ಟಾಟಾ ಸಂಸ್ಥೆಗೆ ರತನ್ ರೀ ಎಂಟ್ರಿ, ಚೇರ್ಮನ್ ಮಿಸ್ತ್ರಿ ಔಟ್!

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 24: ಟಾಟಾ ಸಮೂಹ ಸಂಸ್ಥೆಯ ಚೇರ್ಮನ್ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದು ಹಾಕಲಾಗಿದೆ. ಮಧ್ಯಂತರ ಚೇರ್ಮನ್ ಆಗಿ ರತನ್ ಟಾಟಾ ಅವರು ರೀ ಎಂಟ್ರಿ ಕೊಟ್ಟಿದ್ದಾರೆ.

ಟಾಟಾ ಸಮೂಹ ಸಂಸ್ಥೆ ನಿರ್ವಹಣೆ ಮಾಡುವ ಟಾಟಾ ಸನ್ಸ್ ಸೋಮವಾರ ನಡೆದ ಬೋರ್ಡ್ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ. ಹೊಸ ಚೇರ್ಮನ್ ಆಯ್ಕೆಯಾಗಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಹೊಸ ಆಯ್ಕೆ ಸಮಿತಿ ನಾಲ್ಕು ತಿಂಗಳೊಳಗೆ ಹೊಸ ಚೇರ್ಮನ್ ಆಯ್ಕೆ ಮಾಡಬೇಕಿದೆ.

Tata Sons removes Cyrus P. Mistry as Chairman Ratan Interim Chairman

ಸದ್ಯಕ್ಕೆ ಸಮಿತಿಯಲ್ಲಿ ರತನ್ ಟಾಟಾ, ವೇಣು ಶ್ರೀನಿವಾಸನ್, ಅಮಿತ್ ಚಂದ್ರ, ರೊನೆನ್ ಸೇನ್ ಹಾಗೂ ಲಾರ್ಡ್ ಕುಮಾರ್ ಭಟ್ಟಾಚಾರ್ಯ ಇದ್ದಾರೆ.

1996 ರಿಂದ 2006ರ ತನಕ ಟಾಟಾ ಸಂಸ್ಥೆಯ ಇತರೆ ಬೋರ್ಡ್ ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿರುವ ಮಿಸ್ತ್ರಿ ಅವರು 2012ರಲ್ಲೆ ದೇಶದ ಅತಿ ದೊಡ್ಡ ಖಾಸಗಿ ವಿದ್ಯುತ್ ಉತ್ಪಾದನಾ ಸಂಸ್ಥೆ ಚುಕ್ಕಾಣಿ ಹಿಡಿದಿದ್ದರು. ಟಾಟಾ ಪವರ್ ಸಂಸ್ಥೆ ಸುಮಾರು 6,899 ಮೆ,ವ್ಯಾ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tata Sons, the holding company of Tata Group, has announced that its Board has removed Cyrus P. Mistry as Chairman of Tata Sons. The Board named Ratan N. Tata as interim chairman
Please Wait while comments are loading...