹೊಸ ನೇಮಕಾತಿ ನಡೆಯಲಿದೆ ಎಂದು ತಿಳಿಸಿದ್ದಾರೆ.

TCS employees get huge pay hike form the new year

ಐಟಿ ವಲಯದಲ್ಲಿ ಸ್ಪರ್ಧಾತ್ಮಕತೆ ದರ ಇಳಿಮುಖವಾಗಿರುವುದರಿಂದ ನೇಮಕಾತಿ ಕುಂಠಿತವಾಗಿದೆ. ಕಂಪನಿಯ ಸರಾಸರಿ ಸ್ಪರ್ಧಾತ್ಮಕತೆ ದರವು 19.7% ಆಗಿದೆ. ಆದರೆ ಇದು ಹಿಂದೆ 21.5% ಆಗಿತ್ತು. ಒಟ್ಟಾರೆಯಾಗಿ ಐಟಿ ಕ್ಷೇತ್ರವು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹೆಣಗಾಡುತ್ತಿರುವ ಹೊರತಾಗಿಯೂ ಟಿಸಿಎಸ್ ಹೊಸ ಪದವೀಧರರನ್ನು ಹುಡುಕುತ್ತಿದೆ. ವಹಿವಾಟು ದರವು ಎರಡನೇ ತ್ರೈಮಾಸಿಕದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+