ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ಸಿಇಒ ಚಂದ್ರ ಸಂಬಳ ಶೇ 14ರಷ್ಟು ಏರಿಕೆ

By Mahesh
|
Google Oneindia Kannada News

ಬೆಂಗಳೂರು, ಜೂ.09: ದೇಶದ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್ ಚಂದ್ರಶೇಖರನ್ ಅವರ ಸಂಬಳದ ಪ್ಯಾಕೇಜ್ ಶೇ 14ರಷ್ಟು ಏರಿಕೆಯಾಗಿದೆ. 2014-15 ಅವರ ಆರ್ಥಿಕ ವರ್ಷದಲ್ಲಿ ಚಂದ್ರಶೇಖರನ್ ಅವರ ಸಂಬಳ ಶೇ 14ರಷ್ಟು ಏರಿಕೆಯಾಗಿ ವಾರ್ಷಿಕ ವೇತನ 21.28ಕೋಟಿ ರು ಆಗಿದೆ.

ಟಿಸಿಎಸ್ ಸಂಸ್ಥೆ ತನ್ನ ಸಿಇಒ ಸೇರಿದಂತೆ ಉದ್ಯೋಗಿಗಳ ವೇತನವನ್ನು ಶೇ.14ರಷ್ಟು ಹೆಚ್ಚಳ ಮಾಡಿತ್ತು. ಚಂದ್ರಶೇಖರನ್ ಅವರು 2013-14ರ ಸಾಲಿನ ಆರ್ಥಿಕ ವರ್ಷ ಅವಧಿಯಲ್ಲಿ ಚಂದ್ರಶೇಖರನ್ ಅವರು 18.68 ಕೋಟಿ ವೇತನ ಪಡೆಯುತ್ತಿದ್ದರು. ಈಗ 21.28 ಕೋಟಿ ರುಗೇರಿದೆ. [ಟಿಸಿಎಸ್ ಉದ್ಯೋಗಿಗಳಿಗೆ ಬಂಪರ್ ಬೋನಸ್]

TCS chief Chandrasekaran's salary jumps 14% to Rs 21.2 crore

ಟಿಸಿಎಸ್ ಸಂಸ್ಥೆ ವಾರ್ಷಿಕ ಆದಾಯ ವರದಿಯ ಪ್ರಕಾರ, ಎನ್ ಚಂದ್ರಶೇಖರನ್ ಅವರು ವೇತನದ ಕಟ್ ಆಫ್ ಹೀಗಿದೆ: ಸಂಬಳ- 1.79 ಕೋಟಿ ರು, ಇನಾಮು ಮೌಲ್ಯದ ಅಡಿಯಲ್ಲಿ 2.62 ಕೋಟಿ ರು ಮತ್ತು ಸಂಸ್ಥೆ ನೀಡುವ ವಿವಿಧ ವಿಭಾಗದ ಕಮಿಷನ್ ಅಡಿಯಲ್ಲಿ 16 ಕೋಟಿ ರು. ಪಡೆದಿದ್ದಾರೆ. ಇತರೆ ಭತ್ಯೆಗಳ ಅಡಿಯಲ್ಲಿ 86.61 ಲಕ್ಷ ಪಡೆದಿದ್ದಾರೆ. [ಮೈಕ್ರೋಸಾಫ್ಟ್ ಸಿಇಒ ಸತ್ಯ ಸಂಬಳವೇ ಅಧಿಕ!]

ಇದಲ್ಲದೆ ಚಂದ್ರಶೇಖರನ್ ಅವರು 88,528 ಷೇರುಗಳನ್ನು ಟಾಟಾ ಸಮೂಹದಲ್ಲಿ ಹೊಂದಿದ್ದಾರೆ ಎಂದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ. ಟಿಸಿಎಸ್ ಸಿಎಫ್ ಒ ರಾಜೇಶ್ ಗೋಪಿನಾಥನ್ ಸಂಬಳದ ಪ್ಯಾಕೇಜ್ (ಟೇಕ್ ಹೋಮ್) 2.14 ಕೋಟಿ ರು ನಷ್ಟಿದೆ. [ವಿಶಾಲ್ ಸಿಕ್ಕಾ ಸಂಬಳ ವಿವರ]

TCS chief Chandrasekaran's salary jumps 14% to Rs 21.2 crore

2014ರ ಜೂನ್ 14ರಂದು ಇನ್ಫೋಸಿಸ್ ನಿರ್ದೇಶಕರಾಗಿ ನೇಮಕಗೊಂಡಿದ್ದ ವಿಶಾಲ್ ಸಿಕ್ಕಾ ಅವರ ವೇತನ ಕೂಡ ಸುಮಾರು ಶೇ.33 ರಷ್ಟು ಏರಿಕೆಯಾಗಿ 4.56 ಕೋಟಿ ರು ಪಡೆಯುತಿದ್ದಾರೆ. ವಿಪ್ರೋ ಸಂಸ್ಥೆ ಸಿಇಒ ಟಿಕೆ ಕುರಿಯನ್ ಅವರು ಶೇ 33ರಷ್ಟು ಏರಿಕೆ ಪಡೆದು 1.46 ಮಿಲಿಯನ್ ಡಾಲರ್ (9.3 ಕೋಟಿ ರು) ಪಡೆದಿದ್ದಾರೆ. (ಪಿಟಿಐ)
English summary
N Chandrasekaran, the CEO and Managing Director of Tata Consultancy Services (TCS), saw his salary package going up by about 14 per cent to Rs 21.28 crore in the 2014-15 fiscal from the year-ago period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X